ಕೋಲಾರ : ಕಾಂಗ್ರೇಸ್ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್‌ದಾರರಿಗೆ ನೀಡುತ್ತಿರುವ ಪ್ರತಿಯೊಬ್ಬರಿಗೂ ನೀಡುತ್ತಿರುವ 5 ಕೆ.ಜಿ ಉಚಿತ ಅಕ್ಕಿ, ಇನ್ನೂಳಿದ 5 ಕೆ.ಜಿಗೆ ಹಣ ಜಮಾ ಮಾಡಲಾಗುತ್ತಿತ್ತು. ಕೆಲವು ತಿಂಗಳಿನಿಂದ ಯಾವುದೇ ರೀತಿಯ ಹಣ ಬಂದಿಲ್ಲ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆ ಆಹಾರ ಸಚಿವರ ಸುದ್ದಿಯೊಂದನ್ನು ನೀಡಿದ್ದಾರೆ.
ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ಜಮಾ ಆಗುತ್ತಿತ್ತು. ಇತ್ತೀಚಿಗೆ ಕೆಲವು ತಿಂಗಳಗಳವರೆಗೆ ಹಣ ಜಮಾ ಆಗಿರಲಿಲ್ಲ. ಸರ್ವರ್ ಸಮಸ್ಯೆಯಿಂದ ಈ ಹಣ ಜಮಾ ಆಗಿಲ್ಲ. ಆದ್ದರಿಂದ ಮುಂದಿನ ವಾರ ಎಲ್ಲಾ ಹಣ ಒಟ್ಟಿಗೆ ಜಮಾ ಆಗುತ್ತದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದರು.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ತಿಂಗಳು 10ರಂದು ಹಣ ಬಿಡುಗಡೆ ಆಗುತ್ತಿತ್ತು. ಆದರೆ, ಸರ್ವರ್ ಸಮಸ್ಯೆಯಿಂದ ಹಣ ಬಿಡುಗಡೆ ವಿಳಂಬ ಆಗಿದೆ. ಬಾಕಿ ಹಣ ಮುಂದಿನ ವಾರ ಬಿಡುಗಡೆ ಆಗಲಿದೆ. ಅದೇ ರೀತಿ ಬಿಪಿಎಲ್ ಅರ್ಹತೆ ಪರಿಶೀಲಿಸಿ ಅನರ್ಹರನ್ನು ಎಪಿಎಲ್ಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಬಿಪಿಎಲ್ ಕಾರ್ಡ್‌ದಾರ ಕುಟುಂಬಗಳ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಬದಲಾಗಿ ಸರ್ಕಾರ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುತ್ತಿತ್ತು. ಪ್ರತಿ ಕೆಜಿ ಅಕ್ಕಿಗೆ ತಲಾ 34 ರೂಪಾಯಿನಂತೆ ಒಟ್ಟು 5 ಕೆಜಿ ಅಕ್ಕಿಗೆ 170 ರೂಪಾಯಿ ನೀಡಲಾಗುತ್ತಿತ್ತು. ಅದರಂತೆಯೇ ಫಲಾನುಭವಿಗಳ ಖಾತೆಗೆ ಹಣ ಸಹ ಜಮಾ ಆಗುತ್ತಿತ್ತು. ಆದ್ದರಿಂದ ಫಲಾನುಭವಿಗಳು ಬ್ಯಾಂಕ್‌ಗಳಿಗೆ ಬೇಟಿ ನೀಡಿ ಬೇಸತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.