Bangalore News:
217ನೇ FLOWER SHOW 2025 ಇದಾಗಿದ್ದು, ಇಂದಿನ ಸಮಾರಂಭದಲ್ಲಿ ವಾಲ್ಮೀಕಿ ಗುರುಪೀಠದ ಸ್ವಾಮೀಜಿ ಪ್ರಸನ್ನಾನಂದ ಸ್ವಾಮೀಜಿ, ವಚನಾನಂದ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರನ್ನು ಸಿಎಂ ಸನ್ಮಾನಿಸಿದರು. ಪ್ರತಿಯಾಗಿ ಸ್ವಾಮೀಜಿಗಳು ಕೂಡ ಸಿಎಂ ಅವರನ್ನು ಸನ್ಮಾನಿಸಿದರು. ರಾಜಧಾನಿ ಬೆಂಗಳೂರು ನಗರದ ಸಸ್ಯಕಾಶಿ ಲಾಲ್ಬಾಗ್ನಲ್ಲಿ ಇಂದಿನಿಂದ ಜ.16 ರಿಂದ ನಡೆಯಲಿರುವ ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯಾಧಾರಿತ FLOWER SHOW 2025 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. 76ನೇ ಗಣರಾಜ್ಯೋತ್ಸವ ನಿಮಿತ್ತ ಲಾಲ್ಬಾಗ್ನ ಗಾಜಿನ ಮನೆಯಲ್ಲಿ ನಡೆಯುತ್ತಿರುವ FLOWER SHOW 2025 ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ವಸತಿ ಸಚಿವ ಜಮೀರ್ ಅಹಮದ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸ್ಥಳೀಯ ಶಾಸಕ ಉದಯ್ ಗರುಡಾಚಾರ್, ಅಧಿಕಾರಿಗಳಾದ ಡಾ.ಶಮ್ಲಾ ಇಕ್ಬಾಲ್, ರಮೇಶ್ ಡಿ.ಎಸ್. ಡಾ.ಎಂ.ಜಗದೀಶ್ ಹಾಗೂ ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
Major attractions:
Big Fat:
ವಾಲ್ಮೀಕಿ ಎಂದರೆ ಬೃಹತ್ ಹುತ್ತವಾಗಿದೆ. ಸಂಸ್ಕೃತದಲ್ಲಿ ಹುತ್ತ ಎಂದರೆ ವಾಲ್ಮೀಕಿ ಎಂಬುದಾಗಿದೆ. ಇದನ್ನು ಆಕರ್ಷಣೆ ಮಾಡುವುದರ ಸಲುವಾಗಿ ಗಾಜಿನ ಮನೆಯ ಮಧ್ಯಭಾಗದಲ್ಲಿ ವಿವಿಧ ಜಾತಿಯ ಸುಮಾರು 1.5 ಲಕ್ಷ ಹೂವುಗಳಿಂದ ಬೃಹತ್ ಹುತ್ತವನ್ನು ಅನಾವರಣ ಮಾಡಲಾಗಿದ್ದು, ಇದು ಗಾಜಿನ ಮನೆಯ ಪ್ರಮುಖ ಆಕರ್ಷಣೆಯಾಗಿರಲಿದೆ.
Valmiki Ashram:
ಗಾಜಿನ ಮನೆಯ ಎಡಬದಿಯಲ್ಲಿ ಪುಷ್ಪ ಮಾದರಿಯ ವಾಲ್ಮೀಕಿ ಆಶ್ರಮ ಮತ್ತು ರಾಮಾಯಣ ರಚನೆಗೆ ಮೂಲ ಕಾರಣವಾದ ಸನ್ನಿವೇಶದ FLOWER SHOW 2025 ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ವಿವಿಧ ರಾಜ್ಯಗಳಿಂದ ತರಿಸಿರುವ 2.75 ಲಕ್ಷ ರೂ.ಗಳ ಹೂವುಗಳನ್ನು ಬಳಸಲಾಗುತ್ತಿದೆ.
3D artwork depicting Ramayana:
ಗಾಜಿನ ಮನೆಯ ಕೇಂದ್ರ ಭಾಗದ ಹಿಂಬದಿಗೆ ರಾಮಾಯಣದ ಚಟುವಟಿಕೆ ಬಿಂಬಿಸುವ 3ಡಿ ಕಲಾಕೃತಿ ಹಾಗೂ ರಾಮಾಯಣದ ಸಾಂದರ್ಭಿಕ ಚಿತ್ರಗಳ ಅನಾವರಣವಿರಲಿದೆ.
Olegary Manuscripts of Ramayana:
ಗಾಜಿನ ಮನೆಯ ಒಳಾಂಗಣದಲ್ಲಿ ಸೂಕ್ತ ಸ್ಥಳದಲ್ಲಿ ರಾಮಾಯಣ ಮಹಾಕಾವ್ಯದ ಓಲೆಗರಿ ಹಸ್ತಪ್ರತಿಗಳನ್ನು ಪ್ರದರ್ಶನ ಮಾಡಲಾಗುವುದು. ಇದರಲ್ಲಿ ಸಾಕಷ್ಟು ಮಾಹಿತಿ ನೀಡಲಾಗಿದೆ ಎಂದು ಆಯೋಜಕರು ವಿವರಿಸಿದ್ದಾರೆ. ಇನ್ನುಳಿದಂತೆ ಹೊರಾಂಗಣದಲ್ಲಿ ಪುಷ್ಪಗಳಿಂದ ನರ್ತಿಸುವ ರಾಷ್ಟ್ರಪಕ್ಷಿ ನವಿಲು, ಹೃದಯಾಕಾರದ ಹೂವಿನ ಕಮಾನುಗಳು, ಮೆಗಾ ಫ್ಲೋರಲ್ ಫ್ಲೋ, ತೂಗುವ ಹೂವುಗಳು, ಸಸ್ಯ ಸಂತೆ ಸೇರಿ ಹಲವು ವಿಶೇಷಗಳು ಇರಲಿವೆ. ಅಲ್ಲದೇ, ಭದ್ರತೆಗಾಗಿ ಸಿಸಿ ಕ್ಯಾಮರಾಗಳು, ಪೊಲೀಸ್ ಔಟ್ ಪೋಸ್ಟ್, ಕುಡಿಯುವ ನೀರಿನ ಸೌಲಭ್ಯ ಇರಲಿದೆ.
Free entry for school children:
FLOWER SHOW 2025 ನಡೆಯುವ ಅಷ್ಟು ದಿನಗಳ ಕಾಲ ಶಾಲಾ ಮಕ್ಕಳು ಸಮವಸ್ತ್ರವನ್ನು ಧರಿಸಿ ಬಂದಲ್ಲಿ ಉಚಿತ ಪ್ರವೇಶವಿರಲಿದೆ ಎಂದು ತೋಟಗಾರಿಕಾ ಅಧಿಕಾರಿಗಳು ವಿವರಿಸಿದರು.
ಇದನ್ನು ಓದಿರಿ : LALBAGH FLOWER SHOW : ಲಾಲ್ಬಾಗ್ ಫಲಪುಷ್ಪ ಪ್ರದರ್ಶನ ನಡೆದು ಬಂದ ಹಾದಿ