Bellary News:
ವಿದ್ಯಾರ್ಥಿಗಳಿಗೆ ಬಳ್ಳಾರಿಯಿಂದ ಹೈದರಾಬಾದ್ಗೆ FREE FLIGHT TRAVEL FOR STUDENTS ಬಳ್ಳಾರಿಯ ವೈಕಿಂಗ್ಸ್ ರೌಂಡ್ ಟೇಬಲ್ ಸಂಸ್ಥೆ ಒದಗಿಸಿದೆ. “ಫ್ಲೈಟ್ ಆಫ್ ಫ್ಯಾಂಟಸಿ” ಎಂಬ ಅಭಿಯಾನದೊಂದಿಗೆ ಕಪ್ಪಗಲ್ಲು, ಯರ್ರಂಗಳಿ ಮತ್ತು ಬೈಲೂರು ಗ್ರಾಮದ ಖಾಸಗಿ ಶಾಲಾ ವಿದ್ಯಾರ್ಥಿಗಳ ಪೈಕಿ ಪ್ರತಿಭಾವಂತರನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ.
ಈ FREE FLIGHT TRAVEL FOR STUDENTS ಬಳ್ಳಾರಿಯಿಂದ ಹೈದರಾಬಾದ್ಗೆ ಎರಡು ದಿನಗಳ ಕಾಲದ ಉಚಿತ ಪ್ರವಾಸ ಹಮ್ಮಿಕೊಂಡಿದ್ದೇವೆ ಎಂದು ವೈಕಿಂಗ್ಸ್ ರೌಂಡ್ ಟೇಬಲ್ ಇಂಡಿಯಾ ಸಂಸ್ಥೆ ಹೇಳಿದೆ. ನಗರದ ಅಧಿದೇವತೆ ಶ್ರೀ ಕನಕದುರ್ಗಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಖಾಸಗಿ ಶಾಲೆಯ 27 ವಿದ್ಯಾರ್ಥಿಗಳಿಗೆ FREE FLIGHT TRAVEL FOR STUDENTS ಪ್ರವಾಸದ ಅವಕಾಶವನ್ನು ಬಳ್ಳಾರಿ ವೈಕಿಂಗ್ಸ್ ರೌಂಡ್ ಟೇಬಲ್ ಇಂಡಿಯಾ ಸಂಸ್ಥೆ ಪ್ರಕಟಿಸಿತು.
ಸಂಸ್ಥೆಯ ಲೇಡೀಸ್ ಅಧ್ಯಕ್ಷರಾದ ಹರ್ಷಿತಾ ಚೆಲ್ಲೂರ್, ಪ್ರದೇಶ ಕಾರ್ಯದರ್ಶಿಗಳಾದ ಗೌರವ್ ಜೈನ್, ಟೇಬಲ್ ಕಾರ್ಯದರ್ಶಿ ಇಂಜಿನಿಯರ್ ರಾಜೀವ್, ರಾಜ್ ರೇನುಗುಂಟ್ಲ, ಸೌದರ್, ಮಹೇಶ್, ಡಾ.ಹರೀಶ್, ಮನೀಶ್, ರಾಕೇಶ್, ಕೋಮಲ್ ಜೈನ್, ದಿವ್ಯಾ ರೆಡ್ಡಿ, ಸಂಕೇತ್, ಚೆಲ್ಲೂರು ಪಶುಪತಿ ಸಂಸ್ಥೆ ಸದಸ್ಯರು ಹಾಗೂ ಮಕ್ಕಳ ಪೋಷಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಹೈದರಾಬಾದ್ಗೆ ತೆರಳಿದ ನಂತರ ಅಲ್ಲಿ ನಗರ ಸಂಚಾರ ಮಾಡುವುದು ಹಾಗು ಇತರೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಮಕ್ಕಳ ಭವಿಷ್ಯ, ಮುಂದಿನ ಪೀಳಿಗೆಗೆ ಆಧಾರ ಮತ್ತು ಅನುಕೂಲವಾಗಲಿ, ಚೆನ್ನಾಗಿ ಓದಿ ಉನ್ನತ ಮಟ್ಟಕ್ಕೆ ಬೆಳೆಯಲೆಂದು ವಿಮಾನದಲ್ಲಿ ಕರೆದುಕೊಂಡು ಹೋಗುತ್ತಿದ್ದೇವೆ” ಎಂದು ಸಂಸ್ಥೆಯ ಅಧ್ಯಕ್ಷ ಕುಶ್ವಂತ್ ರೆಡ್ಡಿ ಮತ್ತು ಕೈಲಾಶ್ ಜೈನ್ ಮತ್ತಿತರರು ಪತ್ರಿಕೆ ಮಾಧ್ಯಮದ ಮೂಲಕ ತಿಳಿಸಿದ್ದಾರೆ.
ಇದನ್ನು ಓದಿರಿ : 99 CRORE SANCTIONED : ರಾಜ್ಯದ ಜಲಾನಯನ ಅಭಿವೃದ್ಧಿ ಯೋಜನೆಗಳ ಸಾಧನೆಗೆ ಕೇಂದ್ರದ ಮೆಚ್ಚುಗೆ