Foods to Reduce Menopause Belly News:
0 ವರ್ಷದ ಬಳಿಕ ಬೆಳೆಯುತ್ತಿರುವ BELLYಯ ಸುತ್ತಲಿನ ಬೊಜ್ಜು ಬೆಳೆಯುವುದರ ಜೊತೆಗೆ ಇತರ ಕಾಯಿಲೆಗಳಿಗೆ ಅನುವು ಮಾಡಿಕೊಡುತ್ತದೆ. ಈ ಆಹಾರ ಕ್ರಮಗಳನ್ನು ಅನುಸರಿಸುವ ಮೂಲಕ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ.
ಈ ಬದಲಾವಣೆಗಳಿಗೆ ಹೊಂದಿಕೊಳ್ಳುವ ಮಹಿಳೆಯರು ಹರಸಾಹಸ ಪಡುತ್ತಾರೆ. ಸಹಜ ಸ್ಥಿತಿಗೆ ಮರಳಲು ತುಂಬಾ ಸಮಯವನ್ನು ತೆಗೆದುಕೊಳ್ಳುತ್ತಾರೆ. ಸೌಂದರ್ಯದ ಸಮಸ್ಯೆಯ ಹೊರತಾಗಿ, BELLYಯು ಇತರ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ಇದರಿಂದಾಗಿ ನಲವತ್ತರ ನಂತರ ಇಲ್ಲವೇ, ಮುಟ್ಟು ನಿಂತುಹೋದ ಹಂತದಲ್ಲಿ ಉತ್ತಮ ಕಾಳಜಿವಹಿಸುವುದರಿಂದ BELLY ಸುತ್ತಲಿನ ಫ್ಯಾಟ್ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.
BELLY ಮತ್ತು ಸೊಂಟದ ಸುತ್ತ ಬೊಜ್ಜು ಸಂಗ್ರಹವಾಗುವುದರ ಜೊತೆಗೆ ಚರ್ಮವು ಜೋತು ಬಿದ್ದಂತೆ ಕಾಣುತ್ತದೆ. ಮುಟ್ಟು ಶಾಶ್ವತವಾಗಿ ನಿಂತುಹೋದ ನಂತರ ಹೆಚ್ಚಿನ ಮಹಿಳೆಯರಲ್ಲಿ ಕೆಲವು ಬದಲಾವಣೆಗಳಾಗುವುದು ಸಹಜ.
Do you know what causes the bulge around the stomach?:ಈ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಕ್ರಮೇಣ ಹೃದ್ರೋಗ, ಉಸಿರಾಟದ ತೊಂದರೆ, ಟೈಪ್-2 ಡಯಾಬಿಟೀಸ್ ಜೊತೆಗೆ ಕ್ಯಾನ್ಸರ್ ಅಪಾಯದ ಸಾಧ್ಯತೆ ಹೆಚ್ಚಿರುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಮೇಯೊ ಕ್ಲಿನಿಕ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಈ ವಿಷಯ ಸ್ಪಷ್ಟವಾಗಿ ತಿಳಿಸಲಾಗಿದೆ.
ಮೆನೋಪಾಸ್ ಸಮಯದಲ್ಲಿ (ಮುಟ್ಟು ನಿಲ್ಲುವುದು) BELLYಯನ್ನು ಕಡಿಮೆ ಮಾಡಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ವಿವರವಾಗಿ ತಿಳಿಸಲಾಗಿದೆಮೆನೋಪಾಸ್ ಸಮಯದಲ್ಲಿ BELLY ಸುತ್ತಲಿನ ಬೊಜ್ಜಿಗೆ ಹೆಚ್ಚಾಗಲು ಹಾರ್ಮೋನುಗಳ ಪರಿಣಾಮವು ಕಾರಣವಾಗುತ್ತದೆ.
ಈ ಹಂತದಲ್ಲಿ ಈಸ್ಟ್ರೊಜೆನ್‌ನಂತಹ ಹಾರ್ಮೋನ್‌ಗಳ ಕಡಿಮೆ ಉತ್ಪಾದನೆಯಿಂದಾಗಿ ಅವುಗಳಲ್ಲಿ ಅಸಮತೋಲನ ಉಂಟಾಗುತ್ತದೆ. ಇದು BELLYಯ ಮತ್ತು ಸೊಂಟದ ಬಳಿ ಕೊಬ್ಬಿನ ಶೇಖರಣೆಯಾಗುವುದು ಹೆಚ್ಚಾಗುತ್ತದೆ. ಕೆಲವರಲ್ಲಿ ದೇಹದ ತೂಕ ಹೆಚ್ಚಾಗದಿದ್ದರೂ ಹೊಟ್ಟೆ ಸುತ್ತ ಬೊಜ್ಜು ಹೆಚ್ಚಾಗುವ ಸಮಸ್ಯೆ ಅನುಭವಿಸುತ್ತಾರೆ.
Flax Seed:ಅಗಸೆ ಬೀಜಗಳು ಆರೋಗ್ಯಕ್ಕೆ ಮಾತ್ರವಲ್ಲದೇ ತೂಕ ನಷ್ಟಕ್ಕೂ ಉತ್ತಮವಾಗಿದೆ. ಅಗಸೆ ಬೀಜಗಳು ದೇಹದಲ್ಲಿನ ಹೆಚ್ಚುವರಿ ನೀರನ್ನು ತಡೆಯುತ್ತದೆ. ಈಸ್ಟ್ರೊಜೆನ್ ಮಟ್ಟವನ್ನು ನಿಯಂತ್ರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
Cinnamon: ದಾಲ್ಚಿನ್ನಿ ಈ ಹಾರ್ಮೋನ್ ಮಟ್ಟ ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ನಮ್ಮ ದೇಹದಲ್ಲಿ ಬಿಡುಗಡೆಯಾಗುವ ಕಾರ್ಟಿಸೋಲ್ ಹಾರ್ಮೋನ್ ಒತ್ತಡವನ್ನು ಉಂಟು ಮಾಡುತ್ತದೆ. ಇದು BELLYಯಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ.
Sabja Seed:ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ BELLYಯ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ.ಸಬ್ಜಾ ಬೀಜಗಳಲ್ಲಿ ನಾರಿನಂಶ ಅಧಿಕವಾಗಿದೆ. ಇದು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ, ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತದೆ.
Apple Cider Vinegar:ಆಪಲ್ ಸೈಡರ್ ವಿನೆಗರ್ ಕೆಟ್ಟ ಕೊಬ್ಬು ಕರಗಿಸುವಲ್ಲಿ ಭರ್ಜರಿಯಾಗಿ ಕೆಲಸ ಮಾಡುತ್ತದೆ. ಇದರ ಕಡಿಮೆ ಕ್ಯಾಲೋರಿಗಳು BELLYಯ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಉತ್ತಮವಾಗಿವೆ.
ಇದಕ್ಕಾಗಿ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಒಂದು ಲೋಟ ನೀರಿನಲ್ಲಿ ತೆಗೆದುಕೊಂಡು ಗಾರ್ಗ್ಲ್ ಮಾಡಬೇಕು ಎಂದು ತಜ್ಞರು ತಿಳಿಸುತ್ತಾರೆ.
Pulses:ಇದು BELLYಯ ಸುತ್ತಲೂ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಮೇಯೊ ಕ್ಲಿನಿಕ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಈ ವಿಷಯವನ್ನು ತಿಳಿಸುತ್ತದೆ.ಬೇಳೆಕಾಳುಗಳಲ್ಲಿ ಫೋಲಿಕ್ ಆಮ್ಲ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ‘ಬಿ’, ಫೈಬರ್ ಹಾಗೂ ಪ್ರೋಟೀನ್‌ಗಳಂತಹ ಪೋಷಕಾಂಶಗಳು ಹೇರಳವಾಗಿವೆ.
Various Greens:ಹಸಿರು ಸೊಪ್ಪುಗಳಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ. ಇವುಗಳ ಸೇವನೆ ಮಾಡುವುದರಿಂದ ಒತ್ತಡ, ಚಿಂತೆ ಹಾಗೂ ಆತಂಕದಂತಹ ಮಾನಸಿಕ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹ ಮತ್ತು BELLYಯಲ್ಲಿ ಸಂಗ್ರಹವಾದ ಕೆಟ್ಟ ಕೊಬ್ಬನ್ನು ಪರೋಕ್ಷವಾಗಿ ಕಡಿಮೆ ಮಾಡಲು ಪೂರಕವಾಗುತ್ತದೆ.
Seafood:ಇಲ್ಲಿ ತಿಳಿಸಲಾಗಿರುವ ಆಹಾರಗಳನ್ನು ಸೇವಿಸುವುದರ ಜೊತೆಗೆ ತೂಕ ಎತ್ತುವುದು, ನಡಿಗೆ, ಓಟ, ಈಜು, ಸೈಕ್ಲಿಂಗ್ ಸೇರಿದಂತೆ ವಿವಿಧ ವ್ಯಾಯಾಮಗಳನ್ನು ಮಾಡುವುದರಿಂದ ನಲವತ್ತರ ನಂತರ, BELLYಯ ಸುತ್ತಲಿನ ಕೊಬ್ಬು ಕಡಿಮೆಯಾಗುತ್ತದೆ.
ಈ ನಿಯಮಗಳನ್ನು ಅನುಸರಿಸಿದ ನಂತರ ಯಾವುದೇ ಫಲಿತಾಂಶ ದೊರೆಯದಿದ್ದರೆ, ಇತರೆ ಯಾವುದೇ ಸಮಸ್ಯೆಗಳಿದ್ದರೂ ತಡಮಾಡದೆ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ ಎಂದು ತಜ್ಞರು ಸೂಚಿಸಲಾಗುತ್ತದೆ. ಮೆನೋಪಾಸ್ ಸಮಯದಲ್ಲಿ ಉಂಟಾಗುವ ಅಡ್ಡ ಪರಿಣಾಮಗಳು ಮಹಿಳೆಯರಲ್ಲಿ ವಿವಿಧ ಮಾನಸಿಕ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಇವುಗಳನ್ನು ತಪ್ಪಿಸಲು ಮೀನು, ಸಮುದ್ರ ಆಹಾರ, ಒಮೆಗಾ- 3 ಕೊಬ್ಬಿನಾಮ್ಲಗಳಿರುವ ವಾಲ್‌ನಟ್ಸ್‌ಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎಂದು ಅಧ್ಯಯನವೊಂದು ತಿಳಿಸಿದೆ.
ಇದನ್ನು ಓದಿರಿ :BIJAPUR ENCOUNTER NAXALITES: ಈ ವರ್ಷ 80ಕ್ಕೂ ಹೆಚ್ಚು ನಕ್ಸಲರ ಹತ್ಯೆ, ಇನ್ನೂ ಮುಂದುವರಿಯಲಿದೆ ಕಾರ್ಯಾಚರಣೆ.