ಚಿಕ್ಕಮಗಳೂರು: ಕಳೆದ 25 ವರ್ಷದಿಂದ ನಷ್ಟದಲ್ಲಿದ್ದ ಕಾಫಿ ಉದ್ಯಮಕ್ಕೆ ಇತ್ತೀಚಿನ 3 ವರ್ಷದ ಅವಧಿಯಲ್ಲಿ, ಅದರಲ್ಲೂ 2024ರಲ್ಲಿ ಶುಕ್ರದೆಸೆ ಖುಲಾಯಿಸಿದೆ. ಕಾಫಿ ಧಾರಣೆ ಹಿಂದೆಂದಿಗಿಂತಲೂ ಈಗ ಏರಿಕೆ ಕಂಡಿದ್ದು ಮೊದಲ ಸುತ್ತಿನಲ್ಲಿ ಕೊಯ್ಲು ಮಾಡಿದ ಪಲ್ಪಿಂಗ್ ಆದ ಕಾಫಿಯನ್ನು ಬೆಳೆಗಾರರು ಆಗಿಂದಾಗ್ಗೆ ಮಾರುಕಟ್ಟೆಗೆ ಬಿಡುತ್ತಿದ್ದಾರೆ.ಈ ಹಿಂದೆ ಅರೇಬಿಕಾ ಪಾರ್ಚ್ಮೆಂಟ್ ಕಾಫಿ 50 ಕೆಜಿ ಚೀಲಕ್ಕೆ 11 ಸಾವಿರದಿಂದ 16 ಸಾವಿರ ರೂ. ಆಸುಪಾಸಿನಲ್ಲೇ ಗಿರಕಿ ಹೊಡೆಯುತ್ತಿತ್ತು. ಆದರೆ, ಈಗ ಅರೆಬಿಕಾ ಪಾರ್ಚ್ಮೆಂಟ್ 50 ಕೆಜಿ ಚೀಲವೊಂದಕ್ಕೆ 21250 ರೂ., ಅರೆಬಿಕಾ ಚೆರಿ 12040, ರೊಬಸ್ಟಾ ಪಾರ್ಚ್ಮೆಂಟ್ 19500 ರೂ. ಹಾಗೂ ರೊಬಸ್ಟಾ ಚೆರಿಗೆ 11880 ರೂ. ಧಾರಣೆ ಇದೆ.
ಮಲೆನಾಡಿನ ವಿವಿಧೆಡೆ ನವೆಂಬರ್ ಎರಡನೇ ವಾರದಿಂದಲೇ ಮೊದಲ ಸುತ್ತಿನ ಕಾಫಿ ಕೊಯ್ಲು ಆರಂಭವಾಗಿದೆ. ಈ ಹಿಂದೆ ಮೊದಲ ಸುತ್ತು ಎರಡನೇ ಹಾಗೂ ಮೂರನೇ ಸುತ್ತು ಕೊಯ್ಲು ಆದ ನಂತರ ಒಣಗಿದ ಕಾಫಿಯನ್ನು ಗೋದಾಮಿನಲ್ಲಿ ಸಂಗ್ರಹಿಸಿ ಉತ್ತಮ ಬೆಲೆ ಬಂದಾಗ ಮಾರುಕಟ್ಟೆಗೆ ಬಿಡುತ್ತಿದ್ದರು. ಆದರೆ, ಈ ಬಾರಿ ಆರಂಭದಲ್ಲೇ ಉತ್ತಮ ಬೆಲೆ ಇರುವುದರಿಂದ ಬಹುತೇಕರು ಕೊಯ್ದ ಕಾಫಿಯನ್ನು ಪಲ್ಪಿಂಗ್ ಮಾಡಿಸಿ ಏಳೆಂಟು ದಿನ ಒಣಗಿಸಿ ಮಾರಾಟ ಮಾಡುತ್ತಿದ್ದಾರೆ.
ಕಾಫಿ ಧಾರಣೆಯಲ್ಲಿ ದಶಕಗಳಿಂದ ಕಾಣದಷ್ಟು ಜಿಗಿತ ಉಂಟಾಗಿದೆ. ಇದು ಕಾಫಿ ಬೆಳೆಗಾರರಲ್ಲಿ ಉತ್ಸಾಹ ಹೆಚ್ಚಿಸಿದೆ. ಈ ಬೆಲೆ ಮತ್ತೆ ಸಿಗಲಾರದು ಎಂಬ ಆತಂಕವೂ ಅವರಲ್ಲಿದೆ. ಅದಕ್ಕಾಗಿಯೇ ತರಾತುರಿಯಲ್ಲಿ ಅದನ್ನು ಒಣಗಿಸಿ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಆದರೆ ಅವರ ಈ ಪ್ರಯತ್ನಕ್ಕೆ ಫೆಂಗಲ್ ಚಂಡಮಾರುತ ಅಡ್ಡಿಯಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ಕಾಫಿಗೆ ಉತ್ತಮ ಧಾರಣೆ ಇದೆ. ಮುಂದೆ ಇನ್ನೂ ಹೆಚ್ಚಾದರೆ ನಿರಾಶೆ ಪಡುವುದು ಇದ್ದೇ ಇದೆ. ಆದರೆ, ಬೆಲೆ ಕಡಿಮೆಯಾದರೆ ನಿರಾಶೆಯಾಗಲಿದೆ ಎಂಬ ಆತಂಕದಲ್ಲಿ ಬೆಳೆಗಾರರು, ಕಾಫಿ ಪಲ್ಪಿಂಗ್ ಆದ ಮೇಲೆ ಒಂದು ವಾರ ಒಣಗಿಸಿ ಮಾರಾಟಕ್ಕೆ ಮುಂದಾಗಿದ್ದಾರೆ. ಆದರೆ, ಫೆಂಗಲ್ ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು ಫಸಲು ಒಣಗಿಸಲು ಸಮಸ್ಯೆಯಾಗಿದೆ.
ಮಲೆನಾಡಿನ ವಿವಿಧೆಡೆ ನವೆಂಬರ್ ಎರಡನೇ ವಾರದಿಂದಲೇ ಮೊದಲ ಸುತ್ತಿನ ಕಾಫಿ ಕೊಯ್ಲು ಆರಂಭವಾಗಿದೆ. ಈ ಹಿಂದೆ ಮೊದಲ ಸುತ್ತು ಎರಡನೇ ಹಾಗೂ ಮೂರನೇ ಸುತ್ತು ಕೊಯ್ಲು ಆದ ನಂತರ ಒಣಗಿದ ಕಾಫಿಯನ್ನು ಗೋದಾಮಿನಲ್ಲಿ ಸಂಗ್ರಹಿಸಿ ಉತ್ತಮ ಬೆಲೆ ಬಂದಾಗ ಮಾರುಕಟ್ಟೆಗೆ ಬಿಡುತ್ತಿದ್ದರು. ಆದರೆ, ಈ ಬಾರಿ ಆರಂಭದಲ್ಲೇ ಉತ್ತಮ ಬೆಲೆ ಇರುವುದರಿಂದ ಬಹುತೇಕರು ಕೊಯ್ದ ಕಾಫಿಯನ್ನು ಪಲ್ಪಿಂಗ್ ಮಾಡಿಸಿ ಏಳೆಂಟು ದಿನ ಒಣಗಿಸಿ ಮಾರಾಟ ಮಾಡುತ್ತಿದ್ದಾರೆ.
ಗಾಳಿ ಬಂದಾಗ ತೂರಿಕೋ ಎಂಬ ಮಾತಿನಂತೆ ಬೆಲೆ ಇದ್ದಾಗ ಒಣಗಿಸಿ ಕಾಫಿ ಮಾರಾಟ ಮಾಡೋಣ ಎಂಬ ಧಾವಂತದಲ್ಲಿದ್ದ ಸಣ್ಣ ಬೆಳೆಗಾರರಿಗೆ ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲಿ ಮೋಡ ಕವಿದಿರುವುದು ಬೇಸರ ಮೂಡಿಸಿದೆ. ಇನ್ನೂ ಮೂರ್ನಾಲ್ಕು ದಿನ ಇದೇ ವಾತಾವರಣವಿರುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಯಲ್ಲಿ 1.50 ಲಕ್ಷಕ್ಕಿಂತಲೂ ಹೆಚ್ಚು ಕಾಫಿ ಬೆಳೆಗಾರರಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿ, ರೋಗಬಾಧೆ, ಕಾರ್ಮಿಕರ ಕೊರತೆ ಹೀಗೆ ಅನೇಕ ಏಳುಬೀಳುಗಳನ್ನು ಉದ್ಯಮ ಕಂಡಿದೆ. ಈ ಮಧ್ಯೆ ತಾತ, ಮುತ್ತಾತರ ಕಾಲದಿಂದ ಸಾಂಪ್ರದಾಯಿಕವಾಗಿ ಮಾಡಿಕೊಂಡು ಬಂದಿರುವ ಕಾಫಿ ಉದ್ಯಮವನ್ನು ಸಾಲ ಮಾಡಿಯಾದರೂ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಎಷ್ಟೋ ಬೆಳೆಗಾರರು ಇಂದು ಸರ್ಫೆಸಿ ಕಾಯಿದೆ ಕುಣಿಕೆಗೆ ಸಿಲುಕಿದ್ದಾರೆ.
ಅರೆಬಿಕಾ ಪಾರ್ಚ್ಮೆಂಟ್- 21250, ಅರೆಬಿಕಾ ಚೆರಿ-12040, ರೊಬಸ್ಟಾ ಪಾರ್ಚ್ಮೆಂಟ್-16500, ರೊಬಸ್ಟಾ ಚೆರಿ-11880
“ಕಾಫಿ ದರ ಏರಿಕೆಯಾಗಿದೆ ನಿಜ. ಆದರೆ, ಉತ್ಪಾದನಾ ವೆಚ್ಚ ಸಹ ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗಿದೆ. ಅನುಕೂಲಕರ ಹವಾಮಾನ ಇಲ್ಲದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಕಾಫಿ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಹಿಂದೆ ಎಕರೆಗೆ 10-20 ಚೀಲ ಕೊಯ್ದಿದ್ದಿದೆ. ಇಂದು ಎಕರೆಗೆ ಗರಿಷ್ಠ 5-6 ಚೀಲ ಸಿಗುವುದೇ ಕಷ್ಟವಾಗಿದೆ. ಈ ಮಧ್ಯೆ ಕಾರ್ಮಿಕರ ವೇತನ, ಔಷಧ, ಕೀಟನಾಶಕಗಳ ಬೆಲೆ ಕೂಡ ದುಬಾರಿಯಾಗಿದೆ. ಕಾಫಿ ಧಾರಣೆ ಏರಿದಷ್ಟೂ ಖರ್ಚುಗಳು ಕೂಡ ಏರಿಕೆಯಾಗುತ್ತಿರುವುದರಿಂದ ಈಗಿರುವ ಬೆಲೆ ಬೆಳೆಗಾರರಿಗೆ ಹೇಳಿಕೊಳ್ಳುವಂತಹ ಧಾರಣೆ ಏನೂ ಅಲ್ಲ” ಎಂದು ಚಿಕ್ಕಮಗಳೂರಿನ ಕಾಫಿ ಮಂಡಳಿ ಮಾಜಿ ಸದಸ್ಯ ಡಿ.ಎಂ.ವಿಜಯ್ ಹೇಳಿದ್ದಾರೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now