WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
ಉಡುಪಿ: ಕೆನರಾ ಬ್ಯಾಂಕ್ ಉಡುಪಿ ಶಾಖೆಯಲ್ಲಿ 500 ರೂ. ಮುಖ ಬೆಲೆಯ ಐದು ಖೋಟಾ ನೋಟುಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಆ.30ರಂದು ಬೆಳಗ್ಗೆ ಅನಾಮಧೇಯ ವ್ಯಕ್ತಿಯೊಬ್ಬ ಬಂದು ರೇವು ಎಂಬವರ ಖಾತೆಗೆ 50,000 ರೂ. ಹಣವನ್ನು ಡೆಪಾಸಿಟ್ ಮಾಡಿದ್ದರು. ಆ ವೇಳೆ ಬ್ಯಾಂಕ್‌ನಲ್ಲಿ ತುಂಬಾ ಜನರಿದ್ದ ಕಾರಣ ಕ್ಯಾಶಿಯರ್ ಮುರುಳಿ ಅವರಿಗೆ ಇದು ಗಮನಕ್ಕೆ ಬಂದಿರಲಿಲ್ಲ. ಬಿಡುವಿನ ವೇಳೆ ಕ್ಯಾಶಿಯರ್ ಎಲ್ಲ ಹಣವನ್ನು ಮೆಷಿನ್‌ನಲ್ಲಿ ಹಾಕಿ ಪರಿಶೀಲಿಸುವಾಗ 500 ರೂ. ಮುಖಬೆಲೆಯ 5 ಖೋಟಾ ನೋಟುಗಳು ಇರುವುದು ಕಂಡುಬಂದಿದೆ. ಬ್ಯಾಂಕ್‌ನ ಚಿಫ್ ಮ್ಯಾನೇಜರ್ ಜೆಸ್ಟಿನ್ ಮ್ಯಾಥ್ಯೂ ನೀಡಿದ ದೂರಿನಡಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.