spot_img
spot_img

ಆಧಾರ್​ ಅಪ್​ಡೇಟ್‌ಗೆ ಗಡುವು ವಿಸ್ತರಣೆ: ಫ್ರೀಯಾಗಿ ಅಪ್​ಡೇಟ್ ಮಾಡಿ

spot_img
spot_img

Share post:

UIDAI myAadhaar ಪೋರ್ಟಲ್‌ನಲ್ಲಿ ಇತ್ತೀಚಿನ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ಉಚಿತವಾಗಿ ಅಪ್​ಡೇಟ್​ ಮಾಡಬಹುದು.

ಆಧಾರ್ ಕಾರ್ಡ್ ಅಪ್​ಡೇಟ್​ ಮಾಡುವವರಿಗೆ ಇದು ಪ್ರಮುಖ ಮಾಹಿತಿ. UIDAI (ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ) ಆಧಾರ್ ಅಪ್​ಡೇಟ್​ಗಾಗಿ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಕೊನೆಯ ದಿನಾಂಕವನ್ನು ಡಿಸೆಂಬರ್ 14 ರವರೆಗೆ ವಿಸ್ತರಿಸಿದೆ.

ನೀವು ಆಧಾರ್ ಕಾರ್ಡ್ ಅಪ್​ಡೇಟ್​ ಮಾಡಲು ನೀವು ಬಯಸಿದರೆ, ನಾವು ನಿಮಗೆ ಕೆಲವು ಮಾಹಿತಿಯನ್ನು ನೀಡಲಿದ್ದೇವೆ. ಈ ಮಾಹಿತಿಯ ಸಹಾಯದಿಂದ ನೀವು ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಸುಲಭವಾಗುತ್ತದೆ.

UIDAI ಅಪ್‌ಡೇಟ್ ಪ್ರಕಾರ, ದಾಖಲೆಗಳನ್ನು ಅಪ್‌ಲೋಡ್ ಮಾಡಲು ಕೊನೆಯ ದಿನಾಂಕವನ್ನು ಡಿಸೆಂಬರ್ 14 ಎಂದು ನಿಗದಿಪಡಿಸಲಾಗಿದೆ. ಅಂದರೆ ನೀವು ಈ ಮಧ್ಯೆ ಆಧಾರ್ ಕಾರ್ಡ್ ಅಪ್​ಡೇಟ್​ಗೆ ಸಂಬಂಧಿಸಿದ ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದು. ಈಗ ಹೆಸರು ಬದಲಾವಣೆಗೆ ಗೆಜೆಟ್ ಕಡ್ಡಾಯ. ವಂಚನೆಗಳನ್ನು ತಡೆಯಲು ಯುಐಡಿಎಐ ಈ ಕ್ರಮ ಕೈಗೊಂಡಿದೆ.

ಐಡಿ ಪ್ರೂಪ್​, ವಿಳಾಸ ಪುರಾವೆಯ ಮಾಹಿತಿಯನ್ನು ಡಿಸೆಂಬರ್ 14ರವರೆಗೆ ಅಪ್‌ಲೋಡ್ ಮಾಡಬಹುದು. UIDAI ನೀಡಿದ ಗಡುವಿನೊಳಗೆ ನೀವು ಈ ಕಾರ್ಯವನ್ನು ಪೂರ್ಣಗೊಳಿಸಬೇಕು.

ಆಧಾರ್ ಕಾರ್ಡ್ ನವೀಕರಿಸಲು ಗೆಜೆಟ್ ಅಗತ್ಯವಿದೆ. ಈ ನಿಟ್ಟಿನಲ್ಲಿ ಯುಐಡಿಎಐ ಹೊಸ ನಿರ್ಧಾರ ಕೈಗೊಂಡಿದೆ. ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ವಂಚನೆಗೆ ಕಡಿವಾಣ ಹಾಕಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಈಗ ಹೆಸರು ಬದಲಾಯಿಸಬೇಕಾದರೆ ಗೆಜೆಟ್ ಪೇಪರ್ ಕೊಡಬೇಕು. ಇತರ ಬದಲಾವಣೆಗಳನ್ನೂ ಸಹ ಮಾಡಬಹುದು. ಆದರೆ ಅದಕ್ಕಾಗಿ ನೀವು ಪೋಷಕ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಈ ಕುರಿತು ಇತ್ತೀಚೆಗೆ ನಿರ್ಧಾರ ಕೈಗೊಳ್ಳಲಾಗಿದೆ.

ನೀವು ಯುಐಡಿಎಐ ಕೇಂದ್ರಕ್ಕೆ ಭೇಟಿ ನೀಡುವ ಮೂಲಕವೂ ಅಪ್​ಡೇಟ್​ ಮಾಡಬಹುದು. ನೀವು DOBನಲ್ಲಿ ಯಾವುದೇ ತಿದ್ದುಪಡಿಗಳನ್ನು ಮಾಡಲು ಬಯಸಿದರೆ ನೀವು ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕು. ಏಕೆಂದರೆ ಈ ಬದಲಾವಣೆಯನ್ನು ಆನ್‌ಲೈನ್‌ನಲ್ಲಿ ಮಾಡಲಾಗುವುದಿಲ್ಲ. ಅದಕ್ಕಾಗಿ ಹತ್ತಿರದ ಕೇಂದ್ರಕ್ಕೆ ಹೋಗುವುದು ಕಡ್ಡಾಯವಾಗಿರುತ್ತದೆ.

ಆಧಾರ್ ಕಾರ್ಡ್ ನೀಡುವ ಪ್ರಾಧಿಕಾರ ಯುಐಡಿಎಐ (ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ-ಯುಐಡಿಎಐ) ಇದೀಗ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಉಚಿತ ಆಧಾರ್ ಕಾರ್ಡ್ ಅಪ್​ಡೇಟ್​ ಸೌಲಭ್ಯವನ್ನು ಕೊನೆಗೊಳಿಸಲಿದೆ. ಸೆಪ್ಟೆಂಬರ್ 14ರ ನಂತರ, ಯಾವುದೇ ರೀತಿಯ ಅಪ್​ಡೇಟ್​ಗಾಗಿ ನೀವು 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಹೀಗಾಗಿ ನೀವು ಇನ್ನೂ ಎರಡು ದಿನಗಳ ಸಮಯವನ್ನು ಹೊಂದಿದ್ದೀರಿ. ಇದರಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್​ಡೇಟ್​ ಮಾಡಿಕೊಳ್ಳಬಹುದು. ಉಚಿತ ಆಧಾರ್ ಕಾರ್ಡ್ ಅಪ್​ಡೇಟ್​ ಅವಧಿ ಈಗಾಗಲೇ ವಿಸ್ತರಿಸಲ್ಪಟ್ಟಿದೆ. ಆದ್ದರಿಂದ ಈ ಬಾರಿ ಸೆಪ್ಟೆಂಬರ್ 14ರ ನಂತರ ದಿನಾಂಕವನ್ನು ವಿಸ್ತರಿಸುವ ಸಾಧ್ಯತೆ ತುಂಬಾ ಕಡಿಮೆ.

ಹಂತ 1: myAadhaar ಪೋರ್ಟಲ್‌ಗೆ ಹೋಗಿ.
ಹಂತ 2: Enter ಆಯ್ಕೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆ, ಕ್ಯಾಪ್ಚ ಕೋಡ್ ನಮೂದಿಸಿ. ‘ಸೆಂಡ್ OTP’ ಆಯ್ಕೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ OTP ಸ್ವೀಕರಿಸಿದ ನಂತರ, ಅದನ್ನು ನಮೂದಿಸಿ ಮತ್ತು ಆಯ್ಕೆಯನ್ನು ಕ್ಲಿಕ್ಕಿಸಿ.
ಹಂತ 3: ಡಾಕ್ಯುಮೆಂಟ್ ಅಪ್‌ಡೇಟ್ ಆಯ್ಕೆಯ ಮೇಲೆ ಕ್ಲಿಕ್ಕಿಸಿ.
ಹಂತ 4: ಸೂಚನೆಗಳನ್ನು ಓದಿದ ನಂತರ ಮುಂದಿನ ಆಯ್ಕೆ ಕ್ಲಿಕ್ಕಿಸಿ.
ಹಂತ 5: ನಿಮ್ಮ ವಿವರಗಳನ್ನು ಪರಿಶೀಲಿಸಿದ ನಂತರ ಪುಟದಲ್ಲಿ ನೀಡಲಾದ ‘ಮೇಲಿನ ವಿವರಗಳು ಸರಿಯಾಗಿವೆಯೇ ಎಂದು ನಾನು ಪರಿಶೀಲಿಸುತ್ತೇನೆ’ ಎಂಬ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು ಮುಂದಿನ ಆಯ್ಕೆಗೆ ತೆರಳಿ.
ಹಂತ 6: ID ಪುರಾವೆ ಮತ್ತು ವಿಳಾಸ ಪುರಾವೆಗಾಗಿ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಸಲ್ಲಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲಾಗುತ್ತದೆ. ಇದರ ನಂತರ, ನಿಮ್ಮ ನವೀಕರಿಸಿದ ಆಧಾರ್ ಕಾರ್ಡ್ 7 ದಿನಗಳಲ್ಲಿ ಅಪ್​ಡೇಟ್​ ಆಗುತ್ತದೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...