spot_img
spot_img

ಧೋನಿ ಜಾಗಕ್ಕೆ ಸ್ಫೋಟಕ ಬ್ಯಾಟ್ಸಮನ್ ಎಂಟ್ರಿ; ಚೆನ್ಯೈ ತಂಡದ ನಾಯಕತ್ವದಿಂದ ರುತುರಾಜ್‌ಗೆ ಕೊಕ್!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬಹುನಿರೀಕ್ಷಿತ 2025ರ ಇಂಡಿಯನ್​​ ಪ್ರೀಮಿಯರ್​ ಲೀಗ್​​ ಆಕ್ಷನ್​ಗೆ ಕ್ಷಣಗಣನೆ ಶುರುವಾಗಿದೆ. ಮೆಗಾ ಆಕ್ಷನ್​ಗೆ ಮುನ್ನವೇ ಹಲವು ಐಪಿಎಲ್​ ತಂಡಗಳು ಮೆಗಾ ಡೀಲ್​ಗೆ ಇಳಿದಿವೆ. ಚೆನ್ನೈ ಸೂಪರ್​ ಕಿಂಗ್ಸ್​ ಕೂಡ ಡೆಲ್ಲಿ ಕ್ಯಾಪಿಟಲ್ಸ್​ ಜೊತೆ ಮೆಗಾ ಟ್ರೇಡ್​ ಮಾಡಲಿದೆ ಎಂದು ವರದಿಯಾಗಿದೆ.

2024ರ ಐಪಿಎಲ್​  (IPL) ಸೀಸನ್​ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡದ ನಾಯಕನ ಸ್ಥಾನದಿಂದ ರೋಹಿತ್ ಶರ್ಮಾ ಅವರನ್ನು ತಗೆಯಲಾಯಿತ್ತು. ಅಲ್ಲದೆ ತಂಡದ ಹೊಸ ನಾಯಕನಾಗಿ ಹಾರ್ದಿಕ್ ಪಾಂಡ್ಯರನ್ನು ಆಯ್ಕೆ ಮಾಡಲಾಗಿತ್ತು. ಬಳಿಕ ಮುಂಬೈ ಇಂಡಿಯನ್ಸ್​ ಹಾರ್ದಿಕ್​ ಪಾಂಡ್ಯ ನೇತೃತ್ವದಲ್ಲಿ ಹೀನಾಯ ಸೋಲು ಕಂಡಿತ್ತು. ಈಗ 2025ರ ಐಪಿಎಲ್​ (IPL)  ಸೀಸನ್​ಗೆ ಭರ್ಜರಿ ತಯಾರಿ ನಡೆದಿದ್ದು, ರೋಹಿತ್​ ಶರ್ಮಾ ಮುಂಬೈ ತೊರೆಯೋದು ಪಕ್ಕಾ ಆಗಿದೆ.

ಇನ್ನು, ಮುಂಬೈ ಇಂಡಿಯನ್ಸ್​ ಬಿಡೋದು ಪಕ್ಕಾ ಆಗುತ್ತಿದ್ದಂತೆ ರೋಹಿತ್​​ ಶರ್ಮಾ ಅವರನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಪ್ಲ್ಯಾನ್ ರೂಪಿಸಿದೆ. ನಾಯಕನ ಸ್ಥಾನದಿಂದ ಕೆಳಗಿಳಿದಿರೋ ರೋಹಿತ್​ ಶರ್ಮಾ ಅವರನ್ನು ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಸಂಪರ್ಕಿಸಿದೆ. 2025ರ ಮೆಗಾ ಆಕ್ಷನ್​ಗೆ ಮುನ್ನವೇ ಹಿಟ್​ಮ್ಯಾನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್​ ಟ್ರೇಡ್ ಮಾಡಿಕೊಳ್ಳುವ ಸಾಧ್ಯತೆ ಇದೆ.

ಸದ್ಯ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕ್ಯಾಪ್ಟನ್​​ ಆಗಿರೋ ಪಂತ್​ಗೆ ಬ್ಯಾಡ್​ನ್ಯೂಸ್​ ಬಂದಿದೆ. ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಪಂತ್​ ಅವರನ್ನು ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಟ್ರೇಡ್​ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಕಳೆದ ಸೀಸನ್​ನಲ್ಲಿ ಪಂತ್​​​ ಡೆಲ್ಲಿ ಕ್ಯಾಪಿಟಲ್ಸ್​ ಪರ ಅದ್ಭುತ ಬ್ಯಾಟಿಂಗ್​ ಮಾಡಿ 400ಕ್ಕೂ ಹೆಚ್ಚು ರನ್​​ ಕಲೆ ಹಾಕಿದ್ರು.

ಚೆನ್ನೈ ತಂಡದ ಕ್ಯಾಪ್ಟನ್​ ಪಂತ್​​..!

ಕಳೆದ ಸೀಸನ್​ನಲ್ಲಿ ರುತುರಾಜ್​ ಗಾಯಕ್ವಾಡ್​​ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕನಾಗಿ  ಉತ್ತಮ ಪ್ರದರ್ಶನ ನೀಡಿರಲಿಲ್ಲ. ಹಾಗಾಗಿ ಈ ಸಲ ಸಿಎಸ್​​ಕೆ ನಾಯಕನನ್ನು ಬದಲಾವಣೆ​ ಮಾಡೋ ಪ್ಲಾನ್​ ಇದೆ. ಡೆಲ್ಲಿ ಕ್ಯಾಪಿಟಲ್ಸ್​ಗೆ ರೋಹಿತ್​ ಕ್ಯಾಪ್ಟನ್​ ಆಗಲಿದ್ದು, ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಕ್ಯಾಪ್ಟನ್​ ಆಗಿ ಪಂತ್​ ನೇಮಕವಾಗಲಿದ್ದಾರೆ ಎಂದು ಗಮಕ್ಕೆ ಬಂದಿದೆ.

 

 

WhatsApp Group Join Now
Telegram Group Join Now
Instagram Account Follow Now
spot_img

Related articles

STOCK MARKET: ಸೆನ್ಸೆಕ್ಸ್ 425 ಅಂಶ ಕುಸಿತ, 22,795ಕ್ಕಿಳಿದ ನಿಫ್ಟಿ

Mumbai News: ಎನ್ಎಸ್ಇ ನಿಫ್ಟಿ 50 ಕೂಡ 127.25 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 22,795.90 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ...

PRE BUDGET MEETING:ಮುಂಬರುವ 2025-26ರ ರಾಜ್ಯ ಬಜೆಟ್ನಲ್ಲಿ ಕಾಸಿಯಾದ ನಿರೀಕ್ಷೆಗಳೇನು?

Bangalore News : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ BUDGET ಪೂರ್ವ ಸಭೆ ನಡೆಸಿ...

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...

AYODHYA SHRI RAM TEMPLE:ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ

Ayodhya (Uttar Pradesh) News: ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು AYODHYA ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5...