Bangalore News:
ನಗರದ ಚರ್ಚ್ ಸ್ಟ್ರೀಟ್ಗೆ ಬಂದ ಗಾಯಕ ED SHEERAN SHOW , ಸಾರ್ವಜನಿಕವಾಗಿಯೇ ರಸ್ತೆ ಬದಿ ಹಾಡು ಹಾಡಲಾರಂಭಿಸುತ್ತಿದ್ದರು. ಮಾಹಿತಿ ಅರಿತ ಪೊಲೀಸರು ತಕ್ಷಣವೇ ಸ್ಥಳಕ್ಕೆ ಬಂದು ಸಂಗೀತ ಉಪಕರಣಗಳ ಕೇಬಲ್ ಸಂಪರ್ಕ ಕಡಿತಗೊಳಿಸಿ ಸ್ಥಗಿತಗೊಳಿಸಿದ್ದಾರೆ.
ಎಡ್ ಶಿರಾನ್ ತಮ್ಮ ಖ್ಯಾತ ಹಾಡು ”Shape Of You” ಹಾಡಲಾರಂಭಿಸಿದ ಕೆಲವೇ ಸೆಕೆಂಡುಗಳಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಸ್ಥಳಕ್ಕಾಗಮಿಸಿ ತಡೆದರು. ಅನುಮತಿ ಇಲ್ಲದ ಕಾರಣ ಇಂಗ್ಲೆಂಡ್ನ ಖ್ಯಾತ ಗಾಯಕ ಮತ್ತು ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ED SHEERAN SHOWಅವರ ಸ್ಟ್ರೀಟ್ ಸಂಗೀತ ಪ್ರದರ್ಶನವನ್ನು ಬೆಂಗಳೂರು ಪೊಲೀಸರು ನಿಲ್ಲಿಸಿದ ಘಟನೆ ಭಾನುವಾರ ಬೆಂಗಳೂರಿನಲ್ಲಿ ನಡೆದಿದೆ.
ಎಡ್ ಶೀರಾನ್ ಅವರ ತಂಡದಿಂದ ಚರ್ಚ್ ಸ್ಟ್ರೀಟ್‌ನಲ್ಲಿ ಪ್ರದರ್ಶನ ನೀಡಲು ಅನುಮತಿ ಕೇಳಲಾಗಿತ್ತು. ಆದರೆ ತೆರೆದ ಸ್ಥಳದಲ್ಲಿ ಹೆಚ್ಚು ಜನಸಂದಣಿವುಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಾಧ್ಯತೆಯ ಕಾರಣದಿಂದ ಅನುಮತಿ ನಿರಾಕರಿಸಲಾಗಿತ್ತು.
ಸದ್ಯ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಲ್ಲಿ ಚರ್ಚ್ ಸ್ಟ್ರೀಟ್ ಜನನಿಬಿಡ ಸ್ಥಳವಾಗಿದ್ದು, ಇದು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದೆ. ಸಾರ್ವಜನಿಕರೊಬ್ಬರು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ತೆರಳಿ ಕ್ರಮ ಕೈಗೊಂಡಿದ್ದೇವೆ.
ಗಾಯಕ ಮತ್ತು ಅವರ ತಂಡ ಅನುಮತಿ ಪಡೆದಿದ್ದರೆ ಕಾರ್ಯಕ್ರಮ ತೋರಿಸಬಹುದಿತ್ತು ಎಂದು ಕಬ್ಬನ್ ಪಾರ್ಕ್ ಪೊಲೀಸರು ತಿಳಿಸಿದ್ದಾರೆ. ಮತ್ತೊಂದೆಡೆ ಶಿರಾನ್ ಕಾರ್ಯಕ್ರಮ ನಿಲ್ಲಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಸಂಗೀತ ಕಾರ್ಯಕ್ರಮಗಳ ಭಾಗವಾಗಿ ಭಾರತ ಪ್ರವಾಸದಲ್ಲಿರುವ ED SHEERAN SHOW, ಈಗಾಗಲೇ ಹೈದರಾಬಾದ್ ಹಾಗೂ ಚೆನ್ನೈನಲ್ಲಿ ಪ್ರದರ್ಶನ ನೀಡಿದ್ದಾರೆ. ಇಂದು ಬೆಂಗಳೂರಲ್ಲಿ ಕಾಣಿಸಿಕೊಂಡು ರಸ್ತೆ ಬದಿಯಲ್ಲೇ ಸಾರ್ವಜನಿಕವಾಗಿ ಹಾಡುತ್ತಿದ್ದಾಗ ಪೊಲೀಸರು ತಡೆದಿದ್ದಾರೆ.
ಇದನ್ನು ಓದಿರಿ : Meta Likely To Lay Off Thousands Of Employees, Says Leaked Memo