spot_img
spot_img

ELDERLY FARM COUPLE : 18 ಗುಂಟೆ ಜಮೀನಿನಲ್ಲಿ 28 ಬೆಳೆಗಳು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Davangere News:

ದಾವಣಗೆರೆಯ ವೃದ್ಧ COUPLE ಸಾವಯವ ಗೊಬ್ಬರ ಬಳಕೆ ಮಾಡಿ 28ಕ್ಕೂ ಹೆಚ್ಚು ಬೆಳೆಗಳನ್ನು ಬೆಳೆದು ಮಾದರಿಯಾಗಿದ್ದಾರೆ. ಇವರ ಯಶಸ್ವಿ ಕೃಷಿಯತ್ತ ಒಂದು ನೋಟ. ನಮ್ಮ ಪ್ರತಿನಿಧಿ ನೂರ್​ ಮಾಡಿರುವ ವಿಶೇಷ ವರದಿ ಇಲ್ಲಿದೆ.ತರಹೇವಾರಿ ಬೆಳೆಗಳನ್ನು ಬೆಳೆಯುತ್ತಿರುವ ವೃದ್ಧ COUPLEಗೆ ಕೈಗೆ ಭರಪೂರ ಆದಾಯ ಬರುತ್ತಿದೆ. ನೋನಿ ಹಣ್ಣು, ಸುವರ್ಣ ಗಡ್ಡೆ, ಕೆಂಪು ಬೆಂಡಿ, ಹಾಲು ಗೆಣಸು ಹೀಗೆ ಔಷಧೀಯುಕ್ತ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ.

ಹರಿಹರದ ತಾಲೂಕಿನ ಎರೆಹೊಸಹಳ್ಳಿ ಗ್ರಾಮದ ವೃದ್ಧ COUPLE ಭೂಮಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ತಮಗೆ ಅನ್ನವನ್ನು ಕೊಡುವ ಭೂಮಿಗೆ ಸಾವಯವ ಗೊಬ್ಬರ ಬಳಸಿ ಬಂಗಾರದಂತ ಬೆಳೆ ಬೆಳೆಯುತ್ತಿದ್ದಾರೆ.ಕೇವಲ 18 ಗುಂಟೆ ಭೂಮಿಯಲ್ಲಿ ಸಾವಯವ ಗೊಬ್ಬರ ಬಳಕೆ ಮಾಡಿ 28 ಕ್ಕೂ ಹೆಚ್ಚು ಬೆಳೆಗಳನ್ನು ಬೆಳೆದು ಮಾದರಿ ರೈತ COUPLEಗಳಾಗಿದ್ದಾರೆ. ಖರ್ಚು ಇಲ್ಲದೆ ವರ್ಷಕ್ಕೆ 80 ಸಾವಿರದಿಂದ 1 ಲಕ್ಷದ ತನಕ ಆದಾಯ ಗಳಿಸುತ್ತಿದ್ದಾರೆ.

ಇವರ ಜಮೀನಿಗೆ ಬೇರೆ ಬೇರೆ ರೈತರು ದಿನನಿತ್ಯ ಭೇಟಿ ನೀಡಿ ಸಾವಯವ ಕೃಷಿ ಬಗ್ಗೆ, ಬೆಳೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಎರೆಹೊಸಳ್ಳಿ ಗ್ರಾಮದ ರೈತ COUPLEಗಳಾದ ಸಂಜೀವಪ್ಪ ರೆಡ್ಡಿ ಜಿ.ಹೆಚ್​​, ರೇಣುಕಮ್ಮ ಸಂಜೀವಪ್ಪ ರೆಡ್ಡಿ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ‌ ಅಲ್ಲದೆ ತಾವು ಬೆಳೆದ ಕೆಂಪು ಬೆಂಡೆ, ರಸತಾಳೆ ಕಬ್ಬು, ತರಕಾರಿ ಪ್ರದರ್ಶನಕ್ಕಿಟ್ಟಿದ್ದಾರೆ. ಇವರು ಪ್ರದರ್ಶನಕ್ಕಿಡುವ ಬೆಳೆಗಳ ಬೀಜಗಳಿಗೆ ಭಾರಿ ಬೇಡಿಕೆ ಇದ್ದು, ವಿವಿಧ ಬೆಳೆಗಳ ಬೀಜಗಳ ಮಾರಾಟವನ್ನು ಕೂಡ ಮಾಡುತ್ತಾರೆ.ದಾವಣಗೆರೆ ಶಿವಮೊಗ್ಗ, ಮೈಸೂರು, ಧಾರವಾಡ, ತುಮಕೂರು, ಹುಬ್ಬಳಿ ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಲ್ಲಿ ನಡೆದ ಸಾವಯವ ಗೊಬ್ಬರ ಬಳಕೆಯಿಂದ ಬೆಳೆದ ಬೆಳೆಗಳ ಪ್ರದರ್ಶನದಲ್ಲಿ, ಈ ರೈತ COUPLEಗಳು ಭಾಗವಹಿಸಿದ್ದಾರೆ.

In a small garden, there are 28 different crops: ಸಂಜೀವಪ್ಪ ರೆಡ್ಡಿ ಅವರ 18 ಗುಂಟೆ ಜಮೀನಿನಲ್ಲಿ ಪಪ್ಪಾಯ, ದಾಳಿಂಬೆ, ಪೇರಲ, ತೆಂಗು, ಅಡಕೆ, ಮಾವು, ಕೆಂಪು ಬಾಳೆ, ರಸತಾಳೆ ಕಬ್ಬು, ನುಗ್ಗೆ, ಕೆಂಪು ಬೆಂಡಿಕಾಯಿ, ಸುವರ್ಣಗಡ್ಡೆ, ಗೆಣಸು, ಮರಗೆಣಸು, ನೋನಿ ಹಣ್ಣು, ಕರಿಬೇವು, ಲಿಂಬೆ, ಪರಂಗಿ, ದಾಳಿಂಬೆ, ಅಡುಗೆ ಅರಿಶಿಣ, ಉಪ್ಪಿನಕಾಯಿ ಶುಂಠಿ, ಡ್ರ್ಯಾಗನ್ ಫ್ರೂಟ್ ಈರೀತಿಯ ಬೆಳೆಯು ಹುಲುಸಾಗಿ ಬೆಳೆದಿದೆ. ಅದರಲ್ಲಿನ ಲಾಭವು ಕೃಷಿಕ ದಂಪತಿಗಳನ್ನು ಕೈಹಿಡಿದಿದೆ.ಈಗಾಗಲೇ ಈ ಎಲ್ಲಾ ಬೆಳೆಗಳು ಇಳುವರಿ ನೀಡಿದ್ದು ಸಂಜೀವಪ್ಪ ರೆಡ್ಡಿ ಅವರಿಗೆ ಸಂತಸ ತಂದಿದೆ.

ಹೊಲದಲ್ಲಿನ ಕೀಟಗಳನ್ನು ತಿನ್ನುವುದಕ್ಕಾಗಿ ಬರುವ ಹಕ್ಕಿಪಕ್ಷಿಗಳು ನೆಲೆಸುವುದಕ್ಕಾಗಿ ಹೊಲದ ಸುತ್ತಲೂ ಔಡಲ, ಬೇವಿನ ಮರ, ಬನ್ನಿಮರಗಳನ್ನು ಬೆಳೆಸಿರುವುದು ವಿಶೇಷವಾಗಿದೆ.ಇವರ ಜಮೀನಿನಲ್ಲಿ ತರಕಾರಿ ಬೆಳೆಗಳಾದ ಕ್ಯಾರೆಟ್​​, ಮೂಲಂಗಿ, ಮಲ್ಲಾಡ ಅವರೆ, ಅವರೆ, ಬಳ್ಳಿಯಲ್ಲಿ ಬಿಡುವ ವಿಶೇಷ ಅಲೂಗಡ್ಡೆ, ಹಾಲು ಕುಂಬಳಕಾಯಿ, ಸಿಹಿ ಕುಂಬಳಕಾಯಿ, ಈರುಳ್ಳಿ, ಛೋಟಾ ಮೆಣಸು, ಹೂ ಕೋಸ್, ಎಲೆ ಕೋಸು, ಹಿರೇಕಾಯಿ, ಹಾಗಲಕಾಯಿ, ಕೆಂಪು ಬೆಂಡೆಕಾಯಿ, ಬದನೆಕಾಯಿ, ಟೊಮೆಟೊ ಬೆಳೆಗಳನ್ನು ಬೆಳೆದಿದ್ದಾರೆ.

Use of organic manure, bio-dead: ಬಳಿಕ ಗಿಡಗಳಿಗೆ ಸ್ಪ್ರೇ ಮಾಡುವುದರಿಂದ ಗಿಡಗಳು ಶೈನಿಂಗ್ ಬರಲಿವೆ ಎಂದು ಸಂಜೀವಪ್ಪ ರೆಡ್ಡಿ ಈಟಿವಿ ಭಾರತ್​ಗೆ ಮಾಹಿತಿ ನೀಡಿದರು. ಕೊತ್ತಂಬರಿ, ಪುದಿನ, ಉಳಿಚಿಕ್ಕು, ಸಬ್ಬಸಗಿ, ಹೆಸರು, ಅಲಸಂದಿಯನ್ನು ಕೂಡ ಇವರು ಬೆಳೆಯುತ್ತಿರುವುದು ವಿಶೇಷ.ಸಂಜೀವಪ್ಪ ರೆಡ್ಡಿ ದಂಪತಿ ಇಬ್ಬರೂ ಕಷ್ಟಪಟ್ಟು ಸಾವಯವ ಗೊಬ್ಬರವನ್ನು ಮನೆಯಲ್ಲೇ ತಯಾರು ಮಾಡುತ್ತಾರೆ.

ಮನೆ ಗೊಬ್ಬರ, ಗೋಮೂತ್ರ, ಸಗಣಿ, ಕಡಲೆ ಹಿಟ್ಟು, ಜೋಳದ ಹಿಟ್ಟನ್ನು ಬೆರಸಿ ಗೊಬ್ಬರ ತಯಾರಿಸುತ್ತಾರೆ. ‌ಇದೇ ಗೊಬ್ಬರವನ್ನು ಬೆಳೆಗಳಿಗೆ ಬಳಸಲಾಗುತ್ತದೆ. ಇನ್ನು, ಬೋರ್​ವೆಲ್ ಇರುವ ಕಾರಣ ಜಮೀನಿಗೆ ಭರಪೂರ ನೀರು ದೊರೆಯುತ್ತದೆ. ಅಲ್ಲದೆ ಮಳೆ ಬಿದ್ದರೆ ಜಮೀನಿನಲ್ಲಿ ಬಿದ್ದ ಮಳೆಯ ನೀರು ಭೂಮಿಯಲ್ಲೇ ಇಂಗುವಂತೆ ರೈತ ಸಂಜೀವರೆಡ್ಡಿ ಅವರು ಮಾಡಿದ್ದಾರೆ.

ಅಲ್ಲದೆ ಭೂಮಿಯಲ್ಲಿ ಬೆಳೆದ ಮಿಶ್ರ ಬೆಳೆಗಳ ಮಧ್ಯದಲ್ಲಿ ಅಲ್ಲಲ್ಲಿ ಕಾಣುವ ಕಳೆ-ಕಸವನ್ನು ನಾಶಪಡಿಸಲು ಇವರು ಕಳೆ ನಾಶಕವನ್ನು ಬಳಸುವುದಿಲ್ಲ. ಕಳೆ ತೆಗೆಯಲು ಕೃಷಿ ವಿಶ್ವ ವಿದ್ಯಾಲಯ ಸಿದ್ಧಪಡಿಸಿರುವ ಕಳೆ ನಾಶಕ ಯಂತ್ರ ಬಳಸುತ್ತಾರೆ.

Medicinal crops are more: ಬೆಂಡಿಯ ಬೀಜವನ್ನು ಮಾರಾಟ ಮಾಡಲಾಗುತ್ತದೆ. ಒಂದು ಸಿಂಗಲ್ ಕೆಂಪು ಬೆಂಡಿಕಾಯಿ 40 ರೂಪಾಯಿಗೆ ಮಾರಾಟ ಆಗುತ್ತದೆ. ಇದರಿಂದಲೇ 40 ಸಾವಿರಕ್ಕೂ ಹೆಚ್ಚು ಹಣಗಳಿಸಿದ್ದೇನೆ” ಎನ್ನುತ್ತಾರೆ ರೈತ ಸಂಜೀವಪ್ಪ ರೆಡ್ಡಿ.

“ಸುವರ್ಣಗಡ್ಡೆಗೆ ಹೊಟ್ಟೆಯಲ್ಲಿರುವ ಕಲ್ಲು ಕರಗಿಸುವ ಶಕ್ತಿ ಇದೆ, ಅಲ್ಲದೆ ಇವರು ಬೆಳೆದಿರುವ ನೋನಿ ಹಣ್ಣು ಸಕ್ಕರೆ ಕಾಯಿಲೆಗೆ ಉಪಯುಕ್ತವಾಗಿದೆ. ಮರಗೆಣಸು, ಪಪ್ಪಾಯಿ, ಡ್ರ್ಯಾಗನ್ ಫ್ರೂಟ್​ ಕೂಡ ಆರೋಗ್ಯಕ್ಕೆ ಒಳ್ಳೆಯದು. ಇನ್ನು ಕೆಂಪು ಬೆಂಡೆ ಗ್ಯಾಸ್ಟ್ರಿಕ್‌, ಮಲಬದ್ಧತೆ ದೂರ ಮಾಡುವ ಶಕ್ತಿ ಹೊಂದಿದೆ.

Hand full of income, only zero expenses: ಮನೆ ಗೊಬ್ಬರ, ಗೋಮೂತ್ರ, ಸಗಣಿ, ಕಡಲೆ ಹಿಟ್ಟು, ಜೋಳದ ಹಿಟ್ಟು ಬೆರಸಿ ಗೊಬ್ಬರ ತಯಾರು ಮಾಡುತ್ತೇವೆ. ವರ್ಷಕ್ಕೆ 80 ಸಾವಿರದಿಂದ 1 ಲಕ್ಷ ರೂಪಾಯಿ ಆದಾಯ ಗಳಿಸುತ್ತೇವೆ. ಸಿಹಿ ಕುಂಬಳಕಾಯಿ, ಹಾಲು ಕುಂಬಳ, ಉಪ್ಪಿನಕಾಯಿ ಶುಂಠಿ, ಶುಂಠಿ ಕೂಡ ಬೆಳೆದಿದ್ದೇವೆ.

ಖರ್ಚು ಕಮ್ಮಿ. ಜೀವಾಮೃತ ಬಳಸಿದರೆ ಸಮಸ್ಯೆ ಇರುವುದಿಲ್ಲ. ಗಿಡಗಳಿಗೆ ಸ್ಪ್ರೇ ಮಾಡಿದ್ರೇ ಹುಳು ಕಾಟ ಇರಲ್ಲ. ಇಷ್ಟೆಲ್ಲ ಮಾಡಲು ಮನೆಯವರ ಸಪೋರ್ಟ್ ಇದೆ” ಎಂದರು.ಈಟಿವಿ ಭಾರತ ಜೊತೆ ರೈತ ಸಂಜೀವಪ್ಪ ರೆಡ್ಡಿ ಪ್ರತಿಕ್ರಿಯಿಸಿ ” 18 ಗುಂಟೆ ಜಮೀನಿನಲ್ಲಿ 28 ಬೇರೆ ಬೇರೆ ಬೆಳೆಗಳನ್ನು ಬೆಳೆದಿದ್ದೇವೆ. ರಸತಾಳೆ ಕಬ್ಬು, ಕೆಂಪು ಬೆಂಡಿ, ನುಗ್ಗೆ, ಮೂಲಂಗಿ, ಬಿಟ್​ರೂಟ್​, ಕ್ಯಾರೆಟ್, ಹಾಲು ಗೆಣಸು, ಸಿಹಿ ಗೆಣಸು, ಮರ ಗೆಣಸು, ನೋನಿ ಹಣ್ಣು, ಇದಕ್ಕೆ ಸಾವಯವ ಗೊಬ್ಬರ ಬಳಸಿ ಬೆಳೆಯುತ್ತೇವೆ.

ಇದನ್ನು ಓದಿರಿ : RCB PLAYERS FLOP : ಐಪಿಎಲ್ಗೂ ಮುನ್ನವೇ RCBಗೆ ಬಿಗ್ ಶಾಕ್

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

TESLA BEGINS HIRING IN INDIA:ಮಸ್ಕ್ ಸಂಸ್ಥೆಯಲ್ಲಿ ಕೆಲಸ ಮಾಡಲು ಅದ್ಭುತ ಅವಕಾಶ

New Delhi News: ಇದರೊಂದಿಗೆ ಅಮೆರಿಕದ ದೈತ್ಯ ಎಲೆಕ್ಟ್ರಿಕಲ್​ ಕಾರು ಕಂಪನಿಯಲ್ಲಿ ಕೆಲಸ ಮಾಡಬೇಕೆಂಬ ಕನಸು ಹೊಂದಿರುವವರಿಗೆ ಟೆಸ್ಲಾ ಸುವರ್ಣಾವಕಾಶ ನೀಡಿದೆ. ಮುಂಬೈನಲ್ಲಿ ಹಲವು ಹುದ್ದೆಗಳ...

MAHAKUMBH : ಆ ಅಘೋರಿ ಭವಿಷ್ಯವೇ ನಿಜವಾಯ್ತಾ?

MAHAKUMBH : ಉತ್ತರ ಪ್ರದೇಶದ ದೇವ ಪ್ರಯಾಗದಲ್ಲಿ MAHAKUMBH ನಡೆಯುತ್ತಿದೆ. ಕಳೆದ 30 ದಿನಗಳ ಅಂತರದಲ್ಲಿ 7 ಅಗ್ನಿ ದುರಂತ ಎದುರಾಗಿವೆ. ಈ ಹಿಂದೆ ಹೀಗೆ...

DARSHAN : ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ ದರ್ಶನ್ ಭಾವುಕ

Darshan News: ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ DARSHAN ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 48ನೇ ವರ್ಷಕ್ಕೆ ಕಾಲಿಟ್ಟ ದಾಸನಿಗೆ ಸ್ಯಾಂಡಲ್​ವುಡ್​ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು...

TULASI GABBARD : ಅಮೆರಿಕ ಗುಪ್ತಚರ ಇಲಾಖೆಯ ನೂತನ ಮುಖ್ಯಸ್ಥೆ

TULASI GABBARD : TULASI GABBARD​, ಈಗ ಅಮೆರಿಕಾದ ರಾಷ್ಟ್ರೀಯ ಗುಪ್ತಚರ ದಳ ನಿರ್ದೇಶನದ ನೂತನ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದಾರೆ. ಭಾರತದೊಂದಿಗೆ ಅವರಿಗಿರುವ ನಂಟಿನ ಬಗ್ಗೆಯೂ ಕೂಡ...