ಬೆಳಗಾವಿ: ಸುವರ್ಣಸೌಧದ ಎದುರು ಲಕ್ಷಾಂತರ ಪಂಚಮಸಾಲಿಗಳು ಅನೇಕ ವಕೀಲರ ನೇತೃತ್ವದಲ್ಲಿ ಜಮಾಯಿಸಿ ಸಮುದಾಯದ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರವನ್ನು ಒತ್ತಾಯಿಸಲಿದ್ದಾರೆ.
ಸೂರ್ಯ-ಚಂದ್ರರು ಇರುವುದು ಎಷ್ಟು ಸತ್ಯವೋ.. ಡಿ.10ರಂದು ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ನಮ್ಮ ನೋವನ್ನು ವ್ಯಕ್ತಪಡಿಸಿ, ಮೀಸಲಾತಿ ಪಡೆಯೋದು ಕೂಡ ಅಷ್ಟೇ ಸತ್ಯ ಎಂದು ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೆ ಜಗದೀಶ ಶೆಟ್ಟರ್, ಯಡಿಯೂರಪ್ಪ, ಬೊಮ್ಮಾಯಿ ಅವರು ಮುಖ್ಯಮಂತ್ರಿ ಇದ್ದಾಗಲೂ ಸುವರ್ಣ ಸೌಧ ಮುಂದೆ ಉಪವಾಸ ಸತ್ಯಾಗ್ರಹ, ಹೋರಾಟ ಮಾಡಿದ್ದೇವೆ. ಹಾಗಾಗಿ, ಡಿ.10ರಂದು ವಕೀಲರ ಪರಿಷತ್ ಮುಂದಾಳತ್ವದಲ್ಲಿ ಸುಮಾರು 5 ಸಾವಿರ ಟ್ರ್ಯಾಕ್ಟರ್ ಗಳೊಂದಿಗೆ ಲಕ್ಷಾಂತರ ಪಂಚಮಸಾಲಿಗರು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ತಿಳಿಸಿದರು.
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ‘2ಎ’ ಮೀಸಲಾತಿ ನೀಡಬೇಕು ಎಂಬ ಬೇಡಿಕೆಗೆ ಸರ್ಕಾರ ಸ್ಪಂದಿಸದ ಕಾರಣ ಡಿ.10 ರಂದು ಬೆಳಗಾವಿಯ ಸುವರ್ಣಸೌಧದ ಹೊರಗೆ ಪ್ರತಿಭಟನೆ ನಡೆಸಲಾಗುವುದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಂಗಳವಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುವರ್ಣಸೌಧದ ಎದುರು ಲಕ್ಷಾಂತರ ಪಂಚಮಸಾಲಿಗಳು ಅನೇಕ ವಕೀಲರ ನೇತೃತ್ವದಲ್ಲಿ ಜಮಾಯಿಸಿ ಸಮುದಾಯದ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರವನ್ನು ಒತ್ತಾಯಿಸಲಿದ್ದಾರೆಂದು ಹೇಳಿದರು.
ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿಗಳು 2013ರಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವು ವರ್ಷಗಳಿಂದ ಪಂಚಮಸಾಲಿಗಳು ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಸಮುದಾಯದ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇತ್ತೀಚೆಗೆ ಪಂಚಮಸಾಲಿ ಮುಖಂಡರ ಜೊತೆ ಸಿದ್ದರಾಮಯ್ಯ ಚರ್ಚಿಸಿದರೂ ಅವರ ಮನವಿಗೆ ಸ್ಪಂದಿಸಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಪಂಚಮಸಾಲಿಗಳು ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.
ಇದೇ ವೇಳೆ ಬೆಳಗಾವಿಯಲ್ಲಿ ನಡೆಯಲಿರುವ ಪ್ರತಿಭಟನೆಗೆ ರಾಜ್ಯ ಸರ್ಕಾರ ಅಡ್ಡಿಪಡಿಸುವಂತಿಲ್ಲ. ಅಡ್ಡಿಪಡಿಸಿದ್ದೇ ಆದರೆ, ಪ್ರತಿಭಟನೆ ವಿಕೋಪಕಕೆ ಹೋಗಲಿದೆ ಎಚ್ಚರಿಸಿದರು. ಅಲ್ಲದೆ, ಪ್ರತಿಭಟನೆಗಾಗಿ ಸುವರ್ಣಸೌಧದ ಬಳಿ 5,000 ಟ್ರ್ಯಾಕ್ಟರ್‌ಗಳನ್ನು ತರಲಾಗುವುದು ಎಂದು ಹೇಳಿದರು.
ಬೆಂಗಳೂರಿನಲ್ಲಿ ನಮ್ಮ ಜೊತೆಗೆ ಸಿಎಂ ಸಿದ್ದರಾಮಯ್ಯ ಸಭೆ ಮಾಡಿದ ಎರಡು ದಿನಗಳಲ್ಲಿ, ದಲಿತ ಸಮುದಾಯದ ಒಳ ಮೀಸಲಾತಿ ಸಭೆಯಲ್ಲಿ ಕ್ಯಾಬಿನೇಟ್ ಮಿಟಿಂಗ್ ಮಾಡಿ, ಮೂರು ತಿಂಗಳೊಳಗೆ ವರದಿ ತರಿಸಿಕೊಂಡು ಒಳ ಮೀಸಲಾತಿ ಅನುಷ್ಠಾನಕ್ಕೆ ತರುವ ಭರವಸೆ ನೀಡಿದ್ದಾರೆ.
ಈ ವಿಷಯ ಕೇಳಿ ನಮಗೂ ಸಂತೋಷವಾಯಿತು.ಅದೇ ರೀತಿ ಪಂಚಮಸಾಲಿಗಳಿಗೂ ಕೂಡ ಉಪ ಚುನಾವಣೆ ನೆಪ ಹೇಳದೇ, ವರದಿ ತರಿಸಿಕೊಂಡು ಮೀಸಲಾತಿ ಘೋಷಿಸುತ್ತೇವೆ ಎಂದು ಭರವಸೆ ನೀಡಬೇಕಾಗಿತ್ತು. ಆದರೆ, ಸರ್ಕಾರ ಅದನ್ನು ಮಾಡಲಿಲ್ಲ. ಹಾಗಾಗಿ, ಬೆಂಗಳೂರಿನಲ್ಲಿ ಅವತ್ತೆ ಎಲ್ಲ ಹೋರಾಟಗಾರರು ಸೇರಿಕೊಂಡು ಬೆಳಗಾವಿ ಅಧಿವೇಶನಕ್ಕೆ ಸರ್ಕಾರ ಬಂದಾಗ ನಮ್ಮ ಆಕ್ರೋಶವನ್ನು ತೋರಿಸಬೇಕೆಂದು ನಿರ್ಧರಿಸಿದ್ದೇವು. ಆ ರೀತಿ ಈಗ ಅಹಿಂಸಾತ್ಮಕ ಚಳುವಳಿ ಕೈಗೆತ್ತಿಕೊಂಡಿದ್ದೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.