Chandigarh News:
101 FARMERS PROTEST ಗುಂಪು ಕಳೆದ ವರ್ಷ ಡಿಸೆಂಬರ್ 6, ಡಿಸೆಂಬರ್ 8 ಮತ್ತು ಡಿಸೆಂಬರ್ 14 ರಂದು ಶಂಭು ಗಡಿಯ ಮೂಲಕ ಕಾಲ್ನಡಿಗೆಯಲ್ಲಿ ದೆಹಲಿಗೆ ಹೋಗಲು ಮೂರು ಬಾರಿ ಪ್ರಯತ್ನ ಮಾಡಿತ್ತು. ಆದರೆ ಹರಿಯಾಣದಲ್ಲಿ ಪೊಲೀಸರು ಅವರನ್ನು ಅಡ್ಡಗಟ್ಟಿದ್ದರು.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಕಾನೂನು ಜಾರಿ ಮಾಡುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಲು 101 ರೈತರ ಗುಂಪು ಜನವರಿ 21ರಂದು ಶಂಭು ಗಡಿಯಿಂದ ದಿಲ್ಲಿಗೆ ಪಾದಯಾತ್ರೆಯನ್ನು ಪುನರಾರಂಭಿಸಲಿದೆ ಎಂದು ರೈತ ಮುಖಂಡ ಸರ್ವನ್ ಸಿಂಗ್ ಪಂಧೇರ್ ಗುರುವಾರ ತಿಳಿಸಿದ್ದಾರೆ. ಉಪವಾಸ ನಿರತ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಆಮರಣಾಂತ ಉಪವಾಸ ಗುರುವಾರ 52 ನೇ ದಿನಕ್ಕೆ ಕಾಲಿಟ್ಟಿದ್ದು, ಅವರಿಗೆ ಬೆಂಬಲ ಸೂಚಿಸಿ 111 FARMERS PROTEST ಮತ್ತೊಂದು ಗುಂಪು ಖಾನೌರಿ ಬಳಿಯ ಗಡಿಯ ಹರಿಯಾಣ ಭಾಗದಲ್ಲಿ ಆಮರಣಾಂತ ಉಪವಾಸ ಆರಂಭಿಸಿದೆ. ಅದಾಗಿ ಒಂದು ದಿನದ ನಂತರ ಈಗ 101 FARMERS PROTEST ಗುಂಪು ದೆಹಲಿಗೆ ಜಾಥಾ ನಡೆಸಲು ತೀರ್ಮಾನಿಸಿದೆ.
“101 ರೈತರ ಗುಂಪು ಜನವರಿ 21 ರಂದು ಶಂಭು ಗಡಿಯಿಂದ ದೆಹಲಿಗೆ ತಮ್ಮ ಜಾಥಾವನ್ನು ಪುನರಾರಂಭಿಸಲು ಎಸ್ಕೆಎಂ-ರಾಜಕೀಯೇತರ, ಕೆಎಂಎಂ ಈ ಎರಡೂ ವೇದಿಕೆಗಳು ನಿರ್ಧರಿಸಿವೆ” ಎಂದು ಪಂಧೇರ್ ಹೇಳಿದರು.ರೈತರ ಗುಂಪು ಜಾಥಾ ನಡೆಸುವುದಾಗಿ ಘೋಷಿಸಿದ ಬೆನ್ನಲ್ಲೇ ಹರಿಯಾಣ ಪೊಲೀಸರು ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163 ಅನ್ನು ಈಗಾಗಲೇ ವಿಧಿಸಲಾಗಿದ್ದು, ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ. ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಿಸಾನ್ ಮಜ್ದೂರ್ ಮೋರ್ಚಾ ನಾಯಕ ಪಂಧೇರ್, ಕಳೆದ 11 ತಿಂಗಳುಗಳಿಂದ ಶಂಭು ಮತ್ತು ಖನೌರಿಯಲ್ಲಿ ಕ್ಯಾಂಪ್ ಮಾಡುತ್ತಿರುವ FARMERS PROTEST ಬೇಡಿಕೆಗಳನ್ನು ಈಡೇರಿಸಲು ಒಪ್ಪದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಜನವರಿ 15 ರಂದು 111 ರೈತರ ಗುಂಪು ತಮ್ಮ ನಾಯಕ ದಲ್ಲೆವಾಲ್ ಅವರಿಗೆ ಬೆಂಬಲವಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಬೇಡಿಕೆಗಳು ಈಡೇರುವವರೆಗೂ ತಾವು ಪಟ್ಟು ಬಿಡುವುದಿಲ್ಲ ಎಂದು ರೈತರು ಪ್ರತಿಜ್ಞೆ ಮಾಡಿದ್ದಾರೆ. ದಲ್ಲೆವಾಲ್ ಕಳೆದ ವರ್ಷ ನವೆಂಬರ್ 26 ರಿಂದ ಪಂಜಾಬ್ ಭಾಗದ ಖನೌರಿ ಗಡಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಇದನ್ನು ಓದಿರಿ : FLOWER SHOW 2025 : ವಾಲ್ಮೀಕಿ ವಿಷಯಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಚಾಲನೆ