ಶ್ರೀನಗರ: ‘ನಾಗರಿಕರ ಮೇಲಿನ ದಾಳಿಗೆ ಯಾವುದೇ ಸಮರ್ಥನೆ ಬೇಕಿಲ್ಲ ಸಾಧ್ಯವಾದಷ್ಟೂ ಬೇಗ ಉಗ್ರರ ಆಟಾಟೋಪ ಕೊನೆಗೊಳಿಸಿ ಎಂದು ಭಾರತೀಯ ಸೇನೆಗೆ ಸಿಎಂ ಓಮರ ಅಬ್ದುಲ್ಲಾ ಮನವಿ ಮಾಡಿದ್ದಾರೆ.
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಮಿಕರ ಮೇಲೆ ದಾಳಿ ಮಾಡಿದ್ದ ಕಮಾಂಡ್ ಸೇರಿ ಮೂವರು ಉಗ್ರರರನ್ನು ಭಾರತೀಯ ಸೇನಾ ಸಿಬ್ಬಂದಿ ಹೊಡೆದುರಳಿಸಿದ್ದರು. ಈ ದಾಳಿ ಬೆನ್ನಲ್ಲೇ ಉಗ್ರರ ವಿಚಾರವಾಗಿ ಒಮರ್ ಅಬ್ದುಲ್ಲಾ ಸರ್ಕಾರ ಮೃದು ಧೋರಣೆ ತಳೆಯುತ್ತಿದ್ದು, ಇದೇ ಕಾರಣಕ್ಕೆ ಕಣಿವೆ ರಾಜ್ಯದಲ್ಲಿ ಉಗ್ರರ ಆಟಾಟೋಪ ಹೆಚ್ಚಾಗಿದೆ.
‘ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಅಸಹಜ ಗೊಂದಲ ಸೃಷ್ಟಿಸಿಲು ಹೀಗೆ ಮಾಡಲಾಗುತ್ತಿದೆ. ಸಾಮಾನ್ಯ ಜನರನ್ನು ಗುರಿ ಮಾಡಿಕೊಂಡು ಹೀಗೆ ದಾಳಿ ನಡೆಸುವುದು ಸಹಿಸಲು ಸಾಧ್ಯವಿಲ್ಲ. ಶ್ರೀನಗರದ ‘ಸಂಡೇ ಮಾರ್ಕೆಟ್’ನಲ್ಲಿರುವ ಅಮಾಯಕ ವ್ಯಾಪಾರಿಗಳ, ಗ್ರಾಹಕರ ಮೇಲೆ ಗ್ರೆನೇಡ್ ದಾಳಿ ಆತಂಕಕಾರಿ ಸಂಗತಿಯಾಗಿದೆ. ಇದು ಅಮಾಯಕ ಜನರ ಮೇಲಿನ ದಾಳಿಯಾಗಿದ್ದು, ಖಂಡನೀಯ. ಇದಕ್ಕೆ ಯಾವ ಸಮರ್ಥನೆ ಕೇಳಲು ನಾವು ತಯಾರಿಲ್ಲ ಎಂದು ಟ್ವೀಟ್ ಮುಖಾಂತರ ತಿಳಿಸಿದ್ದಾರೆ.
‘ಶ್ರೀನಗರ ಹಾಗೂ ಇಡೀ ರಾಜ್ಯದಲ್ಲಿ ಜನರು ಯಾವುದೇ ಭಯವಿಲ್ಲದೆ ಉತ್ತಮ ಬದುಕು ನಡೆಸುವಂಥಾಗಬೇಕು. ಅದಕ್ಕಾಗಿ ಭದ್ರತಾ ವ್ಯವಸ್ಥೆ ಬಲಪಡಿಸುವ ಜೊತೆಗೆ ಈ ದಾಳಿಯನ್ನು ಶೀಘ್ರವಾಗಿ ಕೊನೆಗೊಳಿಸಲು ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಸೇನೆಗೆ ಅವರು ಮನವಿ ಮಾಡಿದ್ದಾರೆ. ಅಲ್ಲದೆ ಈ ಪೋಸ್ಟ್ ಮೂಲಕ ಪ್ರಕರಣವನ್ನು ಕೇಂದ್ರ ಸರ್ಕಾರದ ಗಮನಕ್ಕೂ ತಂದಿದ್ದಾರೆ.
ಸೇನೆಯಿಂದ ಕೊಲ್ಲಲ್ಪಟ್ಟ ಭಯೋತ್ಪಾದಕ ಉಸ್ಮಾನ್ ಲಷ್ಕರ್-ಎ-ತೊಯ್ಬಾ ಕಮಾಂಡರ್ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಧಿ ಕುಮಾರ್ ಬಿರ್ಡಿ ಅವರು ಮಾಹಿತಿ ನೀಡಿದ್ದಾರೆ.
ಒಬ್ಬ ಭಯೋತ್ಪಾದಕನನ್ನು ಕೊಂದಿದ್ದು, ಆತನನ್ನು ಉಸ್ಮಾನ್ ಎಂದು ಗುರುತಿಸಲಾಗಿದೆ. ಆತ ಸಹ ಉಗ್ರ ಸಂಘಟನೆಯಲ್ಲಿ ಆಕ್ಟಿವ್ ಆಗಿಲ್ಲ ಎನ್ನಲಾಗಿದೆ.
ಕಣವೆ ರಾಜ್ಯದಲ್ಲಿ ವಾರಗಳಿಂದ ಭಯೋತ್ಪಾದಕರು ಹಾಗೂ ಸೇನಾ ಸಿಬ್ಬಂದಿ ನಡುವೆ ಸರಣಿ ಗುಂಡಿನ ಚಕಮಕಿ ನಡೆಯುತ್ತಿದೆ. ಶನಿವಾರ ಶ್ರೀನಗರದ ಖನ್ಯಾರ್ ಪ್ರದೇಶದಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕನನ್ನು ಸೈನಿಕರು ನೆಲ್ಲಕ್ಕುರುಳಿಸಿದ್ದಾರೆ.