spot_img
spot_img

GALAXY S25 SERIES PRE ORDER RECORD:4 ಲಕ್ಷಕ್ಕೂ ಅಧಿಕ ಜನರಿಂದ ಆರ್ಡರ್!

spot_img
spot_img

Share post:

Galaxy S25 Series Pre-Orders Achieve News:

ಕಳೆದ ಶುಕ್ರವಾರ ಭಾರತದಲ್ಲಿ ತಯಾರಾದ GALAXY ಎಸ್​25 ಸೀರಿಸ್​ ಸ್ಮಾರ್ಟ್‌ಫೋನ್‌ಗಳು ದೇಶದಲ್ಲಿ 4,30,000 ಪೀ-ಆರ್ಡರ್‌ಗಳನ್ನು ಸ್ವೀಕರಿಸಿವೆ ಎಂದು ಸ್ಯಾಮ್‌ಸಂಗ್ ಮಾಹಿತಿ ನೀಡಿದೆ. ಇದು ಕಳೆದ ವರ್ಷ ಬಿಡುಗಡೆಯಾದ ಸ್ಯಾಮ್​ಸಂಗ್​ GALAXY ಎಸ್​24 ಸೀರಿಸ್​ನ ಮುಂಗಡ ಬುಕಿಂಗ್‌ಗಿಂತ ಶೇ. 20 ರಷ್ಟು ಹೆಚ್ಚಾಗಿದೆ.

ಸ್ಯಾಮ್‌ಸಂಗ್ ತನ್ನ ನೋಯ್ಡಾ ಮೂಲದ ಕಾರ್ಖಾನೆಯಲ್ಲಿ GALAXY ಎಸ್​25 ಸೀರಿಸ್​ ತಯಾರಿಸುತ್ತಿರುವುದು ಗೊತ್ತಿರುವ ವಿಷಯ. ಭಾರತದಲ್ಲಿ ಶುಕ್ರವಾರದಿಂದ ಸ್ಯಾಮ್​ಸಂಗ್​ GALAXY ಎಸ್​25 ಮಾರಾಟ ಪ್ರಾರಂಭವಾಗಿದೆ. ಕಂಪನಿಯು ಜನವರಿ 22 ರಂದು ಅಮೆರಿಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಸೀರಿಸ್​ ಅನ್ನು ಬಿಡುಗಡೆ ಮಾಡಿತು.

ಈ ಸೀರಿಸ್​ನಲ್ಲಿ GALAXY ಎಸ್25, ಗ್ಯಾಲಕ್ಸಿ ಎಸ್25 ಪ್ಲಸ್ ಮತ್ತು GALAXY ಎಸ್25 ಅಲ್ಟ್ರಾ ಮಾಡೆಲ್​ಗಳನ್ನು ಪ್ರಪಂಚಕ್ಕೆ ಪರಿಚಯಿಸಿತು.ಈ ಮೂರು ಫೋನ್‌ಗಳನ್ನು ಶುಕ್ರವಾರದಿಂದ ಭಾರತದಲ್ಲಿ ಖರೀದಿಸಬಹುದು. ಈ ಫೋನ್​ ಸೀರಿಸ್​ನ ಪ್ರೀ-ಬುಕಿಂಗ್‌ ಆರಂಭವಾಗಿದ್ದು, ಭಾರತದಲ್ಲಿ ಮುಂಗಡ ಬುಕಿಂಗ್ ವಿಷಯದಲ್ಲಿ ಹೊಸ ದಾಖಲೆ ಬರೆದಿದೆ.

ಈ ಫೋನ್‌ಗಳ ಬೆಲೆ ಎಷ್ಟು ಮತ್ತು ಕಂಪನಿಯು ಅವುಗಳನ್ನು ಖರೀದಿಸಿಸುವಾಗ ಯಾವ ಕೊಡುಗೆಗಳನ್ನು ನೀಡುತ್ತಿದೆ ಎಂಬ ಇತ್ಯಾದಿ ವಿವರಗಳು ಇಲ್ಲಿವೆ.ಈ ಬಗ್ಗೆ ಮಾತನಾಡಿದ ಸ್ಯಾಮ್‌ಸಂಗ್ ಇಂಡಿಯಾದ ಎಮ್​ಎಸ್​ ವಿಭಾಗದ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್, GALAXY ಎಸ್​25 ಅಲ್ಟ್ರಾ,GALAXY ಎಸ್​25+ ಮತ್ತು GALAXY ಎಸ್​25 ಮಾಡೆಲ್​ಗಳು ಸ್ಯಾಮ್‌ಸಂಗ್‌ನ ಅದ್ಭುತ AI ಅನುಭವದೊಂದಿಗೆ ಹೊಸ ಮಾನದಂಡವನ್ನು ಸ್ಥಾಪಿಸಿವೆ. ಇದನ್ನು ಹಿಂದೆಂದೂ ರಚಿಸಲಾಗಿಲ್ಲ ಎಂದು ಹೇಳಿದರು.

Galaxy AI loved by the youth:ಭಾರತದಲ್ಲಿ ಸ್ಯಾಮ್‌ಸಂಗ್‌ನ ಈ ಹೊಸ ಪ್ರಮುಖ ಫೋನ್‌ಗಳ ಮೊದಲ ಮಾರಾಟವು ಫೆಬ್ರವರಿ 7 ರಿಂದ ಪ್ರಾರಂಭವಾಗಿದೆ. ಕಂಪನಿಯು ಇದನ್ನು ಅಮೆಜಾನ್ ಮತ್ತು ಸ್ಯಾಮ್‌ಸಂಗ್‌ನ ವೆಬ್‌ಸೈಟ್ ಸೇರಿದಂತೆ ಎಲ್ಲಾ ಆನ್‌ಲೈನ್ ಮತ್ತು ಆಫ್‌ಲೈನ್ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಾಗುವಂತೆ ಮಾಡಿದೆ.

GALAXY ಎಐ ಬಳಸುವಲ್ಲಿ ಮುಂಚೂಣಿಯಲ್ಲಿರುವ ಯುವ ತಂತ್ರಜ್ಞಾನ ಉತ್ಸಾಹಿಗಳಲ್ಲಿ ಸ್ಯಾಮ್‌ಸಂಗ್ GALAXY ಎಸ್25 ಸೀರಿಸ್​ಗೆ ಹೆಚ್ಚಿನ ಬೇಡಿಕೆ ಇರುವುದನ್ನು ನಾವು ನೋಡಿದ್ದೇವೆ. ಭಾರತದಲ್ಲಿ GALAXY ಎಸ್​25 ಗ್ರಾಹಕರಿಗೆ ಗೂಗಲ್‌ನ ಜೆಮಿನಿ ಲೈವ್ ಆರಂಭದಿಂದಲೇ ಹಿಂದಿಯಲ್ಲಿ ಲಭ್ಯವಿರುತ್ತದೆ.

ಇದು ಸ್ಯಾಮ್‌ಸಂಗ್‌ಗೆ ಭಾರತ ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ ಅಂತಾ ಪುಲ್ಲನ್​ ಹೇಳಿದರು.ಈ ವರ್ಷ ನಾವು ದೇಶಾದ್ಯಂತ 17 ಸಾವಿರ ಮಳಿಗೆಗಳಲ್ಲಿ ನಮ್ಮ ಪ್ರಮುಖ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತೇವೆ. ಇದರಿಂದಾಗಿ ನಾವು ಸಣ್ಣ ಪಟ್ಟಣಗಳ ಬೇಡಿಕೆಯ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ ಎಂದು ರಾಜು ಪುಲ್ಲನ್ ಹೇಳಿದರು

How much do the phones cost?ಭಾರತದಲ್ಲಿ GALAXY ಎಸ್​25 ಮೂಲ ರೂಪಾಂತರ (12GB+256GB) ಬೆಲೆ 80,999 ರೂ., ಇದರ 12GB + 512GB ಆವೃತ್ತಿಗೆ ನೀವು 92,999 ರೂ. ಪಾವತಿಸಬೇಕಾಗುತ್ತದೆ.

GALAXY ಎಸ್​25+ ಬಗ್ಗೆ ಹೇಳುವುದಾದರೆ, ಇದರ 12GB + 256GB ರೂಪಾಂತರದ ಬೆಲೆ 99,999 ರೂ. ಆಗಿದ್ದು, ಇದರ 512GB ರೂಪಾಂತರದ ಬೆಲೆ 1,11,999 ರೂ.ಗೆ ಮಾರಾಟ ಮಾಡಲಾಗುತ್ತಿದೆ.

Galaxy S25 Ultra is the most expensive:ನೀವು ಹೆಚ್ಚಿನ ಸ್ಟೋರೇಜ್ ಹೊಂದಿರುವ ಅಲ್ಟ್ರಾ ಮಾದರಿಯನ್ನು ಬಯಸಿದರೆ.. ಅಂದ್ರೆ ಅದರ 1TB ರೂಪಾಂತರಕ್ಕೆ ನೀವು 1,65,999 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಸ್ಯಾಮ್‌ಸಂಗ್‌ನ ಆನ್‌ಲೈನ್ ಅಂಗಡಿಯಿಂದ ಖರೀದಿಸುವವರು ಹಲವಾರು ಕಲರ್​ ಆಪ್ಷನ್​ಗಳನ್ನು ಪಡೆಯುತ್ತಾರೆ.

GALAXY ಎಸ್25 ಅಲ್ಟ್ರಾ ಸ್ಮಾರ್ಟ್​ಫೋನ್​ ಸ್ಮಾರ್ಟ್​ಫೋನ್​ ಸೀರಿಸ್​ನಲ್ಲಿ ಅತ್ಯಂತ ದುಬಾರಿ ಮಾದರಿಯಾಗಿದೆ. ಇದರ ಆರಂಭಿಕ ಬೆಲೆ 1,29,999 ರೂ.ಗಳು. ಇದರ 512GB ರೂಪಾಂತರ ಬೆಲೆ 1,41,999 ರೂ. ಪಾವತಿಸಬೇಕಾಗುತ್ತದೆ.

What are the offers with the phone?ಇನ್ನು HDFC ಕ್ರೆಡಿಟ್ ಕಾರ್ಡ್ ಬಳಸಿ ವಹಿವಾಟು ನಡೆಸಿದರೆ ಅವರಿಗೆ 9 ಸಾವಿರ ರೂ.ವರೆಗೆ ಹೆಚ್ಚುವರಿ ವಿನಿಮಯ ಮೌಲ್ಯ ಸಿಗುತ್ತದೆ. HDFC ಕ್ರೆಡಿಟ್ ಕಾರ್ಡ್ ಅನ್ನು ಸಂಪೂರ್ಣವಾಗಿ ಸ್ವೈಪ್ ಮಾಡಿದರೆ 8,000 ರೂ.ಗಳ ತ್ವರಿತ ಡಿಸ್ಕೌಂಟ್​ ಸಹ ನೀಡಲಾಗುತ್ತಿದೆ.

ಮತ್ತೊಂದೆಡೆ ಬಳಕೆದಾರರು ಈ ಫೋನ್‌ಗಳೊಂದಿಗೆ GALAXY ವಾಚ್ 7, GALAXY ವಾಚ್ ಅಲ್ಟ್ರಾ ಅಥವಾ ಗ್ಯಾಲಕ್ಸಿ ಬಡ್ಸ್ 3 ಅನ್ನು ಖರೀದಿಸಿದರೆ, ಅವರಿಗೆ 18 ಸಾವಿರ ರೂ.ವರೆಗೆ ರಿಯಾಯಿತಿ ನೀಡಲಾಗುತ್ತದೆ.ಈ ಸೀರಿಸ್​ ಸ್ಮಾರ್ಟ್​ಫೋನ್​ಗಳನ್ನು ಖರೀದಿಸುವ ಗ್ರಾಹಕರಿಗೆ ಸ್ಯಾಮ್‌ಸಂಗ್ ಹಲವಾರು ಕೊಡುಗೆಗಳನ್ನು ಘೋಷಿಸಿದೆ. ಯಾರಾದರೂ ತಮ್ಮ ಹಳೆಯ ಫೋನ್ ಅನ್ನು Galaxy S25 ಸೀರಿಸ್​ಗೆ ವಿನಿಮಯ ಮಾಡಿಕೊಂಡರೆ ಅವರಿಗೆ 9 ಸಾವಿರ ರೂ.ಗಳ ವಿನಿಮಯ ಬೋನಸ್ ನೀಡಲಾಗುತ್ತಿದೆ.

 

ಇದನ್ನು ಓದಿರಿ :HEALTH BENEFITS OF GREEN TEA:ಚರ್ಮದ ಹೊಳಪಿನೊಂದಿಗೆ ಒಟ್ಟಾರೆ ದೇಹದ ಆರೋಗ್ಯಕ್ಕೆ ಇಲ್ಲಿದೆ ನೋಡಿ ಉತ್ತಮ ಪಾನೀಯ .

 

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...