Hyderabad News:
ಆಧುನಿಕ IPHONE ಟ್ರೆಂಡ್ಗೆ ಅನುಗುಣವಾಗಿ ಮುಂಬರುವ IPHONE SE 4 ಡೈನಾಮಿಕ್ ಐಲ್ಯಾಂಡ್ ವೈಶಿಷ್ಟ್ಯವನ್ನು ಹೊಂದಿರಬಹುದು ಎನ್ನುತ್ತವೆ ಹೊಸ ಮಾಹಿತಿ.ಅವುಗಳಲ್ಲಿ ಇತ್ತೀಚೆಗೆ ಸೋರಿಕೆಯಾದ ಮಾಹಿತಿಯಂತೆ, ಮುಂಬರುವ IPHONE SE 4 ರಲ್ಲಿ ಅಲರ್ಟ್ಸ್, ಆಧುನಿಕ IPHONE ಟ್ರೆಂಡ್ನಲ್ಲಿರುವ ನೋಟಿಫಿಕೇಶನ್ ಅಥವಾ ಇತರ ಚಟುವಟಿಕೆಗಳ ಮಾಹಿತಿಯನ್ನು ತೋರಿಸಲು ಸಹಾಯ ಮಾಡುವಂತಹ ಮಾತ್ರೆ ಆಕಾರದ ಅಂಶ ಡೈನಾಮಿಕ್ ಐಲ್ಯಾಂಡ್ ಫೀಚರ್ ಹೊಂದಿರುವ ಸಾಧ್ಯತೆ ಇಂದು ಹೇಳಲಾಗುತ್ತಿದೆ.
IPHONE SE 4 ಈ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಇದು 2022ರಲ್ಲಿ ಬಿಡುಗಡೆಯಾದ ವಿಶೇಷ ಆವೃತ್ತಿಯ IPHONE (Special Edition iPhone) ನಂತರ ಬಿಡುಗಡೆಯಾಗುತ್ತಿರುವ iPhone ಆಗಿದೆ. ಈ ಫೋನ್ ಬಗ್ಗೆ IPHONE ಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದ್ದು, ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಹೊಸ SE ಬಗೆಗಿನ ವಿವರಗಳು ಆನ್‌ಲೈನ್ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.ಈ ಫೀಚರ್ ಅನ್ನು 2022 ರಲ್ಲಿ IPHONE 14 ಪ್ರೊ ಮತ್ತು IPHONE 14 ಪ್ರೊ ಮ್ಯಾಕ್ಸ್ ಮಾದರಿಗಳಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. ನಂತರದ ವರ್ಷಗಳಲ್ಲಿ ಬಿಡುಗಡೆಯಾದ 15 ಸರಣಿ ಮತ್ತು IPHONE 16 ಸರಣಿಯ ಫೋನ್ಗಳಲ್ಲಿ IPHONE ಈ ವೈಶಿಷ್ಟ್ಯ ವಿಸ್ತರಿಸಿತ್ತು.
Dynamic Island on iPhone SE 4: ಡೈನಾಮಿಕ್ ಐಲ್ಯಾಂಡ್ ಫೀಚರ್ ಸ್ಟ್ಯಾಟಿಕ್ ನಾಚ್ ಬದಲಿಗೆ ಡಿಸ್ಪ್ಲೇಯ ಮೇಲ್ಭಾಗದಲ್ಲಿ ಹೊಂದಿರಬಹುದು. ಹಾಗೂ IPHONE SE 4 ಇತ್ತೀಚೆಗೆ ಬಿಡುಗಡೆಯಾದ IPHONE 16 ಮಾದರಿಯ ವಿನ್ಯಾಸ ಹೋಲಿಕೆಗಳನ್ನು ಹಂಚಿಕೊಳ್ಳಬಹುದು ಎಂದು ಹೇಳುತ್ತದೆ ಸೋರಿಕೆಯಾದ ಮಾಹಿತಿ.
IPHONE SE 4 ರ ಹೊಸ ಮಾಹಿತಿಗಳನ್ನು ಪ್ರಸಿದ್ಧ ಟಿಪ್‌ಸ್ಟರ್ ಇವಾನ್ ಬ್ಲಾಸ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. M3 ಚಿಪ್‌ಸೆಟ್‌ನೊಂದಿಗೆ ಐಪ್ಯಾಡ್ ಏರ್‌ನ 11-ಇಂಚಿನ ಮತ್ತು 13-ಇಂಚಿನ ರೂಪಾಂತರಗಳನ್ನು ಒಳಗೊಂಡಂತೆ ಹಲವಾರು ಐಪ್ಯಾಡ್ ಮಾದರಿಗಳ ವಿನ್ಯಾಸವನ್ನೂ ಪೋಸ್ಟ್ ಒಳಗೊಂಡಿದೆ.
ಇದು 11ನೇ ತಲೆಮಾರಿನ ಐಪ್ಯಾಡ್ ಅನ್ನೂ ಪ್ರದರ್ಶಿಸಿತು.ಇದಲ್ಲದೇ, ಇವಾನ್ ಅವರು “ಡೈನಾಮಿಕ್ ಐಲ್ಯಾಂಡ್ ಅನ್ನು ಹೈಲೈಟ್ ಮಾಡಲು (IPHONE SE 4 ನ ಚಿತ್ರ) ಫೋನ್ನ ಬಣ್ಣವನ್ನು ಹೊಂದಿಸಿದ್ದಾರೆ” ಎಂದು ಹೇಳಿದ್ದಾರೆ.
iPhone SE 4: Leaked design and features: ಇದಕ್ಕೂ ಮೊದಲು IPHONE SE 4 ನ ಕಪ್ಪು ಹಾಗೂ ಬಿಳಿ ಬಣ್ಣದ ಡಮ್ಮಿ ಫೋಟೋ ಸೋರಿಕೆಯಾಗಿತ್ತು. ವಾಲ್ಯೂಮ್ ಬಟನ್, ಮ್ಯೂಟ್ ಸ್ವಿಚ್ ಮತ್ತು ಎಡ ಅಂಚಿನಲ್ಲಿ ಸಿಮ್ ಟ್ರೇ ಹೊಂದಿರುವ ಫ್ಲಾಟ್ ಸೈಡ್ಗಳನ್ನು ಹೊಂದಿರುವಂತೆ ಕಂಡು ಬಂದಿತ್ತು.
ಸಿಂಗಲ್ ಕ್ಯಾಮರಾಕ್ಕಾಗಿ ಹಿಂಭಾಗದ ಪ್ಯಾನಲ್ನ ಮೇಲಿನ ಎಡ ತುದಿಯಲ್ಲಿ LED ಫ್ಲ್ಯಾಷ್ ಘಟಕವೂ ಇತ್ತು.IPHONE SE 4 6GB ಅಥವಾ 8GB RAM ನೊಂದಿಗೆ ಜೋಡಿಸಲಾದ A18 ಬಯೋನಿಕ್ ಚಿಪ್‌ಸೆಟ್‌ನೊಂದಿಗೆ ಬರಬಹುದು. 48MP ಹಿಂಭಾಗದ ಮುಖ್ಯ ಕ್ಯಾಮೆರಾ ಸೆನ್ಸರ್, ಫೇಸ್ ಐಡಿ ಸಪೋರ್ಟ್ ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಸಹ ಒಳಗೊಂಡಿರಬಹುದು ಎಂದು ವರದಿಯಾಗಿದೆ.
ಇದಕ್ಕೂ ಹಿಂದೆ ಸೋರಕೆಯಾದ ಮಾಹಿತಿಗಳು, IPHONE SE 4 ವಾಟರ್ಪ್ರೂಫ್ ಅಲ್ಯೂಮಿನಿಯಂ ಫ್ರೇಮ್ ಹೊಂದಿರಬಹುದು ಎಂದು ಹೇಳುತ್ತಿವೆ. ಈ ಐಫೋನ್ 60 Hz ರಿಫ್ರೆಶ್ ರೇಟ್ಗೆ ಹೊಂದಿಕೆಯಾಗುವಂತಹ 6.06-ಇಂಚಿನ ಪೂರ್ಣ HD+ LTPS OLED ಡಿಸ್ಪ್ಲೇ ಹೊಂದಿರಲಿದೆ.
ಇದನ್ನು ಓದಿರಿ : RESEARCH ON DOG BARKING : ಶ್ವಾನಗಳು ನಿಜವಾಗಿಯೂ ಆತ್ಮಗಳನ್ನು ನೋಡ್ತಾವಾ?