ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ವು ಕಳೆದ ಅಕ್ಟೋಬರ್ 27 ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಪರೀಕ್ಷಾ ಫಲಿತಾಂಶದ ಬಗ್ಗೆ ಎದುರು ನೋಡುತ್ತಿದ್ದಾರೆ. ಶೀಘ್ರವೇ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಮಧ್ಯೆ ಕಟ್ ಆಫ್ ಅಂಕಗಳು ಎಷ್ಟಿರಲಿವೆ?, ಫಲಿತಾಂಶ ಪರಿಶೀಲನೆ ಹೇಗೆ ಎಂಬುದರ ಅಪ್ಡೇಟ್ ಇಲ್ಲಿದೆ. ವಿಲೇಜ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ (VAO) ಲಿಖಿತ ಪರೀಕ್ಷೆಗೆ ಸಾವಿರಾರು ಅಭ್ಯರ್ಥಿಗಳು ಹಾಜರಾಗಿದ್ದರು. ಗ್ರಾಮ ಆಡಳಿತ ಹುದ್ದೆಗಳಿಗೆ ಆಸೆ ಪಟ್ಟು ಪರೀಕ್ಷೆ ಬರೆದವರು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಕಟಾಪ್ ಅಂಕಗಳ ಮಾಹಿತಿ ಒದಗಿಸಲಾಗಿದೆ.
ಆದಷ್ಟು ಶೀಘ್ರವೇ VAO ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಫಲಿತಾಂಶವನ್ನು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್cetonline.karnataka.gov.in/kea ನಲ್ಲಿ ಪ್ರಕಟಗೊಳ್ಳಲಿದೆ. ನಂತರ ಫಲಿತಾಂಶವು ಅಭ್ಯರ್ಥಿಗಳ ಅಂಕಗಳು ಮತ್ತು ದಾಖಲಾತಿ ಪರಿಶೀಲನೆ (ಕೌನ್ಸೆಲಿಂಗ್)ಯಂತಹ ಮುಂದಿನ ಸುತ್ತುಗಳನ್ನು ಒಳಗೊಂಡಿರುತ್ತದೆ. ಬಿಡುಗಡೆಯ ದಿನಾಂಕ ಗೊತ್ತಾಗಬೇಕಿದೆ.
ಸಾಮಾನ್ಯ ವರ್ಗದವರಿಗೆ 70 ರಿಂದ 75 ಅಂಕಗಳು ಪರಿಶಿಷ್ಟ ಜಾತಿ: 55 ರಿಂದ 60 ಪರಿಶಿಷ್ಟ ಪಂಗಡ: 50 ರಿಂದ 55 ಓಬಿಸಿ : 65 ರಿಂದ 70 ಈ ವರ್ಷ ನಡೆದ ಗ್ರಾಮ ಆಡಳಿತ ಅಧಿಕಾರಿ (VAO) ಲಿಖಿತ ಪರೀಕ್ಷೆಗಳು ಎರಡು ಪತ್ರಿಕೆ ಹೊಂದಿತ್ತು. ಎರಡು ಪರೀಕ್ಷೆಗಳನ್ನು ಒಂದೇ ದಿನದ ನಡೆಸಲಾಗಿತ್ತು. ತಲಾ ಒಂದು ಪರೀಕ್ಷೆ 100 ಅಂಕಗಳ ಬಹು ಆಯ್ಕೆಯ ಪ್ರಶ್ನೆಗಳನ್ನು ಹೊಂದಿತ್ತು. ಪ್ರತಿ ಸರಿಯಾದ ಉತ್ತರಕ್ಕೆ ಒಂದು ಅಂಕದಂತೆ ನೂರು ಅಂಕಗಳು ನೀಡಲಾಗುತ್ತದೆ ಎಂದು ಕೆಇಎ ತಿಳಿಸಿದೆ.
ಅದಷ್ಟಲ್ಲೇ ನಕಾರಾತ್ಮಕ/ ತಪ್ಪು ಉತ್ತರ ಹಾಕಿದವರೆಗೆ ಪ್ರತಿ ತಪ್ಪಾದ ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುವುದು. ಈ ಪರೀಕ್ಷೆಯನ್ನು ಅಭ್ಯರ್ಥಿಗಳ ಕಂಪ್ಯೂಟರ್ ಜ್ಞಾನ, ಕೌಶಲ್ಯ, ಸಾಮಾನ್ಯ ಇಂಗ್ಲಿಷ್ ಮತ್ತು ಕನ್ನಡ ಭಾಷೆಯ ಜ್ಞಾನ ಸಹಿತ ಮೌಲ್ಯಮಾಪನ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now