spot_img
spot_img

ಮತ್ತೆ ಹೃದಯ ಗೆದ್ದ ಡ್ರೋನ್ ಪ್ರತಾಪ್‌.. ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಆದರೆ ಇದೀಗ ಬಿಗ್​ಬಾಸ್​ ಸೀನಸ್​ 10ರ ಮಾಜಿ ಸ್ಪರ್ಧಿಯಾಗಿರೋ ಡ್ರೋನ್​​ ಪ್ರತಾಪ್​ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಬಿಗ್​ಬಾಸ್ ರಿಯಾಲಿಟಿ ಶೋ​ ಸ್ಪರ್ಧಿಗಳ ಬದುಕಿಗೆ ಹೊಸ ಸ್ಪರ್ಶ ಹಾಗೂ ಭರವಸೆ ನೀಡುತ್ತೆ. ಒಂದು ಶೋನಿಂದ ಒಂದು ಕುಟುಂಬದ ದಿಕ್ಕೆ ಬದಲಾಗಿದೆ. ಆ ವ್ಯಕ್ತಿ ಆ ಕುಟುಂಬದಿಂದ ಮತ್ತೊಂದಿಷ್ಟು ಕುಟುಂಬದಲ್ಲಿ ಹೊಸ ಆಶಾ ಕಿರಣ ಮೂಡಿದೆ. ಇದಕ್ಕೆಲ್ಲಾ ಮುಖ್ಯ ಕಾರಣವೇ ಡ್ರೋನ್​ ಪ್ರತಾಪ್​. ಬೆಟ್ಟದಷ್ಟು ನೆಗೆಟಿವಿಟಿಯನ್ನ ಹೊತ್ತು ಬಿಗ್​​ಬಾಸ್​ ಮನೆಗೆ ಕಾಲಿಟ್ಟಿದ್ದ ಡ್ರೋನ್​ ಪ್ರತಾಪ್​, ತಮ್ಮ ವಿಭಿನ್ನ ವ್ಯಕ್ತಿತ್ವದ ಮೂಲಕ ಜನರ ಅಭಿಪ್ರಾಯಗಳನ್ನ ಬದಲಾಯಿಸಿದ್ದರು. ಮುಗ್ಧ ನಗುವಿನಿಂದ ಕರ್ನಾಟಕದ ಮನಸ್ಸು ಗೆದ್ದರು.

ತಪ್ಪು ಮಾಡದವ್ರು ಯಾರೋವ್ರೇ ತಪ್ಪೇ ಮಾಡದವ್ರ ಎಲ್ಲವ್ರೇ? ಅಂತಾ ಪ್ರತಿಯೊಬ್ಬರು ಪ್ರತಾಪ್​ ಅವರಿಗೆ ಬೆಂಬಲವಾಗಿ ನಿಂತು ಸ್ಫೂರ್ತಿ ತುಂಬಿದರು. ಜೊತೆಗೆ ಬಿಗ್​ಬಾಸ್​​ನಿಂದ ಬಂದ ಹಣದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಡ್ರೋನ್​ ಪ್ರತಾಪ್ ತಮ್ಮ ಹುಟ್ಟುಹಬ್ಬದಂದು ಒಂದು ನೂತನ ಕೆಲಸಕ್ಕೆ ಕೈ ಹಾಕಿದ್ದರು. ಅವರ ಹುಟ್ಟು ಹಬ್ಬದ ದಿನದಂದು ಯಾರಾದರೂ ಐದು ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಬೇಕು ಅಂತ ತೀರ್ಮಾನ ಮಾಡಿದ್ದರು.

 

View this post on Instagram

 

A post shared by Prathap N M (@droneprathap)

 

ಇದೀಗ ಕೊಟ್ಟ ಮಾತಿನಂತೆ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಅಜ್ಜಿಯೊಬ್ಬರಿಗೆ ಡ್ರೋನ್ ಪ್ರತಾಪ್ ಆಪರೇಷನ್ ಮಾಡಿಸಿದ್ದಾರೆ. ಬಳಿಕ ಅಜ್ಜಿಗೆ ಒಂದು ಮನೆ ಕಟ್ಟಿಸಿಕೊಡಲು ನಿರ್ಧರಿಸಿದ್ದಾರೆ. ಇದೇ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅದೆಷ್ಟೋ ನೆಟ್ಟಿಗರು, ಅಭಿಮಾನಿಗಳು ಕಾಮೆಂಟ್ಸ್​ ಮಾಡುವ ಮೂಲಕ ಟ್ರೋನ್​ ಪ್ರತಾಪ್​ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img

Related articles

MAHAKUMBH : ಆ ಅಘೋರಿ ಭವಿಷ್ಯವೇ ನಿಜವಾಯ್ತಾ?

MAHAKUMBH : ಉತ್ತರ ಪ್ರದೇಶದ ದೇವ ಪ್ರಯಾಗದಲ್ಲಿ MAHAKUMBH ನಡೆಯುತ್ತಿದೆ. ಕಳೆದ 30 ದಿನಗಳ ಅಂತರದಲ್ಲಿ 7 ಅಗ್ನಿ ದುರಂತ ಎದುರಾಗಿವೆ. ಈ ಹಿಂದೆ ಹೀಗೆ...

DARSHAN : ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ ದರ್ಶನ್ ಭಾವುಕ

Darshan News: ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ DARSHAN ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 48ನೇ ವರ್ಷಕ್ಕೆ ಕಾಲಿಟ್ಟ ದಾಸನಿಗೆ ಸ್ಯಾಂಡಲ್​ವುಡ್​ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು...

TULASI GABBARD : ಅಮೆರಿಕ ಗುಪ್ತಚರ ಇಲಾಖೆಯ ನೂತನ ಮುಖ್ಯಸ್ಥೆ

TULASI GABBARD : TULASI GABBARD​, ಈಗ ಅಮೆರಿಕಾದ ರಾಷ್ಟ್ರೀಯ ಗುಪ್ತಚರ ದಳ ನಿರ್ದೇಶನದ ನೂತನ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದಾರೆ. ಭಾರತದೊಂದಿಗೆ ಅವರಿಗಿರುವ ನಂಟಿನ ಬಗ್ಗೆಯೂ ಕೂಡ...

MATSYA 6000 : ಸಮುದ್ರ ಜಲಾಂತರ್ಗಾಮಿ ನೌಕೆಯ ಪರೀಕ್ಷೆ ಯಶಸ್ವಿ

Matsya 6000: ದೇಶದ ನಾಲ್ಕನೇ ತಲೆಮಾರಿನ ಆಳ ಸಮುದ್ರ ಜಲಾಂತರ್ಗಾಮಿ ನೌಕೆಯ ಪರೀಕ್ಷೆ ಪೂರ್ಣಗೊಂಡಿದ್ದು, 2025ರ ಅಂತ್ಯದ ವೇಳೆಗೆ 500 ಮೀಟರ್ ಪ್ರಯೋಗ ನಡೆಯಲಿದೆ. ಇದು...