Lucknow (Uttar Pradesh) News:
ಸೋಮವಾರ ತಡ ರಾತ್ರಿ ಜಿಂಜಿನಾ ಪ್ರದೇಶದಲ್ಲಿ ಈ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಇಲ್ಲಿನ ಶಾಮ್ಲಿ ಜಿಲ್ಲೆಯಲ್ಲಿ ಉತ್ತರ ಪ್ರದೇಶದ ಪೊಲೀಸ್ ವಿಶೇಷ ಕಾರ್ಯಪಡೆ ನಡೆಸಿದ ENCOUNTERನಲ್ಲಿ ಓರ್ವ ವಾಂಟೆಡ್ ಅಪರಾಧಿ ಹಾಗೂ ಆತನ ಮೂವರು ಸಹಚರರನ್ನು ENCOUNTER ಮಾಡಿರುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.ಈ ENCOUNTER ವೇಳೆ ಎಸ್‌ಟಿಎಫ್ ಇನ್ಸ್ಪೆಕ್ಟರ್ ಕೂಡ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಸೋಮವಾರ ತಡ ರಾತ್ರಿ ಜಿಂಜಿನಾ ಪ್ರದೇಶದಲ್ಲಿ ಈ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಈ ವೇಳೆ ಈ ಆರೋಪಿಗಳು ಸಾವನ್ನಪ್ಪಿದ್ದು, ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಉತ್ತರ ಪ್ರದೇಶ ಎಸ್‌ಟಿಎಫ್, ಕಾನೂನು ಮತ್ತು ಸುವ್ಯವಸ್ಥೆ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮಿತಾಬ್ ಯಶ್ ಹೇಳಿದ್ದಾರೆ.ಮುಸ್ತಫಾ ಕಗ್ಗ ಗ್ಯಾಂಗ್ ಸದಸ್ಯ ಅರ್ಷದ್ ಮತ್ತು ಆತನ ಮೂವರು ಸಹಚರರಾದ ಮಂಜೀತ್, ಸತೀಶ್ ಹಾಗೂ ಮತ್ತೊಬ್ಬ ವ್ಯಕ್ತಿ ನಡುವೆ ಎಸ್‌ಟಿಎಫ್ ಮೀರತ್ ತಂಡ ENCOUNTER ನಡೆಸಿದೆ.
ಅರ್ಷದ್ ಕೊಲೆ ಮತ್ತು ದರೋಡೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯಾಗಿದ್ದು, ಸಹರಾನ್‌ಪುರದ ಬೆಹತ್ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ಪ್ರಕರಣ ದಾಖಲಾಗಿತ್ತು. ಈತನ ಸುಳಿವು ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನವನ್ನು ಮೀರತ್ ವಲಯದ ಎಡಿಜಿ ಘೋಷಿಸಿದ್ದರು.ಘಟನೆಯಲ್ಲಿ ಇನ್ಸ್ಪೆಕ್ಟರ್ ಸುನೀಲ್ಗೆ ಗುಂಡೇಟು ತಗುಲಿದ್ದು, ಅವರನ್ನು ಮೊದಲಿಗೆ ಕರ್ನಾಲ್‌ನ ಅಮೃತಧಾರಾ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಗುರುಗ್ರಾಮ್‌ನಲ್ಲಿರುವ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು. (ಪಿಟಿಐ)
ಇದನ್ನು ಓದಿರಿ : DOCUMENTS FOR PROPERTY BUY : ಖರೀದಿಸುವ ಆಸ್ತಿ ಯಾವ ಖಾತಾದಲ್ಲಿರಬೇಕು?