Bangalore News :
ಸರ್ಕಾರ ಆಗಾಗ ಹಣ ಪಾವತಿ ವಿಳಂಬ, ಹಣ ಪಾವತಿಯಲ್ಲಿನ ವ್ಯತ್ಯಯಗಳ ಆರೋಪಗಳೊಂದಿಗೆ ಪಂಚ ಗ್ಯಾರಂಟಿಗಳನ್ನು ಅನುಷ್ಠಾನ ಮಾಡುತ್ತಿದೆ. ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ ಡಿಬಿಟಿ, ಯುವನಿಧಿ ಯೋಜನೆ ಮೂಲಕ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕೇಂದ್ರಿತ ಆಡಳಿತ ನಡೆಸುತ್ತಿದೆ. ಇದೀಗ, ಕಳೆದ ಮೂರು ತಿಂಗಳಿಂದ ಮತ್ತೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯದ ಹಣ ಪಾವತಿಯಾಗದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.
2024-25ರ ಹಣಕಾಸು ವರ್ಷ ಮುಕ್ತಾಯದ ಅಂಚಿನಲ್ಲಿದ್ದು, ಸದ್ಯ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಹಣವನ್ನು ಸಮರ್ಪಕವಾಗಿ ಪಾವತಿಸದ ವಿಚಾರ ಸದ್ದು ಮಾಡುತ್ತಿದೆ. ಅಷ್ಟಕ್ಕೂ, ರಾಜ್ಯ ಸರ್ಕಾರ ಈವರೆಗೆ Five guaranteed shamsಗಳಿಗೆ ಬಿಡುಗಡೆ ಮಾಡಿದ ಹಣ ಎಷ್ಟು ಎಂಬ ವರದಿ ಇಲ್ಲಿದೆ.
How much money has been released so far?
ಅನುದಾನ ಬಿಡುಗಡೆ ಮಾಡಲಾಗಿದೆ. ಉಳಿದಿರುವ ಆರ್ಥಿಕ ವರ್ಷದ ಎರಡು ತಿಂಗಳಲ್ಲಿFive guaranteed shamsಗಳಿಗೆ ಸುಮಾರು 17,260 ಕೋಟಿ ರೂ. ಹಣ ಬಿಡುಗಡೆ ಮಾಡಬೇಕಾಗಿದೆ.
ಜನವರಿವರೆಗೆ ಸುಮಾರು 34,445 ಕೋಟಿ ರೂ.ಗಳಷ್ಟು ಹಣವನ್ನು ಗ್ಯಾರಂಟಿಗಳಿಗೆ ಖರ್ಚು ಮಾಡಲಾಗಿದೆ. ಅಂದರೆ ಅಷ್ಟೂ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ.
How much for Shakti Yojana?:
ಕೆಡಿಪಿ ಪ್ರಗತಿ ಅಂಕಿ – ಅಂಶದಂತೆ, ಶಕ್ತಿ ಯೋಜನೆಗೆ 2024-25 ಸಾಲಿನಲ್ಲಿ ಒಟ್ಟು 5,015 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಈ ಪೈಕಿ ಜನವರಿವರೆಗೆ 4,403 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಆ ಪೈಕಿ ಒಟ್ಟು 4,403 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಜನವರಿ ತಿಂಗಳಲ್ಲಿ 417 ಕೋಟಿ ರೂ., ಡಿಸೆಂಬರ್ನಲ್ಲಿ 641 ಕೋಟಿ ರೂ., ನವೆಂಬರ್ನಲ್ಲಿ 633 ಕೋಟಿ ರೂ., ಅಕ್ಟೋಬರ್ನಲ್ಲಿ 202 ಕೋಟಿ ರೂ., ಸೆಪ್ಟೆಂಬರ್ನಲ್ಲಿ 417 ಕೋಟಿ ರೂ., ಆಗಸ್ಟ್ನಲ್ಲಿ 418 ಕೋಟಿ ರೂ., ಜುಲೈನಲ್ಲಿ 418 ಕೋಟಿ ರೂ. ಹಾಗೂ ಜೂನ್ ತಿಂಗಳಿನಲ್ಲಿ 418 ಕೋಟಿ ರೂ. ವೆಚ್ಚವಾಗಿದೆ.
ಮೇ ತಿಂಗಳಲ್ಲಿ ಶಕ್ತಿ ಯೋಜನೆಗಾಗಿ 836 ಕೋಟಿ ರೂ. ವೆಚ್ಚ ಮಾಡಿದ್ದು, ಏಪ್ರಿಲ್ ತಿಂಗಳಲ್ಲಿ ಯಾವುದೇ ಹಣ ಫಲಾನುಭವಿಗಳಿಗೆ ಪಾವತಿ ಮಾಡಿರಲಿಲ್ಲ.
Funds Released for Grilahakshmi Yojana:
ಗೃಹಲಕ್ಷ್ಮಿ ಯೋಜನೆಗೆ ಈ ಆರ್ಥಿಕ ವರ್ಷದಲ್ಲಿ ಒಟ್ಟು 28,608 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಕೆಡಿಪಿ ಪ್ರಗತಿ ಅಂಕಿ – ಅಂಶದ ಪ್ರಕಾರ, ಗೃಹಲಕ್ಷ್ಮಿಗೆ ಜನವರಿವರೆಗೆ ಒಟ್ಟು 18,566 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದ್ದು, ಒಟ್ಟು 18,353 ಕೋಟಿ ರೂ. ಹಣ ಖರ್ಚು ಮಾಡಲಾಗಿದೆ. ಅದರಂತೆ, ಜನವರಿಯಲ್ಲಿ ಗೃಹಲಕ್ಷ್ಮಿಗೆ ಯಾವುದೇ ಹಣ ಖರ್ಚು ಮಾಡಿಲ್ಲ.
ಡಿಸೆಂಬರ್ ತಿಂಗಳಲ್ಲಿ 2,509 ಕೋಟಿ ರೂ., ನವೆಂಬರ್ನಲ್ಲಿ 2,391 ಕೋಟಿ ರೂ., ಅಕ್ಟೋಬರ್ನಲ್ಲಿ 4, 883 ಕೋಟಿ ರೂ., ಸೆಪ್ಟೆಂಬರ್ನಲ್ಲಿ 103 ಕೋಟಿ ರೂ., ಆಗಸ್ಟ್ನಲ್ಲಿ 2,332 ಕೋಟಿ ರೂ., ಜುಲೈನಲ್ಲಿ ಕೇವಲ 31 ಲಕ್ಷ ರೂ. ಮಾತ್ರ ಹಣ ವೆಚ್ಚ ಮಾಡಲಾಗಿದೆ.
ಜೂನ್ ಮತ್ತು ಮೇ ತಿಂಗಳಲ್ಲಿ ಯಾವುದೇ ಹಣ ಪಾವತಿಸಿಲ್ಲ. ಏಪ್ರಿಲ್ನಲ್ಲಿ 6,133 ಕೋಟಿ ರೂ. ಮೊದಲ ಕಂತು ಬಿಡುಗಡೆ ಮಾಡಲಾಗಿದೆ.
How much money is released for Griha Jyoti Yojana?:
ಗೃಹ ಜ್ಯೋತಿಗೆ ಪ್ರಸಕ್ತ ವರ್ಷದಲ್ಲಿ ಒಟ್ಟು 9,657 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಕೆಡಿಪಿ ಪ್ರಗತಿ ಅಂಕಿ – ಅಂಶದ ಪ್ರಕಾರ, ಜನವರಿವರೆಗೆ ಗೃಹ ಜ್ಯೋತಿ ಯೋಜನೆಗೆ 7,578 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಒಟ್ಟು ಪೂರ್ತಿ 7,578 ಕೋಟಿ ರೂ. ವೆಚ್ಚವಾಗಿದೆ.
ಜನವರಿ ತಿಂಗಳಲ್ಲಿ ಯೋಜನೆಗೆ 804 ಕೋಟಿ ರೂ., ಡಿಸೆಂಬರ್ನಲ್ಲಿ 804 ಕೋಟಿ ರೂ., ನವೆಂಬರ್ನಲ್ಲಿ 804 ಕೋಟಿ ರೂ., ಅಕ್ಟೋಬರ್ನಲ್ಲಿ 804 ಕೋಟಿ ರೂ.,
ಸೆಪ್ಟೆಂಬರ್ನಲ್ಲಿ 700 ಕೋಟಿ ರೂ., ಆಗಸ್ಟ್ನಲ್ಲಿ 646 ಕೋಟಿ ರೂ., ಜುಲೈನಲ್ಲಿ 604 ಕೋಟಿ ರೂ., ಜೂನ್ನಲ್ಲಿ 804 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮೇ ತಿಂಗಳಲ್ಲಿ ಶೂನ್ಯ ವೆಚ್ಚವಾಗಿದ್ದು, ಏಪ್ರಿಲ್ನಲ್ಲಿ 803 ಕೋಟಿ ರೂ. ಖರ್ಚಾಗಿದೆ.
Fund Release for Youth Fund Scheme:
ಪ್ರಸಕ್ತ ವರ್ಷದಲ್ಲಿ ಯುವನಿಧಿ ಯೋಜನೆಗೆ ಒಟ್ಟು 650 ಕೋಟಿ ರೂ. ಹಣ ಹಂಚಿಕೆ ಮಾಡಲಾಗಿದೆ. ಕೆಡಿಪಿ ಪ್ರಗತಿ ಅಂಕಿ-ಅಂಶದಂತೆ, ಜನವರಿವರೆಗೆ ಕೇವಲ 268 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದ್ದು, 212 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಜನವರಿ ತಿಂಗಳಲ್ಲಿ ಯೋಜನೆಗೆ 36 ಕೋಟಿ ವೆಚ್ಚವಾಗಿದೆ. ಡಿಸೆಂಬರ್ನಲ್ಲಿ 43 ಕೋಟಿ ರೂ., ನವೆಂಬರ್ನಲ್ಲಿ 24 ಕೋಟಿ ರೂ., ಅಕ್ಟೋಬರ್ನಲ್ಲಿ 27.15 ಕೋಟಿ ರೂ., ಸೆಪ್ಟೆಂಬರ್ನಲ್ಲಿ 26.46 ಕೋಟಿ ರೂ., ಆಗಸ್ಟ್ನಲ್ಲಿ 18 ಕೋಟಿ ರೂ., ಜುಲೈನಲ್ಲಿ 19 ಕೋಟಿ ರೂ., ಜೂನ್ನಲ್ಲಿ 15 ಕೋಟಿ ರೂ.
ಖರ್ಚು ಮಾಡಲಾಗಿದೆ. ಮೇ ತಿಂಗಳಲ್ಲಿ ಫಲಾನುಭವಿಗಳಿಗೆ ಯಾವುದೇ ಹಣ ಪಾವತಿಯಾಗಿಲ್ಲ. ಏಪ್ರಿಲ್ನಲ್ಲಿ 3.75 ಕೋಟಿ ರೂ. ಖರ್ಚಾಗಿದೆ.
Annabhagya DBT Scheme Status:
ಪ್ರಸಕ್ತ ಸಾಲಿನಲ್ಲಿ ಅನ್ನಭಾಗ್ಯ ಡಿಬಿಟಿ ಯೋಜನೆಗೆ 8,079 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಜನವರಿವರೆಗೆ ಯೋಜನೆಗೆ ಒಟ್ಟು 3,925 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಆ ಪೈಕಿ ಒಟ್ಟು 3,899 ಕೋಟಿ ರೂ. ಯೋಜನೆಗೆ ಖರ್ಚಾಗಿದೆ.
ಅದರಂತೆ, ಜನವರಿಯಲ್ಲಿ ಯೋಜನೆಗೆ 666 ಕೋಟಿ ರೂ., ಡಿಸೆಂಬರ್ನಲ್ಲಿ ಕೇವಲ 26.41 ಕೋಟಿ ರೂ., ನವೆಂಬರ್ನಲ್ಲಿ 623 ಕೋಟಿ ರೂ., ಅಕ್ಟೋಬರ್ನಲ್ಲಿ 604 ಕೋಟಿ ರೂ., ಸೆಪ್ಟೆಂಬರ್ನಲ್ಲಿ 42.22 ಕೋಟಿ ರೂ., ಆಗಸ್ಟ್ನಲ್ಲಿ 311 ಕೋಟಿ ರೂ., ಜುಲೈನಲ್ಲಿ 939 ಕೋಟಿ ರೂ., ಜೂನ್ನಲ್ಲಿ 666 ಕೋಟಿ ರೂ., ಮೇನಲ್ಲಿ 20 ಕೋಟಿ ರೂ.ಗಳನ್ನು ಯೋಜನೆಗೆ ಖರ್ಚು ಮಾಡಿದ್ದು, ಏಪ್ರಿಲ್ನಲ್ಲಿ ಯಾವುದೇ ಹಣ ಖರ್ಚಾಗಿಲ್ಲ.
ಇದನ್ನು ಓದಿರಿ : UPSC Further Extends Last Date To Apply For Civil Services Prelims Exam Till Feb 21