ಭಾರತದ ಸರ್ಕಾರವು ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುತ್ತಿದೆ ಎಂದು ಹೇಳುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಸುದ್ಧಿ ಸುಳ್ಳು ಎಂಬುದು ಕಂಡುಬಂದಿದೆ.
ಭಾರತ ಸರ್ಕಾರದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಯೊಂದು ಹರಿದಾಡುತ್ತಿದೆ. ಭಾರತ ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುತ್ತಿದೆ.
ಜನರು ಕೆಲವು ವಿವರಗಳೊಂದಿಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಆಫರ್ ಅನ್ನು ಪಡೆಯಬಹುದು ಎಂದು ಸ್ಕ್ಯಾಮರ್‌ಗಳು ಶೇರ್ ಮಾಡಿದ್ದಾರೆ.
ನೋಂದಾಯಿಸಲು ಇದರಲ್ಲೊಂದು ಲಿಂಕ್ ಇದೆ. ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ. ಇಂತಹ ಯಾವುದೇ ಅಧಿಕೃತ ಘೋಷಣೆ ಸರ್ಕಾರ ಮಾಡಿಲ್ಲ.
”ಅರ್ಜೆಂಟ್, ಭಾರತ ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುವ ಮೂಲಕ ಶಿಕ್ಷಣದ ಡಿಜಿಟಲೀಕರಣವನ್ನು ಉತ್ತೇಜಿಸುತ್ತಿದೆ.
ಆದ್ದರಿಂದ ನೀವು ಭಾರತ ಸರ್ಕಾರದ ಉಚಿತ ಲ್ಯಾಪ್‌ಟಾಪ್ ಅಡಿಯಲ್ಲಿ ಉಚಿತ ಲ್ಯಾಪ್‌ಟಾಪ್ ಪಡೆಯಲು ಬಯಸಿದರೆ, ಈ ಅಧಿಕೃತ ಸೈಟ್‌ಗೆ ಭೇಟಿ ನೀಡಬಹುದು ಮತ್ತು ಅರ್ಹತೆಯನ್ನು ಪರಿಶೀಲಿಸಬಹುದು https://education.gov.in@tinyurl.com/lndiaFreeLaptop-197”
ಈ ಸಂದೇಶದಲ್ಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಒಂದು ವೆಬ್‌ಸೈಟ್‌ಗೆ ಹೋಗುತ್ತಿದೆ. ಇದು ಥೇಟ್ ಸರ್ಕಾರಿ ವೆಬ್ಸೈಟ್ ಮಾದರಿಯಲ್ಲೇ ಇದೆ. ಆದರೆ, ಇದು ಯಾವುದೇ ಅಧಿಕೃತ ಸರ್ಕಾರಿ ಸೈಟ್ ಅಲ್ಲ ಎಂದು ನಾವು ಕಂಡುಕೊಂಡಿದ್ದೇವೆ.
ಇದಲ್ಲದೆ, ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಪ್ರಕಟಣೆ ಇಲ್ಲ. ಯಾವುದೇ ಸರ್ಕಾರಿ ಸಂಬಂಧಿತ ಮಾಹಿತಿಯನ್ನು gov.in ನೊಂದಿಗೆ ಕೊನೆಗೊಳ್ಳುವ ಅಧಿಕೃತ ಸೈಟ್‌ನಲ್ಲಿ ಪೋಸ್ಟ್ ಮಾಡಲಾಗುತ್ತದೆ. ಸದ್ಯ ಹರಿದಾಡುತ್ತಿರುವ ಮೆಸೇಜ್ ವಿದ್ಯಾರ್ಥಿಗಳನ್ನು ದಾರಿತಪ್ಪಿಸಲು ಸಂವಾದಾತ್ಮಕ ಚಿತ್ರವನ್ನು ಹೊಂದಿದೆ. ಇದನ್ನು ತೆರೆದರೆ ವಿದ್ಯಾರ್ಥಿಗಳು ತಮ್ಮ ಹೆಸರು ಮತ್ತು ಅರ್ಹತೆಯನ್ನು ಹಾಕಲು ಕೇಳುತ್ತದೆ.
ವಿವರಗಳನ್ನು ನಮೂದಿಸಿದಾಗ, ಸರ್ಕಾರಿ ಸೈಟ್‌ಗೆ ಹೋಗಲು ಈ ಲಿಂಕ್ ಅನ್ನು ವಾಟ್ಸಾಪ್‌ನಲ್ಲಿ ಇತರ ಐದು ಜನರಿಗೆ ಹಂಚಿಕೊಳ್ಳಲು ಕೇಳುತ್ತದೆ.
ಅಲ್ಲದೆ ಫೇಸ್‌ಬುಕ್ ಪೋಸ್ಟ್‌ನ ಶೈಲಿಯಲ್ಲಿ ಇದು ಕಾಣುತ್ತದೆ. ಇದು ಶಿಕ್ಷಣ ಸಚಿವಾಲಯದ ಹೆಸರಿನೊಂದಿಗೆ ಭಾರತ ಸರ್ಕಾರದ ಲೋಗೋವನ್ನು ಕೂಡ ಒಳಗೊಂಡಿದೆ.
ಮುಂದೆ ಸ್ಕ್ರೋಲ್ ಮಾಡುವಾಗ ಲೈಕ್ಸ್ ಮತ್ತು ಶೇರ್‌ಗಳ ಸಂಖ್ಯೆಯನ್ನು ಗಮನಿಸಬಹುದು. ಹಾಗೆಯೆ URL ಅನ್ನು ರಿಫ್ರೆಶ್ ಮಾಡಿದಾಗಲೆಲ್ಲಾ ಈ ಸಂಖ್ಯೆಯು ಬದಲಾಗುತ್ತಲೇ ಇರುತ್ತದೆ.
ಸರ್ಕಾರದ ಮೂಲಗಳೊಂದಿಗೆ ಮತ್ತಷ್ಟು ಪರಿಶೀಲಿಸಿದ್ದೇವೆ ಮತ್ತು ಪಿಐಬಿ ಫ್ಯಾಕ್ಟ್ ಚೆಕ್ ಅಂತಹ ಯಾವುದೇ ಪ್ರಕಟಣೆ ಇಲ್ಲ ಮತ್ತು ಇದೇ ರೀತಿಯ ತಪ್ಪು ಮಾಹಿತಿಯೊಂದಿಗೆ ಈ ಹಿಂದೆಯೂ ಮೆಸೇಜ್ ವೈರಲ್ ಆದ ಬಗ್ಗೆ ಪಿಐಬಿ ಫ್ಯಾಕ್ಟ್ ಚೆಕ್ ಎಚ್ಚರಿಕೆ ನೀಡಿರುವುದು ನಮಗೆ ಸಿಕ್ಕಿದೆ.
ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಶಿಕ್ಷಣ ಸಚಿವಾಲಯವು ಉಚಿತ ಲ್ಯಾಪ್‌ಟಾಪ್ ಯೋಜನೆಯಡಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುತ್ತಿದೆ ಎಂಬ ಸಂದೇಶವು ನಕಲಿ ಎಂದು ತನಿಖೆಯಿಂದ ತಿಳಿದುಬಂದಿದೆ.
ಇದು ಬಳಕೆದಾರರ ಮೊಬೈಲ್ ಅಥವಾ ಕಂಪ್ಯೂಟರ್ಗೆ ವೈರಸ್ ಅಟ್ಯಾಕ್ ಮಾಡುವ ಸಂಚಾಗಿದೆ.