spot_img
spot_img

FREE CYCLE RIDE : ಹುಬ್ಬಳ್ಳಿ – ಧಾರವಾಡದಲ್ಲಿ ಉಚಿತ ಸೈಕಲ್ ಸವಾರಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Hubli News:

ಹುಬ್ಬಳ್ಳಿ-ಧಾರವಾಡದಲ್ಲಿ ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್ ಆಫರ್ ನೀಡಲಾಗಿದೆ. ಈ ಮೂಲಕ ಪಬ್ಲಿಕ್ ಬೈಸಿಕಲ್ ಸಿಸ್ಟಮ್​ಗೆ ಬಳಕೆದಾರರನ್ನು ಆಕರ್ಷಿಸಲಾಗುತ್ತಿದೆ. ಹೌದು, ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಚಾಲನೆಯಲ್ಲಿರುವ ‘ಸವಾರಿ’ ಪಬ್ಲಿಕ್ ಬೈಸಿಕಲ್ ಸಿಸ್ಟಮ್ ಬಳಕೆದಾರರನ್ನು ಆಕರ್ಷಿಸಲು ಹೊಸ ವರ್ಷಕ್ಕೆ FREE CYCLE RIDE ಯೋಜನೆ ಮಾಡಲಾಗಿದೆ. ಅಂದರೆ ಬೈಸಿಕಲ್ ಬಳಕೆದಾರರು ಆರಂಭದ ಒಂದು ತಾಸು FREE CYCLE RIDE ಮಾಡಬಹುದು.

ಇದು ಜ.1ರಿಂದಲೇ ಜಾರಿಯಾಗಿದೆ. ಸ್ಮಾರ್ಟ್ ಸಿಟಿಯ ಮಹತ್ವದ ಯೋಜನೆ ಪಬ್ಲಿಕ್ ಬೈಸಿಕಲ್ ಸಿಸ್ಟಮ್ ‘ಸವಾರಿ’ ಅವಳಿ ನಗರದಲ್ಲಿ ಆರಂಭವಾಗಿ ಎರಡೂ ವರ್ಷವಾದ್ರೂ ಅಷ್ಟಾಗಿ ಜನರ ಗಮನ ಸೆಳೆದಿಲ್ಲ. ಅಂತೆಯೇ ಸೈಕಲ್ ಯೋಜನೆಗೆ ವ್ಯಾಪಕ ಪ್ರಚಾರ ನೀಡಿ, ಜನ ಸ್ನೇಹಿಯಾಗಿಸುವ ಪ್ರಯತ್ನ ಮಾಡಲಾಗುತ್ತಿದೆ.

Free Ride:

FREE CYCLE RIDE 3ನೇ ವರ್ಷದಲ್ಲಿ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸೈಕಲ್​ನತ್ತ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಒಂದು ತಾಸು ಉಚಿತ ರೈಡ್ ಕೊಡುವ ಆಫರ್ ನೀಡಲಾಗಿದೆ. ಇದರಿಂದ ಹೆಚ್ಚಿನ ಹೊಸ ಬೈಸಿಕಲ್ ಬಳಕೆದಾರರು ನೋಂದಣಿ ಮಾಡಿಸುವ ನಿರೀಕ್ಷೆ ಹೊಂದಲಾಗಿದೆ. ಈಗಾಗಲೇ ಕಳೆದ ಎರಡು ವರ್ಷಗಳಲ್ಲಿ ವಿವಿಧ ಪ್ರಚಾರ ಕಾರ್ಯಕ್ರಮಗಳನ್ನು ಮಾಡಿದ್ದು, ಈಗ ಇನ್ನೂ ಹೆಚ್ಚಿನ ಜನರನ್ನು ಆಕರ್ಷಿಸಲು ಪ್ರಯತ್ನ ಮಾಡಲಾಗುತ್ತಿದೆ.

Cycle ride Rs 5 per hour :

ಕೆಲವು ಬೈಸಿಕಲ್ ನಿಲ್ದಾಣಗಳಲ್ಲಿ ಸದಸ್ಯರು ಹಾಗೂ ಸಂಚಾರಿಗಳ ಕೊರತೆ ಎದ್ದು ಕಾಣುತ್ತಿದ್ದು ಅಂತಹ ನಿಲ್ದಾಣಗಳನ್ನು ಬದಲಾಯಿಸುವ ಅಥವಾ ಬೇರೆಡೆ ಸ್ಥಳಾಂತರಿಸಲಾಗುತ್ತಿದೆ. FREE CYCLE RIDE  ಸವಾರಿ ಪಡೆಯಲು ಬಳಕೆದಾರರು ಗುರುತಿನ ಪುರಾವೆಯೊಂದಿಗೆ ಅದರದೇ ಆದ ಪ್ಲಾಟ್ ಫಾರ್ಮ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. FREE CYCLE RIDE ಟ್ರ್ಯಾಕಿಂಗ್ ಸ್ವಯಂಚಾಲಿತ ವ್ಯವಸ್ಥೆ ಹೊಂದಿದ್ದು, ಸ್ಮಾರ್ಟ್ ತಂತ್ರಜ್ಞಾನ ಬಳಸಲಾಗಿದೆ. ಸುರಕ್ಷಿತ ಮತ್ತು ಪರಿಣಾಮಕಾರಿ ಬೈಸಿಕಲ್ ನಿರ್ವಹಣೆ ಜಾರಿ ಮಾಡಲಾಗಿದೆ.

ಪ್ರತಿ ಬೈಸಿಕಲ್ ನಿಲ್ದಾಣಗಳು ಸಿಸಿ ಕ್ಯಾಮರಾ ಕಣ್ಣಾವಲು ಮತ್ತು ಸವಾರರ ಸುರಕ್ಷತೆ, ಸೂಕ್ತ ವ್ಯವಸ್ಥೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಒಂದು ಗಂಟೆ ಉಚಿತ ಸೇವೆಯಿಂದ ಸದಸ್ಯರಿಗೆ ಪ್ರೋತ್ಸಾಹ, ಹೊಸ ಸದಸ್ಯರ ಆಕರ್ಷಿಸುವ ನೀರಿಕ್ಷೆ ನಮ್ಮದಾಗಿದೆ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕರು ತಿಳಿಸಿದ್ದಾರೆ. ಈ ಕುರಿತಂತೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಗಾಳಿ  ಪ್ರತಿಕ್ರಿಯೆ ನೀಡಿದ್ದು, ನಗರದ ವಿವಿಧ ಸ್ಥಳಗಳಲ್ಲಿ 34 ಬೈಸಿಕಲ್ ನಿಲ್ದಾಣಗಳನ್ನು ಮಾಡಿದ್ದು, 340 ಬೈಸಿಕಲ್‌ಗಳಿವೆ.

ಒಂದು ಸೈಕಲ್​​ಗೆ ಒಂದು ತಾಸಿಗೆ 5 ರೂಪಾಯಿ ಚಾರ್ಜ್ ಮಾಡಲಾಗುತ್ತಿದೆ. ಆದ್ರೆ ಅಷ್ಟೊಂದು ಸ್ಪಂದನೆ ಸಾರ್ವಜನಿಕರಿಂದ ಸಿಗುತ್ತಿಲ್ಲ. ಹೀಗಾಗಿ ಸಾರ್ವಜನಿಕರನ್ನು ಸೆಳೆಯುವ ದೃಷ್ಟಿಯಿಂದ ಬಳಕೆದಾರರಿಗೆ ಒಂದು ತಾಸು ಉಚಿತ ರೈಡ್​​ಗೆ ಅವಕಾಶ ನೀಡಲಾಗುತ್ತಿದೆ. ಇದು ಪ್ರೋತ್ಸಾಹದಾಯಕ ನಡೆಯಾಗಿದೆ. ಸಾರ್ವಜನಿಕರು ಹೆಚ್ಚಿನ‌ ಸಂಖ್ಯೆಯಲ್ಲಿ ‌ಬಳಕೆ ಮಾಡಿಕೊಳ್ಳಲಿ ಎಂಬ ಸದುದ್ದೇಶ ಹೊಂದಲಾಗಿದೆ.

ನಗರದಲ್ಲಿ ಸಾಕಷ್ಟು ‌ಕಾಮಗಾರಿಗಳು ನಡೆಯುತ್ತಿರುವುದರಿಂದ ಸೈಕಲ್ ಬಳಕೆಗೆ ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ಈಗ ಪ್ರಾರಂಭ ಮಾಡಿದ್ದರಿಂದ ಸ್ಪಂದನೆ ಸಿಗುತ್ತಿದೆ ಎಂದು ಮಾಹಿತಿ ನೀಡಿದರು. ಬೈಸಿಕಲ್ ಬಳಕೆಗೆ ಉತ್ತೇಜನ ನೀಡಲು 8.5 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಸೆಪ್ಟೆಂಬರ್ 2022ರಿಂದ ಅವಳಿ ನಗರದಲ್ಲಿ ಸವಾರಿ ಆರಂಭಿಸಿದೆ. ಈವರೆಗೆ ಸುಮಾರು 2900ಕ್ಕೂ ಹೆಚ್ಚು ಬಳಕೆದಾರರು ನೋಂದಣಿ ಮಾಡಿಸಿದ್ದು, 50 ಸಾವಿರಕ್ಕೂ ಹೆಚ್ಚು FREE CYCLE RIDE ವರದಿ ಮಾಡಿದೆ.

ಪಬ್ಲಿಕ್ ಬೈಸಿಕಲ್ ಸಿಸ್ಟಮ್ ಉಸ್ತುವಾರಿ ಹಾಗೂ ನಿರ್ವಹಣೆ ಮಾಡುತ್ತಿರುವ ಟ್ರಿನಿಟಿ ಟೆಕ್ನಾಲಜೀಸ್ ಮತ್ತು ಸಾಫ್ಟ್‌ವೇ‌ರ್ ಸೋಲುಷನ್ಸ್ ಪ್ರೈವೇಟ್ ಲಿಮಿಟೆಡ್ ಎಲ್ಲ 34 ಡಾಕಿಂಗ್ ಸ್ಟೇಷನ್​​ಗಳಲ್ಲಿ ಈಗಾಗಲೇ ಉಚಿತ ಸವಾರಿ ಕುರಿತು ಪೋಸ್ಟರ್ ಅಂಟಿಸಿ ಪ್ರಚಾರ ಕೈಗೊಳ್ಳಲಾಗಿದೆ.

ಇದನ್ನು ಓದಿರಿ : KAPIL SHARMA NET WORTH : 500 ರೂ. ಸಂಬಳ ಪಡೆಯುತ್ತಿದ್ದವರೀಗ 300 ಕೋಟಿಯ ಮಾಲೀಕ

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

GBS SYMPTOMS PREVENTIVE MEASURES: ಶಿಶುಗಳಲ್ಲಿ ಕಂಡುಬರುವ ಈ ವೈರಸ್ ಲಕ್ಷಣಗಳೇನು?

Guntur, Andhra Pradesh News: ಪ್ರಸ್ತುತ ರಾಜ್ಯಾದ್ಯಂತ 17 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸಾಂಕ್ರಾಮಿಕವಲ್ಲದಿದ್ದರೂ, ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇತರ ಸೋಂಕುಗಳಿರುವ ಜನರಲ್ಲಿ...

INDIA AND QATAR SIGNED AN AGREEMENT:ಭಾರತದಲ್ಲಿ 10 ಶತಕೋಟಿ ಡಾಲರ್ ಹೂಡಿಕೆಗೆ ಮುಂದೆ ಬಂದ ಕತಾರ್

New Delhi News: ಕತಾರ್ INDIAದಲ್ಲಿ 10 ಬಿಲಿಯನ್ ಡಾಲರ್​​ ಹೂಡಿಕೆ ಮಾಡಲಿದೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದು, 2 ರಾಷ್ಟ್ರಗಳು...

REMOTE AUSTRALIAN BEACH:ಆಸ್ಪ್ರೇಲಿಯಾ ಸಮುದ್ರ ಕಿನಾರೆಯಲ್ಲಿ 157 ಡಾಲ್ಫಿನ್ಗಳು ಸಾವು

Arthur River (Australia) News: 157 ಡಾಲ್ಫಿನ್​ಗಳ ಸಾವು ಕಳೆದ 48 ಗಂಟೆಗಳಲ್ಲಿ ಸಂಭವಿಸಿದೆ. ಡಾಲ್ಫಿನ್​ನ ದೊಡ್ಡ ಜಾತಿಯ ಸದಸ್ಯರಾದ ವೇಲ್ಸ್​ನಂತಹ ಸಮುದ್ರ ಜೀವಿ ಇವುಗಳ...

MAHA KUMBHMELA:75 ಜೈಲುಗಳಲ್ಲಿರುವ ಕೈದಿಗಳಿಗೆ ಗಂಗಾ ನದಿ ನೀರಿನ ಸ್ನಾನ ಭಾಗ್ಯ

Lucknow (Uttar Pradesh) News: ಪವಿತ್ರ KUMBHMELA ಸ್ನಾನಕ್ಕಾಗಿ ಜೈಲು ಸಚಿವರ ಮೇಲ್ವಿಚಾರಣೆಯಲ್ಲಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಕಾರಾಗೃಹಗಳ ಮಹಾನಿರ್ದೇಶಕ (ಡಿಜಿ) ಪಿ.ವಿ.ರಾಮಶಾಸ್ತ್ರಿ ತಿಳಿಸಿದ್ದಾರೆ. ಸಂಗಮದಿಂದ...