spot_img
spot_img

ಇಪಿಎಫ್​ಒ ಸದಸ್ಯರಿಗೆ ಹೊಸ ಸೌಲಭ್ಯ ಒದಗಿಸಿದೆ.

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸದಸ್ಯರು ಮುಂದಿನ ವರ್ಷದಿಂದ ಎಟಿಎಂನಿಂದ ನೇರವಾಗಿ ಇಪಿಎಫ್‌ಒದಲ್ಲಿ ಕಷ್ಟಪಟ್ಟು ಸಂಪಾದಿಸಿದ ಠೇವಣಿ ಹಣವನ್ನು ವಿತ್​ಡ್ರಾ ಮಾಡಲು ಸಾಧ್ಯವಾಗಲಿದೆ. ಸದ್ಯ ಇದರ ಬಗೆಗಿನ ಕಾರ್ಯಗಳು ಭರದಿಂದ ಸಾಗಿದ್ದು, ಇದಕ್ಕಾಗಿ ಸಾಫ್ಟವೇರ್​ ಅಪ್​ಡೇಟ್​ ಮಾಡಲಾಗುತ್ತಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದಾವ್ರಾ ಅವರು ಎಟಿಎಂನಿಂದ ಹಣ ವಿತ್​ಡ್ರಾ ಮಾಡುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ, ಈ ಕುರಿತು ಯಾವುದೇ ಮಾರ್ಗಸೂಚಿಗಳು ಇನ್ನೂ ಬಹಿರಂಗವಾಗಿಲ್ಲ.
ಹೊಸ ಸೌಲಭ್ಯದ ಅಡಿ ಇಪಿಎಫ್​ಒ ​​ಸದಸ್ಯರು ಎಟಿಎಂನಿಂದ ನೇರವಾಗಿ ಕ್ಲೈಮ್ ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ, ಇಪಿಎಫ್​ ​​ನ ಐಟಿ ಸಿಸ್ಟಮ್​ ಅಪ್​ಡೇಟ್​ ಮಾಡಲಾಗುತ್ತಿದೆ. ಈ ನಿರ್ಧಾರದಿಂದ ಇಪಿಎಫ್​ಒ​​ನ ಸುಮಾರು 7 ಕೋಟಿ ಸದಸ್ಯರು ಇದರ ಲಾಭ ಪಡೆಯಲಿದ್ದಾರೆ.
ಇಪಿಎಫ್​ಒ ಖಾತೆದಾರರು, ಫಲಾನುಭವಿಗಳು ಅಥವಾ ವಿಮೆ ಮಾಡಿಸಿಕೊಂಡವರು ಎಟಿಎಂನಿಂದ ಭವಿಷ್ಯ ನಿಧಿ ಹಣವನ್ನು ಹಿಂಪಡೆಯಲು ಅನುಮತಿಸಬಹುದು. ಆದರೆ, ಹಿಂಪಡೆಯುವ ಮೊತ್ತದ ಮೇಲೆ ಸರ್ಕಾರ ಮಿತಿ ವಿಧಿಸಬಹುದಾಗಿದೆ. ಗಮನಾರ್ಹ ಸಂಗತಿ ಎಂದರೆ ಇಪಿಎಫ್​ಒ ಸದಸ್ಯರು ನಿಧಿಯಲ್ಲಿ ಠೇವಣಿ ಮಾಡಿದ ಒಟ್ಟು ಮೊತ್ತದ ಶೇಕಡ 50 ರಷ್ಟು ಹೆಚ್ಚಿನ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ.
ಇಪಿಎಫ್​ ಚಂದಾದಾರರು ಒಂದು ವೇಳೆ ಮರಣ ಹೊಂದಿದರೆ ನಾಮಿನಿ ಎಟಿಎಂನಿಂದ ಹಣ ವಿತ್​ಡ್ರಾ ಮಾಡುವ ಸೌಲಭ್ಯ ಹೊಂದಬಹುದಾಗಿದೆ. ಇದಕ್ಕಾಗಿ ನಾಮಿನಿಯು ತನ್ನ ಬ್ಯಾಂಕ್ ಖಾತೆಯನ್ನು ಮರಣ ಹೊಂದಿದ ಚಂದಾದಾರರ ಇಪಿಎಫ್​ ಖಾತೆಯೊಂದಿಗೆ ಲಿಂಕ್ ಮಾಡಬೇಕಾಗುತ್ತದೆ. ಆದರೆ ಈ ಬಗ್ಗೆಯೂ ಯಾವುದೇ ಸ್ಪಷ್ಟನೆ ಇಲ್ಲ.
ಎಂಪ್ಲಾಯ್​ ಡಿಪಾಜಿಟ್​ ಲಿಂಕ್ಡ್ ಇನ್ಶುರೆನ್ಸ್ (EDLI) ಯೋಜನೆಯು ಇಪಿಎಫ್​ಒ ​​ಸದಸ್ಯರ ಮರಣದ ಸಂದರ್ಭದಲ್ಲಿ 7 ಲಕ್ಷದವರೆಗೆ ವಿಮಾ ಪ್ರಯೋಜನವನ್ನು ಒದಗಿಸುತ್ತದೆ. ಎಟಿಎಂಗಳಿಂದ ವಿಮಾ ಕ್ಲೈಮ್‌ಗಳನ್ನು ಹಿಂಪಡೆಯಲು ಸಾಧ್ಯವಾಗುತ್ತದೆ ಎಂದು ಕಾರ್ಮಿಕ ಸಚಿವಾಲಯದ ಕಾರ್ಯದರ್ಶಿ ತಿಳಿಸಿದ್ದಾರೆ. ಅಂದರೆ ನಾಮಿನಿ ಅಥವಾ ವಾರಸುದಾರರು ಸಹ ಎಟಿಎಂನಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ.
ಇಪಿಎಫ್​ಒ ನಿಯಮಗಳ ಅಡಿ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವುದು ಅವಶ್ಯಕ. ಚಂದಾದಾರರ ಬ್ಯಾಂಕ್ ಖಾತೆಯು ಇಪಿಎಫ್ ಖಾತೆಯೊಂದಿಗೆ ಲಿಂಕ್ ಆಗಿದೆ. ಆದರೆ ಭವಿಷ್ಯ ನಿಧಿಯಲ್ಲಿ ಠೇವಣಿ ಇಟ್ಟಿರುವ ಹಣವನ್ನು ಹಿಂಪಡೆಯಲು ಬ್ಯಾಂಕ್‌ನ ಎಟಿಎಂ ಅಥವಾ ಡೆಬಿಟ್ ಕಾರ್ಡ್ ಬಳಸುತ್ತಾರೆಯೇ ಅಥವಾ ಇನ್ನಾವುದೇ ಕಾರ್ಡ್ ನೀಡಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಇದರ ಬಗ್ಗೆ ಇನ್ನು ಮಾರ್ಗಸೂಚಿಗಳು ಹೊರ ಬೀಳಬೇಕಾಗಿದೆ.
ಇಪಿಎಫ್ ಚಂದಾದಾರರು ಕಷ್ಟಪಟ್ಟು ದುಡಿದ ಭವಿಷ್ಯ ನಿಧಿಯಲ್ಲಿ ಠೇವಣಿ ಇಟ್ಟಿರುವ ಹಣವನ್ನು ಎಟಿಎಂಗಳಿಂದ ಹಿಂಪಡೆಯುವ ಸೌಲಭ್ಯವನ್ನು ನೀಡಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ನವೆಂಬರ್ ಕೊನೆಯ ವಾರದಲ್ಲಿ ವರದಿಯಾಗಿದೆ. ಸರ್ಕಾರವು 2025 ರ ಹೊಸ ವರ್ಷದಲ್ಲಿ ಇಪಿಎಫ್​ಒನ ಈ ಹೊಸ ನೀತಿಯನ್ನು ಘೋಷಿಸಬಹುದು ಮತ್ತು ಇಪಿಎಫ್​ಒ ​​3.0 ಅನ್ನು ಮೇ-ಜೂನ್ 2025 ರಲ್ಲಿ ಜಾರಿಗೆ ತರಬಹುದಾಗಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

C T RAVI ARREST ISSUE – ಸಿ.ಟಿ ರವಿ ಫೇಕ್ ಎನ್ಕೌಂಟರ್ ಮಾಡುವ ಉದ್ದೇಶ ಪೊಲೀಸರಿಗೆ ಇತ್ತಾ?

Hubli News: "ತರಾತುರಿಯಲ್ಲಿ ಸಿ. ಟಿ. ರವಿ‌ ವಿರುದ್ಧ ಎಫ್​ಐಆರ್ ಮಾಡಲಾಗಿದೆ. ಕಾಮನ್ ಸೆನ್ಸ್ ಬೇಡ್ವಾ ಬೆಳಗಾವಿ ಕಮಿಷನರ್​ಗೆ. ಬೆಳಗಾವಿ ಕಮಿಷನರ್ ಅನ್​ಫಿಟ್ ಇದ್ದಾರೆ" ಎಂದು...

PM MODI TO ATTEND CHRISTMAS – ಪ್ರಧಾನಿ ಮೋದಿ ನಾಳೆ ಕ್ರಿಸ್ಮಸ್ ಆಚರಣೆಯಲ್ಲಿ ಭಾಗಿ

New Delhi News: ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಕ್ರಿಸ್​ಮಸ್ ಆಚರಣೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಸೋಮವಾರ ಸಂಜೆ...

BANDIPUR FOREST – ಬಂಡೀಪುರ ರಾತ್ರಿ ಸಂಚಾರ ನಿಷೇಧ ಸಮಸ್ಯೆ

BANDIPUR NEWS : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (BTR) ಮೂಲಕ ಹಾದು ಹೋಗುವ 24.7 ಕಿ.ಮೀ ವ್ಯಾಪ್ತಿಯಲ್ಲಿ ರಾತ್ರಿ ಸಂಚಾರ ನಿಷೇಧಕ್ಕೆ ಸಂಬಂಧಿಸಿದ ಸಮಸ್ಯೆಗಳು...

JAYADEVA HOSPITAL – ನೂತನ ಜಯದೇವ ಆಸ್ಪತ್ರೆ ಸಿಎಂ ಸಿದ್ದರಾಮಯ್ಯ ಉದ್ಘಾಟನೆ

Kalaburagi News: ಹೃದ್ರೋಗ ಆಸ್ಪತ್ರೆಯನ್ನು ಉದ್ಘಾಟಿಸುವ ಮುನ್ನ ಸಿದ್ದರಾಮಯ್ಯ, ಆಸ್ಪತ್ರೆಯ ನೀಲಿ ನಕಾಶೆಯನ್ನು ವೀಕ್ಷಿಸಿದರು. ಆಸ್ಪತ್ರೆಯನ್ನು ವಿಕ್ಷೀಸಿದ ಸಿದ್ದರಾಮಯ್ಯ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆಯವರೊಂದಿಗೆ...