spot_img
spot_img

FOREIGN DRUG PEDDLERS : ವಿದೇಶಿ ಡ್ರಗ್ಸ್ ಪೆಡ್ಲರ್ಗಳ ದಂಧೆಗೆ ಕಡಿವಾಣ ಹಾಕಿದ ಬೆಂಗಳೂರು ನಗರ ಪೊಲೀಸರು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Bangalore News:

ದಿನೇ ದಿನೇ ಮಾದಕವಸ್ತುಗಳ ಮಾರಾಟದ ಜಾಲ ನಾಯಿಕೊಡೆಗಳಂತೆ ವಿಸ್ತಾರವಾಗುತ್ತಿದೆ. ಜನಸಂಖ್ಯೆ ಹೆಚ್ಚಾದಂತೆ ‘ನಶೆಜಾಲ’ ಕಿಕ್ಕೇರುತ್ತಿದೆ. ಈ ದಂಧೆಯಲ್ಲಿ ಭಾಗಿಯಾಗಿರುವವರು ಬಹುತೇಕ ಅಫ್ರಿಕಾ ಪ್ರಜೆಗಳಾಗಿದ್ದಾರೆ. ವಿದ್ಯಾರ್ಥಿ, ವ್ಯಾಪಾರ ಹಾಗೂ ಪ್ರವಾಸಿ ಇನ್ನಿತರ ವೀಸಾಗಳಡಿ ಬೆಂಗಳೂರಿಗೆ ಬರುವ ವಿದೇಶಿಗರು ಗಡುವು ಮುಗಿದರೂ ತಮ್ಮ ದೇಶಕ್ಕೆ ತೆರಳದೆ ಇಲ್ಲೇ ನೆಲೆಯೂರಿ ಡ್ರಗ್ಸ್, ಪ್ರಕರಣಗಳಲ್ಲಿ ಆರೋಪಿಗಳಾಗುತ್ತಿದ್ದಾರೆ.

ಅಪರಾಧ ಪ್ರಕರಣದಲ್ಲಿ ಭಾಗಿಯಾದರೆ ವ್ಯಾಜ್ಯ ಮುಗಿಯುವ ತನಕವು ನಗರ ಬಿಟ್ಟು ತೆರಳುವಂತಿಲ್ಲ ಎಂಬ ಕಾನೂನನ್ನು ಬಹುತೇಕರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆಪಾದನೆಗಳು ಪೊಲೀಸ್ ವಲಯದಿಂದ ಕೇಳುಬರುತ್ತಿವೆ.  ಐಟಿ-ಬಿಟಿ ಹಬ್ ಆಗಿರುವ ರಾಜಧಾನಿಯಲ್ಲಿ ಮಾದಕವಸ್ತುಗಳ ಮಾರಾಟ ಜಾಲ ಗಟ್ಟಿಯಾಗಿ ನೆಲೆಯೂರಿದ್ದು ಡ್ರಗ್ಸ್ ಮುಕ್ತ ಬೆಂಗಳೂರು ಮಾಡಲು ಪೊಲೀಸರು ನಿರಂತರವಾಗಿ ಸಮರ ಸಾರುತ್ತಿದ್ದಾರೆ.

ಸ್ಥಳೀಯ ಆರೋಪಿಗಳಿಗೆ ಪೈಪೋಟಿ ಎಂಬಂತೆ ಡ್ರಗ್ಸ್ ಪೆಡ್ಲಿಂಗ್​ನಿಂದ ತಲೆನೋವಾಗಿದ್ದ ವಿದೇಶಿ ಪ್ರಜೆಗಳ ದಂಧೆಗೆ ಖಾಕಿ ಕಡಿವಾಣ ಹಾಕಿದೆ. ಮಾದಕವಸ್ತುಗಳ ಮಾರಾಟ ಹಾಗೂ ಸಾಗಾಟ ಪ್ರಕರಣದಲ್ಲಿ ಕಳೆದ ನಾಲ್ಕು ವರ್ಷಗಳಿಂದ 465 ವಿದೇಶಿಯರನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಬಹುತೇಕರು ನೈಜೀರಿಯಾ ಮೂಲದವರೇ ಆಗಿದ್ದಾರೆ. 2021ರಲ್ಲಿ 186, 2022ರಲ್ಲಿ 122, 2023ರಲ್ಲಿ 99 ಹಾಗೂ 2024ರಲ್ಲಿ 58 ವಿದೇಶಿ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸ್ ಅಂಕಿ-ಅಂಶಗಳು ಸ್ಪಷ್ಟಪಡಿಸಿವೆ.

Repeatedly involved in drug peddling:

ರಾಜಧಾನಿಗೆ ಎಡತಾಕುವ ವಿದೇಶಿಯರು ವಿವಿಧ ವೀಸಾದಡಿ ಬಂದು ಹಂತ-ಹಂತವಾಗಿ ಸಿಂಥೆಟಿಕ್ ಡ್ರಗ್ಸ್ ಜಾಲದಲ್ಲಿ ತೊಡಗಿಸಿಕೊಳ್ಳುತ್ತಾರೆ. ಡಾರ್ಕ್ ನೆಟ್ ವೆಬ್​ಸೈಟ್, ವಿದೇಶಿ ಪಾರ್ಸೆಲ್ ಹಾಗೂ ದೆಹಲಿ ಹಾಗೂ ಮುಂಬೈ ಮೂಲಗಳಿಂದ ಚಾಕೊಲೇಟ್, ಸೋಪು ಹಾಗೂ ಇನ್ನಿತರ ಪಾರ್ಸೆಲ್​ಗಳಲ್ಲಿ ಡ್ರಗ್ಸ್​ ತರಿಸಿಕೊಂಡು ಹೆಚ್ಚು ಬೆಲೆಗೆ ಮಾರಾಟ ಮಾಡಿ ಅಕ್ರಮವಾಗಿ ಸಂಪಾದನೆ ಮಾಡುತ್ತಾರೆ.

ವೀಸಾ ಅವಧಿ ಮುಗಿದರೂ ಅನಧಿಕೃತವಾಗಿ ನೆಲೆಯೂರಿ ನಶೆ ಲೋಕದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.  ಬಟ್ಟೆ ವ್ಯಾಪಾರ, ಪ್ರಾವಿಷನ್ ಸ್ಟೋರ್​ಗಳಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ ವ್ಯವಸ್ಥಿತ ಜಾಲದ ಮೂಲಕ ದಂಧೆಯಲ್ಲಿ ನಿರತರಾಗುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಮ್ಮೆ ವಿದೇಶಿ ಪ್ರಜೆ ವಿರುದ್ಧ ಪ್ರಕರಣ ದಾಖಲಾದರೆ ನ್ಯಾಯಾಲಯದಲ್ಲಿ ವಿಚಾರಣೆ ಮುಗಿಯುವವರೆಗೂ ನಗರ ಬಿಟ್ಟು ತೆರಳುವಂತಿಲ್ಲ. ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಜೈಲಿಗೆ ಹೋಗಿ ಜಾಮೀನು ಪಡೆದು ಮತ್ತೆ ಹಳೆ ಕಾಯಕದಲ್ಲೇ ಭಾಗಿಯಾಗುತ್ತಿದ್ಧಾರೆ.

Decrease in number of arrestees in 2024:

2022ರಲ್ಲಿ 77 ಜನ 2021ರಲ್ಲಿ 59 ಹಾಗೂ 2024ರಲ್ಲಿ 100ಕ್ಕೂ ಅಧಿಕ ವೀಸಾ ಅವಧಿ ಮುಗಿದು ಅಕ್ರಮವಾಗಿ ನೆಲೆಯೂರಿದ್ದ ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ. ವಿದೇಶಿ ಅಕ್ರಮ ವಾಸಿಗಳಿಗಾಗಿ 2019ರಲ್ಲಿ ನೆಲಮಂಗಲದಲ್ಲಿ ವಸತಿ ಕೇಂದ್ರ ತೆರೆಯಲಾಗಿದ್ದು, ಅಕ್ರಮವಾಸಿಗಳನ್ನು ಫಾರಿನ್ ಡಿಟೆನ್ಶನ್ ಸೆಂಟರ್​ಗೆ ರವಾನಿಸಲಾಗುತ್ತಿದೆ. ಬಳಿಕ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಕೇಂದ್ರ ಗೃಹಸಚಿವಾಲಯದ ಮುಖಾಂತರ ಅವರವರ ದೇಶಗಳಿಗೆ ಕಳುಹಿಸಲಾಗುತ್ತದೆ.

ಸಣ್ಣಪುಟ್ಟ ಗಲಾಟೆಯಲ್ಲಿ ಭಾಗಿಯಾದರೂ ಪ್ರಕರಣ ದಾಖಲಿಸಿಕೊಳ್ಳದೆ ಎಚ್ಚರಿಕೆ ನೀಡುವುದು ಹಾಗೂ ಕಾಲಕಾಲಕ್ಕೆ ವಿದೇಶಿ ಪ್ರಜೆಗಳ ಮೇಲೆ ನಿಗಾಇರಿಸಿದ ಪರಿಣಾಮ ಗಡುವು ಮುಗಿದರೂ ನೆಲೆಯೂರಿದವರನ್ನು ಪ್ರಾದೇಶಿಕ ವಿದೇಶಿ ನೋಂದಣಿ ಕೇಂದ್ರ (ಎಫ್ಆರ್​ಆರ್​ಓ) ನೆರವಿನಿಂದ ನೆಲಮಂಗಲದ ಸೊಂಡೆಕೊಪ್ಪದಲ್ಲಿ ವಿದೇಶಿ ಪ್ರಜೆಗಳ ಗಡಿಪಾರು ಕೇಂದ್ರದಲ್ಲಿರಿಸಿ ಬಳಿಕ ವಿಧಿ ವಿಧಾನದ ಮೂಲಕ ಅವರನ್ನು ಅವರ ದೇಶಗಳಿಗೆ ಗಡಿಪಾರು ಮಾಡಲಾಗಿದೆ. ಹೀಗಾಗಿ ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ 2024ರಲ್ಲಿ 58 ಮಂದಿ ಮಾತ್ರ ವಿದೇಶಿ ಡ್ರಗ್ಸ್​ ದಂಧೆಕೋರರನ್ನ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮಾದಕವಸ್ತು ಮಾರಾಟ ಜಾಲವೆಂದು ಬಿಂಬಿಸಿಕೊಂಡಿರುವ ಹೆಣ್ಣೂರು, ಬಾಣಸವಾಡಿ, ಸಂಪಿಗೆಹಳ್ಳಿ, ರಾಮಮೂರ್ತಿನಗರ, ಯಲಹಂಕ, ಪುಲಕೇಶಿನಗರ ಸೇರಿದಂತೆ ಸುತ್ತಮುತ್ತಲಿನ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹೆಚ್ಚಾಗಿ ಅಫ್ರಿಕಾ ದೇಶದ ಪ್ರಜೆಗಳು ವಾಸಿಸುತ್ತಿದ್ದು, ಈ ಕೆಲವರು ಅಪರಾಧ ಲೋಕದಲ್ಲಿ ತೊಡಗಿಸಿಕೊಂಡಿದ್ದಾರೆ.

Foreign drug peddler who assaulted the constable:

2021ರಲ್ಲಿ ಸಂಪಿಗೆಹಳ್ಳಿ ಪೊಲೀಸರ ಮೇಲೆ ಹಲ್ಲೆ, ಡಿ.ಜೆ. ಹಳ್ಳಿ, ಬಾಣಸವಾಡಿ ಹಾಗೂ ಡ್ರಗ್ಸ್ ಕೇಸ್​ನಲ್ಲಿ ಭಾಗಿಯಾಗಿದ್ದ. ಅಲ್ಲದೆ, ಈತನ ಪತ್ನಿ ಸಹ ಮಹಿಳಾ ಪೊಲೀಸ್ ಒಬ್ಬರಿಗೆ ಬೆರಳು ಕಚ್ಚಿ ಹಲ್ಲೆ ಮಾಡಿದ ಆರೋಪದಡಿ ಆರೋಪಿಯಾಗಿದ್ದರು. ದಂಪತಿ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪ್ರಕರಣ ಇತ್ಯರ್ಥವಾಗುವ ತನಕವೂ ನಗರದಲ್ಲಿ ಉಳಿಯಬೇಕಿದೆ.

ಡಿ.31ರಂದು ರಾತ್ರಿ ಹೊಸ ವರ್ಷಾಚರಣೆ ಸೋಗಿನಲ್ಲಿ ಕಾನ್​ಸ್ಟೇಬಲ್ ನಾಗರಾಜ್ ಅವರ ಮೇಲೆ ಹಲ್ಲೆ ಮಾಡಿದ್ದ ನೈಜೀರಿಯಾ ಪ್ರಜೆ ಕೆಲ್ವಿನ್ ಎಂಬುವನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದರು. 2021ರಲ್ಲಿ ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನಗರದಲ್ಲಿ ನೆಲೆಯೂರಿದ್ದ. ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮಾದಕವಸ್ತು ಹಾಗೂ ಅಮಲು ಪದಾರ್ಥಗಳ ನಿಗ್ರಹ ಕಾಯ್ದೆ ಯಡಿ (ಎನ್ ಡಿಪಿಎಸ್) ಕೇಸ್​ನಲ್ಲಿ ಭಾಗಿಯಾಗಿರುವ ವಿಚಾರ ತಿಳಿದುಬಂದಿತ್ತು.

Foreign Nationals Recently Arrested in Drug Trafficking:

1) ಡಿ.17 ರಂದು ಮುಂಬೈನಿಂದ ಸೋಪು ಹಾಗೂ ಬೇಳೆ ಪ್ಯಾಕೆಟ್​ಗಳಲ್ಲಿ ಡ್ರಗ್ಸ್ ಸರಬರಾಜು ಮಾಡಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ ನೈಜೀರಿಯಾದ ಮಹಿಳೆ ರೋಜ್ಲೈಮ್​ನನ್ನು ಬಂಧಿಸಿ 24 ಕೋಟಿ ಮೌಲ್ಯದ ಡ್ರಗ್ಸ್ ಸೀಜ್.

2) ಅ.29ರಂದು, 2020ರಲ್ಲಿ ಮೆಡಿಕಲ್ ವೀಸಾದಡಿ ಬಂದು ಗಡುವು ಮೀರಿದರೂ ಮಾದಕವಸ್ತು ಮಾರಾಟದಲ್ಲಿ ತೊಡಗಿದ್ದ ವಿದೇಶಿ ಪ್ರಜೆ ಇನ್ಯಾಂಗ್ ಉನ್ಯಿಮೆ ಭೋನಿಫೇಸ್ ಎಂಬುವನನ್ನು ಬಂಧಿಸಲಾಯಿತು. 2.30 ಕೋಟಿ ರೂ. ಮೌಲ್ಯದ ಎಂಡಿಎಂಎ ಕ್ರಿಸ್ಟಲ್ ವಶಪಡಿಸಿಕೊಳ್ಳಲಾಯಿತು. ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಈ ವಿದೇಶಿ ಮಹಿಳೆಗೆ ಡ್ರಗ್ಸ್​ ಕೃತ್ಯದಲ್ಲಿ ನಂಟು ಇತ್ತು.

3) ಅ.25ರಂದು ಸಿಂಥೆಟಿಕ್ ಡ್ರಗ್ 1.50 ಕೋಟಿ ಮೌಲ್ಯದ ಎಂಡಿಎಂಎ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ನೈಜೀರಿಯಾದ ಯುಜೋವುಂ ಚಿಕ್ಡ್ವು ಲಿವೋನಸ್ ಅರೆಸ್ಟ್

4) ನ.22ರಂದು ಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾದ ಮೂಲದ ಮಿಖಾಯಿಲ್ ಐಗ್ಬೆರೆ ಹಾಗೂ ಅಗ್ವು ಇಜೆಕೈಲ್ ಒಸಿತಾ ಎಂಬುವರನ್ನು ಬಂಧಿಸಿ, ಅವರಿಂದ 3 ಕೋಟಿ ರೂ. ಮೌಲ್ಯದ ಡ್ರಗ್ಸ್​ ಜಪ್ತಿ. ಐದು ವರ್ಷಗಳ ಹಿಂದೆಯೇ ಇವರ ವೀಸಾ ಅವಧಿ ಮುಗಿದಿತ್ತು.

5) ನ.26ರಂದು ಬ್ಯುಸಿನೆಸ್ ವೀಸಾ ಪಡೆದು ಭಾರತಕ್ಕೆ ಬಂದು ಮೋಜಿನ ಜೀವನ ನಡೆಸುವ ಸಲುವಾಗಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಡ್ರಗ್ಸ್ ಪೆಡ್ಲರ್​ನನ್ನು ಬಂಧಿಸಿ 77 ಲಕ್ಷ ರೂ. ಮೌಲ್ಯದ 515 ಗ್ರಾಂ ಎಂಡಿಎಂಎ ಕ್ರಿಸ್ಟಲ್ ವಶಪಡಿಸಿಕೊಳ್ಳಲಾಗಿತ್ತು.

ಇದನ್ನು ಓದಿರಿ : FINANCE COMPANY TORTURE : ಮೈಕ್ರೋ ಫೈನಾನ್ಸ್ ಸಂಸ್ಥೆ ಕಿರುಕುಳಕ್ಕೆ ಮನೆಗಳನ್ನು ತೊರೆದ ಕುಟುಂಬ

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

CHILDREN FALL SICK : ಔಡಲ ಗಿಡದ ಕಾಯಿ ತಿಂದು ಅಸ್ವಸ್ಥರಾದ ವಿದ್ಯಾರ್ಥಿಗಳು

Dharwad News: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗಂಭ್ಯಾಪುರ ಗ್ರಾಮದಲ್ಲಿ‌ ನಿನ್ನೆ ಸಂಜೆ ಶಾಲೆಯಿಂದ ಬರುತ್ತಿದ್ದ ವಿದ್ಯಾರ್ಥಿಗಳು ದಾರಿಯಲ್ಲಿ ಔಡಲ ಗಿಡದ ಕಾಯಿ ತಿಂದು CHILDREN...

MAHAKUMBH MELA : ಕಾಶಿ ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿದ ಸ್ಟೀವ್ ಜಾಬ್ಸ್ ಪತ್ನಿ

Varanasi (Uttar Pradesh) News: ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಅವರು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು. MAHAKUMBH MELA...

CHARRED HOMES IN THE LOS ANGELES : ಸುಟ್ಟು ಬೂದಿಯಾದ ಸ್ಥಳದಲ್ಲಿ ಮನೆಗಳ ಅಸ್ತಿತ್ವ ಹುಡುಕುತ್ತಿರುವ ಲಾಸ್ ಏಂಜಲೀಸ್ ಜನರು

Los Angeles, America News: ಕಳೆದ ಏಂಟು ತಿಂಗಳಿನಿಂದ ಮಳೆ ಕಾಣದ CHARRED HOMES IN THE LOS ANGELES ಶುಕ್ರವಾರ ಬೆಂಕಿ ಆರಿಸುವ ಪ್ರಕ್ರಿಯೆಗೆ...

HUBBALLI OLD BUS STOP : ಹೊಸ ರೂಪ ಪಡೆದು ಲೋಕಾರ್ಪಣೆಗೊಂಡ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ

Hubli News: HUBBALLI OLD BUS STOP ಇಂದು ಲೋಕಾರ್ಪಣೆಯಾಯಿತು. ವಿಶೇಷ ಸೌಲಭ್ಯಗಳೊಂದಿಗೆ HUBBALLI OLD BUS STOP ದಲ್ಲಿ ಸಾರ್ವಜನಿಕರು ಸಂಚರಿಸಬಹುದಾಗಿದೆ. ಹಳೇ ಬಸ್...