HOW TO STUDY WITHOUT FALLING ASLEEP:
ವಿದ್ಯಾರ್ಥಿಗಳು ಅಧ್ಯಯನ ಮಾಡುವಾಗ ಎಚ್ಚರವಾಗಿರಲು, ಗಮನ ಕೇಂದ್ರೀಕರಿಸಲು ಪೂರಕವಾಗುವ ನಿಟ್ಟಿನಲ್ಲಿ EXPERT , ಕೆಲವು ಸರಳ ಮತ್ತು ಪರಿಣಾಮಕಾರಿಯಾದ ಸಲಹೆಗಳನ್ನು ನೀಡಿದ್ದಾರೆ.ಕೆಲವರಿಗೆ ಪುಸ್ತಕ ತೆರೆದು ಓದಲು ಕುಳಿತ ತಕ್ಷಣವೇ ನಿದ್ರೆ ಬರುತ್ತದೆ. ಹಾಗಾದ್ರೆ, ಚಿಂತಿಸಬೇಕಾದ ಅಗತ್ಯವಿಲ್ಲ.
ಅಧ್ಯಯನ ಮಾಡುವಾಗ ಎಚ್ಚರವಾಗಿರಲು ಮತ್ತು ಗಮನಕೇಂದ್ರೀಕರಿಸಲು ನಿಮಗೆ ಸಹಾಯ ಮಾಡಲು EXPERT , ಕೆಲವು ಸರಳ ಹಾಗೂ ಪರಿಣಾಮಕಾರಿಯಾದ ಸಲಹೆಗಳನ್ನು ನೀಡಿದ್ದಾರೆ. EXPERT ತಿಳಿಸಿದ ಟಾಪ್ ಟೆನ್ ಟಿಪ್ಸ್ ಇಲ್ಲಿವೆ ನೋಡಿ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಹತ್ತಿರವಿರುವಾಗ ಸಮಯ ಕೂಡ ಕಡಿಮೆ ಇರುತ್ತದೆ. ಓದಲು ಬಹಳಷ್ಟು ವಿಷಯಗಳು ಇರುತ್ತವೆ. ಇದರಿಂದ ಈ ಎಲ್ಲಾ ವಿಷಯಗಳನ್ನು ಅಧ್ಯಯನ ಮಾಡುವುದು ಸವಾಲಿನ ಕಾರ್ಯವಾಗುತ್ತದೆ.
-
Correct sitting posture should: ಏಕೆಂದರೆ, ಹಾಸಿಗೆ ಮೇಲೆ ಕುಳಿತು ಓದಿದರೆ, ನಿಮ್ಮ ದೇಹವು ವಿಶ್ರಾಂತಿ ಪಡೆಯುವಂತೆ ಸೂಚಿಸುತ್ತದೆ. ಇದರಿಂದ ನಿಮಗೆ ನಿದ್ರೆ ಬರುತ್ತದೆ. ಆದ್ದರಿಂದ ಇನ್ನು ಆದಷ್ಟು ತಪ್ಪಿಸಬೇಕು.
-
ಓದಲು ಅನುಕೂಲವಾಗಬಾರದು ಎಂಬ ಉದ್ದೇಶದಿಂದ ಮೇಜಿನ ಮುಂದೆ ಕುರ್ಚಿ ಹಾಕಿಕೊಂಡು ಕುಳಿತುಕೊಳ್ಳಿ. ಹಾಸಿಗೆಯ ಮೇಲೆ ಮಲಗಿರುವಾಗ ಅಧ್ಯಯನ ಮಾಡುವುದನ್ನು ತಪ್ಪಿಸಬೇಕು.
-
Keep the body hydrated: ಅಧ್ಯಯನ ಮಾಡುವಾಗ ಆಗಾಗ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯುತ್ತಲೇ ಇರಬೇಕು. ಇಲ್ಲದಿದ್ದರೆ, ನಿರ್ಜಲೀಕರಣದಿಂದ ಆಯಾಸ, ತಲೆನೋವು ಹಾಗೂ ಜಾಗರೂಕತೆಯ ಕೊರತೆಗೆ ಕಾರಣವಾಗುತ್ತದೆ.
-
Sit where there is proper lighting: ಹಾಸಿಗೆಯ ಪಕ್ಕದಲ್ಲಿರುವ ದೀಪಗಳ ಮಂದ ಬೆಳಕಿನಲ್ಲಿ ಓದಲು ಕುಳಿತುಕೊಳ್ಳಬಾರದು. ಸರಿಯಾದ ಬೆಳಕಿನಲ್ಲಿ ಅಧ್ಯಯನ ಮಾಡುವುದು ಏಕಾಗ್ರತೆ ಹಾಗೂ ಗಮನಕೇಂದ್ರಿಕರೀಸಲು ಸಹಾಯ ಮಾಡುತ್ತದೆ. ಇದರಿಂದ ಓದಿದ್ದು ಸರಿಯಾಗಿ ನೆನಪಿನಲ್ಲಿ ಉಳಿಯುತ್ತದೆ.
-
Eat breakfast, lunch regularly: ಅಧ್ಯಯನ ಮಾಡುವ ಮೊದಲು ಅತಿಯಾಗಿ ಆಹಾರ ಸೇವಿಸುವುದು ಕೂಡ ಹೆಚ್ಚು ನಿದ್ರೆ ಬರುವಂತೆ ಮಾಡುತ್ತದೆ. ಎಚ್ಚರವಾಗಿರಲು ಮತ್ತು ಚೈತನ್ಯದಿಂದ ಇರಲು ನಿಯಮಿತವಾಗಿ ಉಪಹಾರ, ಊಟ ಸೇವಿಸುವುದು ಒಳ್ಳೆಯದು.
-
Get a good night’s sleep: ರಾತ್ರಿ ಚೆನ್ನಾಗಿ ನಿದ್ರೆ ಮಾಡಿದ್ರೆ ಹಗಲಿನಲ್ಲಿ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ.ಹಗಲಿನಲ್ಲಿ ಉಲ್ಲಾಸದಿಂದಿರಲು ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕಾಗುತ್ತದೆ. ಬೇಗ ಮಲಗಿ ಹಾಗೂ ಬೇಗ ಎದ್ದೇಳಲು ರೂಢಿ ಮಾಡಿಕೊಳ್ಳಿ. ಇದರಿಂದ ಅಧ್ಯಯನ ಮಾಡುವಾಗ ಮನಸ್ಸು ಶಾಂತವಾಗಿರುತ್ತದೆ.
-
Take a nap in the afternoon: ನೀವು ಮಧ್ಯಾಹ್ನ ನಿದ್ರಿಸುತ್ತಿದ್ದರೆ, ಕಿರು ನಿದ್ರೆ ಮಾಡಬಹುದು. ಇದು ನಿಮ್ಮ ಶಕ್ತಿಯ ಮಟ್ಟವನ್ನು ಮರುಪೂರಣಗೊಳಿಸುತ್ತದೆ. ರಿಫ್ರೆಶ್ ಆಗಿರುವಂತೆ ಮಾಡುತ್ತದೆ.
-
Eat frequent snacks: ಈ ತಿಂಡಿಗಳು ತ್ವರಿತ ಶಕ್ತಿಯನ್ನು ಒದಗಿಸುತ್ತವೆ. ಚಹಾ ಅಥವಾ ಕಾಫಿ ಅರೆನಿದ್ರಾವಸ್ಥೆಯನ್ನು ಎದುರಿಸಲು ಸಹಾಯ ಮಾಡುತ್ತದೆ. ಆದರೆ ಅವುಗಳನ್ನು ಮಿತವಾಗಿ ಸೇವಿಸಬಹುದು. ಪ್ರೋಟೀನ್ ಭರಿತ ಆಹಾರ, ಚಾಕೊಲೇಟ್‌ಗಳು, ಬೀಜಗಳು ಅಥವಾ ಹಣ್ಣುಗಳನ್ನು ಪಕ್ಕದಲ್ಲಿ ಇಟ್ಟುಕೊಳ್ಳಿ.
-
Read simple things at night time: ನಿಮ್ಮ ಮೆದುಳು ಸ್ವಾಭಾವಿಕವಾಗಿ ಹೆಚ್ಚು ಸಕ್ರಿಯವಾಗಿರುವ ಬೆಳಿಗ್ಗೆ ಸಮಯದಲ್ಲಿ ಕಠಿಣ, ಸವಾಲಿನ ವಿಷಯಗಳನ್ನು ಅಧ್ಯಯನ ಮಾಡಿದರೆ ಉತ್ತಮ.ತಡರಾತ್ರಿಯ ಅಧ್ಯಯನ ಮಾಡುವಾಗ ಆಸಕ್ತಿದಾಯಕ ಮತ್ತು ಸರಳವಾದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
-
Be Physically Active: ಹೆಚ್ಚು ಹೊತ್ತು ಒಂದೇ ಸ್ಥಾನದಲ್ಲಿ ಕುಳಿತುಕೊಳ್ಳುವುದು ನಿಮ್ಮನ್ನು ಆಲಸ್ಯಕ್ಕೆ ಕಾರಣವಾಗಬಹುದು. ನಿಮ್ಮ ದೇಹ ಮತ್ತು ಮನಸ್ಸನ್ನು ಪುನರುಜ್ಜೀವನಗೊಳಿಸಲು ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ, ಸ್ವಲ್ಪ ಹೊತ್ತು ವಾಕಿಂಗ್ ಮಾಡಿ.
-
Activate the brain: EXPERT ಈ ಸಲಹೆಗಳೊಂದಿಗೆ ನೀವು ಅಧ್ಯಯನ ಮಾಡಿದರೆ, ನಿದ್ರೆ ಬರುವ ದೂರ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಕಲಿಕಾ ಸಮಯವನ್ನು ಹೆಚ್ಚು ಪರಿಣಾಮಕಾರಿಯಾಗಿಸಬಹುದು. ಶಿಸ್ತುಬದ್ಧವಾಗಿ ಪರೀಕ್ಷೆಗೆ ತಯಾರಿ ನಡೆಸಿದರೆ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು EXPERT ತಿಳಿಸುತ್ತಾರೆ.
-
ನೀವು ಓದಿರುವುದನ್ನು ನೋಡದೆ ಬರೆಯುವ ಅಭ್ಯಾಸವನ್ನು ಮಾಡಬೇಕಾಗುತ್ತದೆ. ಇದು ನಿಮ್ಮ ಮೆದುಳನ್ನು ಆ್ಯಕ್ಟಿವ್ ಆಗಿ ಇರಿಸುತ್ತದೆ. ಜೊತೆಗೆ ಸ್ಮರಣೆಯನ್ನು ಬಲಪಡಿಸುತ್ತದೆ. ಜೋರಾಗಿ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ, ಇದು ಗಮನಹರಿಸಲು ಮತ್ತೊಂದು ಉತ್ತಮ ತಂತ್ರವಾಗಿದೆ.
ಇದನ್ನು ಓದಿರಿ : STATES TAX SHARE : ರಾಜ್ಯಗಳಿಗೆ ತೆರಿಗೆ ಪಾಲು: ಕರ್ನಾಟಕಕ್ಕೆ 6,310 ಕೋಟಿ,