Bangalore News:
ಚಾಲಕನೊಬ್ಬ ಬೀದಿ DOGಮೇಲೆ ಕಾರು ಹರಿಸಿರುವ ಘಟನೆ ಬೆಂಗಳೂರಿನ ಸಹಕಾರನಗರದಲ್ಲಿ ನಡೆದಿದೆ.ಬೀದಿ DOG ಮೇಲೆ ಕಾರು ಹರಿಸಿ ವಿಕೃತಿ ಮೆರೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜ.4 ರಂದು ಸಹಕಾರನಗರದ ಎಫ್ ಬ್ಲಾಕ್‌ನ 14ನೇ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದು, ದೀಪಕ್ ಧನಂಜಯ್ ಶೋಧನ್ ಎಂಬುವವರು ನೀಡಿದ ದೂರಿನ ಅನ್ವಯ ಆರೋಪಿ ಥಾರ್ ಕಾರು ಚಾಲಕನ ವಿರುದ್ಧ ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನೆಗೆ ಸ್ಥಳೀಯ ನಿವಾಸಿಗಳು, ಪ್ರಾಣಿ ಪ್ರಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರಾದ ದೀಪಕ್ ಧನಂಜಯ್ ಶೋಧನ್ ನೀಡಿದ ದೂರಿನ ಅನ್ವಯ ಜ.14 ರಂದು ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಜ.4ರ ರಾತ್ರಿ ವೇಗವಾಗಿ ಬಂದ ಥಾರ್ ಚಾಲಕ, ರಸ್ತೆಯಲ್ಲಿ ತಮ್ಮ ಪಾಡಿಗೆ ತಾವು ಮಲಗಿದ್ದ ನಾಯಿಮರಿಗಳತ್ತ ಕಾರು ನುಗ್ಗಿಸಿದ್ದಾನೆ. ಈ ವೇಳೆ ಕಾರಿನ ಚಕ್ರಕ್ಕೆ ಸಿಕ್ಕ DOGಯೊಂದು ಸ್ಥಳದಲ್ಲೇ ಒದ್ದಾಡಿ ಬಳಿಕ ಪಕ್ಕದ ಚರಂಡಿಯಲ್ಲಿ ಪ್ರಾಣಬಿಟ್ಟಿದೆ. DOGಗಳಿಗೆ ಊಟ ಹಾಕುತ್ತಿದ್ದ ಅಕ್ಕಪಕ್ಕದವರು ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದಾಗ ಥಾರ್ ಚಾಲಕನ ಕೃತ್ಯ ಬೆಳಕಿಗೆ ಬಂದಿದೆ.
Driver who drove car over sleeping dog: ಮಲಗಿದ್ದDOG ಮೇಲೆ ಕಾರು ಹತ್ತಿಸಿದ್ದ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಕರ್ನಾಟಕ ಪ್ರಾಣಿ ದಯಾ ಮಂಡಳಿ ಸದಸ್ಯ ಅನಿರುದ್ಧ ಎಂಬುವರು ನೀಡಿದ ದೂರಿನ ಮೇರೆಗೆ ಕಾರು ಚಾಲಕ ಮಂಜುನಾಥ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಸಂಬಂಧ ಜ.9ರಂದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಅನಿರುದ್ಧ ತಿಳಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ತಲಘಟ್ಟಪುರ ಪೊಲೀಸರು ವಿಚಾರಣೆಗೆ ಬರುವಂತೆ ಚಾಲಕನಿಗೆ ನೋಟಿಸ್ ಜಾರಿ ಮಾಡಿದ್ದರು.ಡಿ.31ರ ಸಂಜೆ ರಾಘವನಪಾಳ್ಯ ಬಳಿ ಮಲಗಿದ್ದ DOG ಮೇಲೆ ಉದ್ದೇಶಪೂರ್ವಕವಾಗಿ ಕಾರು ಹತ್ತಿಸಿದ ಪರಿಣಾಮ ಸ್ಥಳದಲ್ಲೇ DOG ಮೃತಪಟ್ಟಿದ್ದು, ಬಳಿಕ ಮೃತದೇಹವನ್ನ ಚೀಲದಲ್ಲಿಟ್ಟು ಸ್ಥಳಾಂತರಿಸಿದ್ದರು.
ಇದನ್ನು ಓದಿರಿ : QATAR TALKS ON GAZA TRUCE : ಗಾಜಾ ಕದನ ವಿರಾಮ ಮಾತುಕತೆ