WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
Delhi News:
ಕಾಂಗ್ರೆಸ್ ಕೇಂದ್ರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಾ, ಆರ್ಎಸ್ಎಸ್ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ವಿಪಕ್ಷಗಳು ಇಂದು ಬಿಜೆಪಿ, ಆರ್ಎಸ್ಎಸ್ ವಿರುದ್ಧ ಮಾತ್ರವಲ್ಲ, ‘ INDIAN ವಿರುದ್ಧ’ವೂ ಹೋರಾಡುತ್ತಿವೆ ಎಂದರು.
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ. ನಾವು ಬಿಜೆಪಿ, ಆರ್ಎಸ್ಎಸ್ ಜೊತೆಗೆ INDIAN ರಾಜ್ಯದ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಹೇಳಿದ್ದಾರೆ.ಇದು ರಾಷ್ಟ್ರಕ್ಕೆ ಮಾಡಿದ ಅವಮಾನ ಎಂದು ಬಿಜೆಪಿ ಆರೋಪಿಸಿದೆ.
ಪಕ್ಷ ಮತ್ತು ಸಂಘಟನೆಗಳ ಮಧ್ಯೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಇರಬಹುದು. ಆದರೆ, ದೇಶ ಎಲ್ಲರಿಗೂ ಒಂದೇ. ಅಂತಹ ದೇಶದ ವಿರುದ್ಧವೇ ರಾಹುಲ್ ಗಾಂಧಿ ಹೋರಾಡಲು ಕರೆ ನೀಡಿದ್ದಾರೆ.