Bhubaneswar (Odisha) News :
ಪುರಿ ಜಗನ್ನಾಥ ದೇವಸ್ಥಾನದ ಮೇಲೆ ಡ್ರೋನ್ ಹಾರಾಟ ನಡೆದಿದ್ದು, ಭದ್ರತಾ ಆತಂಕ ಉಂಟು ಮಾಡಿದೆ. ಇದರಿಂದ ಪೊಲೀಸರು ಇದರ ಹಿಂದಿನ ಕಾರಣ ತಿಳಿಯಲು ತನಿಖೆ ಆರಂಭಿಸಿದ್ದಾರೆ. ಭಾನುವಾರ ಮುಂಜಾನೆ 4:10 ರ ಸುಮಾರಿಗೆ ದೇವಸ್ಥಾನದ ಮೇಲೆ ಡ್ರೋನ್ ಹಾರಾಡಿದೆ. ಸುಮಾರು ಅರ್ಧ ಗಂಟೆ ಕಾಲ ದೇಗುಲದ ಸುತ್ತಲೂ ಸುಳಿದಾಡಿದೆ. ದೇವಸ್ಥಾನದ ಸುತ್ತಲೂ ಹಾರಾಟ ನಿಷೇಧ ವಲಯ (no flying area) ರಚಿಸಲಾಗಿದೆ. ಹೀಗಾಗಿ ಈ ನಿಯಮ ಉಲ್ಲಂಘನೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ವಿಶ್ವಪ್ರಸಿದ್ಧ ಪುರಿಯ ಜಗನ್ನಾಥ ದೇವಾಲಯದ ಮೇಲೆ ಡ್ರೋನ್ ಹಾರಾಟ ನಿಷೇಧವಿದ್ದರೂ, ಅನಾಮಿಕ ವ್ಯಕ್ತಿಯೋರ್ವ ಈ ನಿಯಮ ಉಲ್ಲಂಘಿಸಿದ್ದಾನೆ. ಇದು ದೇವಸ್ಥಾನದ ಭದ್ರತೆಗೆ ಚ್ಯುತಿ ತಂದಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
Formation of team for drone detection:
ಈ ಘಟನೆ ಕುರಿತಂತೆ ತನಿಖೆ ನಡೆಸಲು ಪುರಿಯ ಪೊಲೀಸ್ ಅಧಿಕಾರಿಗಳು ವಿವಿಧ ತಂಡಗಳನ್ನು ರಚಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್, “ದೇವಸ್ಥಾನದ ಮೇಲೆ ಡ್ರೋನ್ ಹಾರಿಸುವುದು ಕಾನೂನುಬಾಹಿರ ಮತ್ತು ಸ್ವೀಕಾರಾರ್ಹವಲ್ಲ. ಭದ್ರತೆಯನ್ನು ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಹೇಳಿದರು. “ಪುರಿ ಎಸ್ಪಿ ನೇತೃತ್ವದಲ್ಲಿ ತಂಡಗಳನ್ನು ರಚಿಸಿದ್ದಾರೆ. ಘಟನೆಯ ತನಿಖೆ ಆರಂಭಿಸಲಾಗಿದೆ. ಸಂಬಂಧಪಟ್ಟ ವ್ಯಕ್ತಿಯನ್ನು ಗುರುತಿಸಲಾಗುವುದು ಮತ್ತು ಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗುವುದು” ಎಂದು ಅವರು ತಿಳಿಸಿದರು.
Did the vlogger fly the drone?
ಭವಿಷ್ಯದಲ್ಲಿ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು. ದೇವಸ್ಥಾನದ ಸುತ್ತಲಿನ ನಾಲ್ಕು ಕಾವಲು ಗೋಪುರಗಳಲ್ಲಿ 24 ಗಂಟೆಯೂ ಪೊಲೀಸ್ ಸಿಬ್ಬಂದಿ ನಿಯೋಜಿಸಲು ನಿರ್ಣಯಿಸಲಾಗಿದೆ. ಯಾರೋ ವ್ಲಾಗರ್ ಡ್ರೋನ್ ಅನ್ನು ದೇವಸ್ಥಾನದ ಮೇಲೆ ಹಾರಿಸಿರಬಹುದು ಎಂದು ಶಂಕಿಸಲಾಗಿದೆ. ಆದಾಗ್ಯೂ, ಭದ್ರತೆಯ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಇದನ್ನು ಓದಿರಿ : COCONUT PRICE : ಗಗನಕ್ಕೇರಿದ ತೆಂಗಿನಕಾಯಿ ದರ