ರೋಗನಿರೋಧಕ ಶಕ್ತಿಯಾಗಿರುವ ಬೆಳ್ಳುಳ್ಳಿ ಈಗ ಬಳಸಿದ್ದರೆ ಕ್ಯಾನ್ಸರ್ ರೋಗ ಬರುತ್ತದ್ದೆ. ಕೆಲವು ದಿನಗಳ ಹಿಂದೆ ಸಿಮೆಂಟ್ ಬೆಳ್ಳುಳ್ಳಿ ಸುದ್ದಿ ನೋಡಿರಬಹುದು. ಈಗ ಚೀನಾ ಬೆಳ್ಳುಳ್ಳಿ ಪರಿಮಳ ಸೂಸುತ್ತಿದೆ. ಆದರೆ ಆರೋಗ್ಯಕ್ಕೆ ಮಾತ್ರ ಎಚ್ಚರಿಕೆ ಗಂಟೆ ಬಾರಿಸುತ್ತಿದೆ.
ಬೆಳ್ಳುಳ್ಳಿಯನ್ನು ಮಾಂತ್ರಿಕ ಮಸಾಲೆ ಎಂದು ಅಂತಲೇ ಕರೆಯುತ್ತಾರೆ. ಆಹಾರದ ರುಚ್ಚಿ ಮತ್ತು ಪರಿಮಳ ಹೆಚ್ಚಿಸುತ್ತದೆ. ಅಲ್ಲದೇ ಆಹಾರದಲ್ಲಿ ಇದನ್ನು ಬಳಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಅಂತಾ ಭಾರತದ ಹಿರಿಯರು ಮತ್ತು ವೈದ್ಯರ ಒಂದು ಔಷದೀಯಾಗಿತ್ತು.
ಇದನ್ನೂ ಓದಿ:ಏರ್ಟೆಲ್, ಜಿಯೋ ಬಳಕೆದಾರರಿಗೆ ಬಂಪರ್ ಧಮಾಕಾ ; 6 ತಿಂಗಳು ರೀಚಾರ್ಜ ಮಾಡೋದು ಬೇಡ!
ಅದು ಈಗ ಚೀನಾವು ವಿಶ್ವದ ಬೆಳ್ಳುಳ್ಳಿಯ ಅತಿದೊಡ್ಡ ಉತ್ಪಾದಕ. ಜಾಗತಿಕ ಪೂರೈಕೆಯ 80% ಅನ್ನು ಉತ್ಪಾದಿಸುತ್ತದೆ. ಚೀನಾದ ಹೆಚ್ಚಿನ ಬೆಳ್ಳುಳ್ಳಿಯನ್ನು ಬೀಜಿಂಗ್ನ ಆಗ್ನೇಯ ಭಾಗದಲ್ಲಿರುವ ಪೂರ್ವ ಕರಾವಳಿ ಪ್ರಾಂತ್ಯವಾದ ಶಾಂಡೊಂಗ್ನಲ್ಲಿ ಉತ್ಪಾದಿಸಲಾಗುತ್ತದೆ. ನಿರ್ದಿಷ್ಟವಾಗಿ, ಜಿಂಕ್ಯಾಂಗ್ ಅನ್ನು “ವಿಶ್ವದ ಬೆಳ್ಳುಳ್ಳಿ ರಾಜಧಾನಿ” ಎಂದು ಕರೆಯಲಾಗುತ್ತದೆ.
ಭಾರತದಲ್ಲಿ ಚೀನಾ ಬೆಳ್ಳುಳ್ಳಿಯನ್ನು 2014ರಲ್ಲಿಯೇ ನಿಷೇಧಿಸಲಾಗಿದೆ. ಆದರೂ ಚೀನಾ ಬೆಳ್ಳುಳ್ಳಿ ಕಳ್ಳದಾರಿಯಲ್ಲಿ ಭಾರತೀಯ ಗಡಿ ದಾಟಿ ಮಾರುಕಟ್ಟೆ ಪ್ರವೇಶಿಸುತ್ತಿದೆ. ಚೈನೀಸ್ ಬೆಳ್ಳುಳ್ಳಿ ತಿಳಿ ಬಿಳಿ ಮತ್ತು ಗುಲಾಬಿ ಮತ್ತು ಗಾತ್ರದಲ್ಲಿ ಚಿಕ್ಕದಾಗಿದೆ. ಭಾರತೀಯ ಬೆಳ್ಳುಳ್ಳಿ ಗಾತ್ರದಲ್ಲಿಯೂ ದೊಡ್ಡದಾಗಿದ್ದಲ್ಲದೇ ವಾಸನೆಯನ್ನು ಹೊಂದಿದೆ. ಆದರೆ ಚೈನೀಸ್ ಬೆಳ್ಳುಳ್ಳಿ ಕಡಿಮೆ ವಾಸನೆ ಹೊಂದಿದೆ. ಚೀನಾ ಬೆಳ್ಳುಳ್ಳಿಗೂ ಹಾಗೂ ಭಾರತೀಯ ಬೆಳ್ಳುಳ್ಳಿಗೂ ಬಹಳ ವ್ಯತ್ಯಾಸವಿದೆ.
ಇತ್ತೀಚೆಗೆ ಗುಜರಾತ್ನ ರಾಜ್ಕೋಟ್ನಲ್ಲಿ ಗೊಂಡಲ್ ಕೃಷಿ ಉತ್ಪನ್ನ ಮಾರುಕಟ್ಟೆ ಸಹಕಾರಿ (ಎಪಿಎಂಸಿ) ನಲ್ಲಿ ಚೀನಾದ ಬೆಳ್ಳುಳ್ಳಿಯ ಚೀಲಗಳು ಕಂಡುಬಂದ ನಂತರ ವ್ಯಾಪಾರಿಗಳು ಪ್ರತಿಭಟನೆಯನ್ನು ನಡೆಸಿದರು. ಅಕ್ರಮದ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ನಿಷೇಧದ ಹೊರತಾಗಿಯೂ ಚೀನಾದ ಬೆಳ್ಳುಳ್ಳಿ ಭಾರತಕ್ಕೆ ಗಡಿ ಕಾಯುವ ಸೈನಿಕರಿದ್ದರು ಅದು ಹೇಗೆ ಚೀನಾ ಗಡಿಯಿಂದ ಭಾರತ ಗಡಿಗೆ ಚೀನಾದ ಬೆಳ್ಳುಳ್ಳಿಯ ಚೀಲಗಳು ಬರಲು ಸಾಧ್ಯ ಇದರಲ್ಲಿ ಯಾರ ಕೈವಾಡ ಇದ್ದೆ ಹೇಗೆ ಪ್ರವೇಶಿಸುತ್ತಿದೆ ಎಂದು ಗೊಂಡಲ್ ಎಪಿಎಂಸಿಯ ವರ್ತಕರ ಸಂಘ ಕಿಡಿಕಾರಿದೆ.
ಇದನ್ನೂ ಓದಿ:ರಾತ್ರಿ ಪಕ್ಕದಲ್ಲಿಯೇ Mobile ಇಟ್ಟುಕೊಂಡು ಮಲಗ್ತೀರಾ.? ಹಾಗಿದ್ರೆ ಈ ಸುದ್ದಿ ನೋಡಿ!
ಚೀನಾ ಬೆಳ್ಳುಳ್ಳಿಗೆ ಹೋಲಿಸಿದ್ರೆ ಭಾರತದ ಬೆಳ್ಳುಳ್ಳಿ ಬಳಕೆಗೂ ಯೋಗ್ಯ, ಆರೋಗ್ಯಕ್ಕೂ ಸುರಕ್ಷಿತ. ಚೀನಾ ಬೆಳ್ಳುಳ್ಳಿ ಆಧುನಿಕ ಕೃಷಿ ತಂತ್ರಜ್ಞಾನ, ಅತಿ ಹೆಚ್ಚು ರಾಸಾಯನಿಕಗಳು, ಕೀಟನಾಶಕಗಳ ಬಳಕೆಯೊಂದಿಗೆ ಬೆಳೆಯುತ್ತಾರೆ. ಚೀನಿ ಬೆಳ್ಳುಳ್ಳಿ ದೀರ್ಘಾವಧಿ ಸೇವನೆಯಿಂದ ಕ್ಯಾನ್ಸರ್ಗೆ ಕಾರಣವಾಗಬಹುದು ಅಂತಾರೆ ಆಹಾರ ತಜ್ಞರು.
ಕಳ್ಳಸಾಗಣೆ ಮೂಲಕ ಮಾರುಕಟ್ಟೆಗೆ ಬರುತ್ತಿರುವ ಚೀನಾ ಬೆಳ್ಳುಳ್ಳಿ ಕಡಿಮೆ ಬೆಲೆಗೂ ಲಭ್ಯ. ಹೀಗಾಗಿ ಇದು ಕಳ್ಳಸಾಗಣೆದಾರರು ಮತ್ತು ಅವರ ಸ್ಥಳೀಯ ಏಜೆಂಟ್ಗಳು ಕಳ್ಳಸಾಗಣೆ ಸರಕುಗಳ ಮೇಲೆ ಲಾಭ ಗಳಿಸಲು ಸಹಾಯವಾಗುತ್ತಿದೆ.