ಮುಲುಗು: ತೆಲಂಗಾಣದಲ್ಲಿ ನಕ್ಸಲ್ ನಿಗ್ರಹ ಪಡೆಯ ಎನ್ಕೌಂಟರ್ನಲ್ಲಿ 7 ಜನ ನಕ್ಸಲರು ಹತರಾಗಿದ್ದಾರೆ.
ತೆಲಂಗಾಣದ ಮುಲುಗು ಜಿಲ್ಲೆಯ ಏಟೂರು ನಾಗಾರಂ ಚಲಪಾಕ್ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ ಮತ್ತು ನಕ್ಸಲರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಏಳು ಜನ ನಕ್ಸಲರು ಹತರಾಗಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಈ ಕುರಿತು ಅಧಿಕೃತವಾಗಿ ಪೊಲೀಸರು ಮಾಹಿತಿ ನೀಡಿಲ್ಲ.
ತೆಲಂಗಾಣ ಗ್ರೆಹೌಂಡ್ಸ್ ಮತ್ತು ನಕ್ಸಲ್ ನಿಗ್ರಹ ಪಡೆಯ ಜಂಟಿ ಕಾರ್ಯಾಚರಣೆ ನಡೆಸಿ, 7 ಜನ ನಕ್ಸಲರನ್ನು ಎನ್ಕೌಂಟ್ ಮಾಡಿದೆ ಎಂದು ತಿಳಿದುಬಂದಿದೆ. ಈ ಪ್ರದೇಶದಲ್ಲಿ ನಕ್ಸಲರ ಚಲನವಲನದ ಮಾಹಿತಿ ಆಧರಿಸಿ ನಕ್ಸಲ್ ನಿಗ್ರಹ ಪಡೆ ಮತ್ತು ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಹತ ನಕ್ಸಲರನ್ನು ಇಲ್ಲಂದು ನರ್ಸಂಪೇಟ್ ಏರಿಯಾದ ಕಮಿಟಿ ಕಾರ್ಯದರ್ಶಿ ಬದ್ರು ಅಲಿಯಾಸ್ ಪಾಪಣ್ಣ (35), ಮಧು(43), ಕರುಣಾಕರ್ (22), ಜೈಸಿಂಗ್ (25), ಕಿಶೋರ್ (22) ಮತ್ತು ಕಾಮೇಶ್ (23) ಹಾಗೂ ಜಮುನ (23) ಎಂದು ಗುರುತಿಸಲಾಗಿದೆ.