WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
Leh (Ladakh) News:
ಭಾರತೀಯ ಸೇನೆ ಮತ್ತು ಸ್ಥಳೀಯ ಮಧ್ಯಸ್ಥಗಾರರ ಸಹಯೋಗದಲ್ಲಿ ಅಧಿಕಾರಿಗಳು ಕಣಿವೆಯಲ್ಲಿ ಈ ಯೋಜನೆಗೆ ಮುಂದಾಗಿದ್ದು, ಸ್ಥಳೀಯ ಪ್ರವಾಸಿಗ ಆಕರ್ಷಿಣೀಯ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ ಇದೀಗ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸೇರಿದಂತೆ ಇತರೆ ಕಾರ್ಯಾಚರಣೆಗಳು ಭರದಿಂದ ಸಾಗಿವೆ.
ಗಾಲ್ವಾನ್ ಕಣಿವೆಯನ್ನು ಪ್ರವಾಸಿ ಆಕರ್ಷಣಾ ತಾಣವಾಗಿಸುವ ನಿಟ್ಟಿನಲ್ಲಿ ಮುಂದಾಗಲಾಗಿದ್ದು, ಈ ಕುರಿತು ರಿಂಚನ್ ಆಂಗ್ಮೋ ಚುಮಿಕ್ಚನ್ ಬರೆದ ಲೇಖನ ಇಲ್ಲಿದೆ. 2020ರ ಜೂನ್ನಲ್ಲಿ ಭಾರತೀಯ ಮತ್ತು ಚೀನಿ ಯೋಧರ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ LADAKHನ ಗಾಲ್ವಾನ್ ಕಣಿವೆಯನ್ನು ಇದೀಗ ಪ್ರವಾಸಿ ಆಕರ್ಷಣ ತಾಣವಾಗಿ ರೂಪಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
Emphasis on Ladakh border tourism:LADAKH ಪರಂಪರೆ ಮತ್ತು ಆರ್ಥಿಕ ಬೆಳವಣಿಗೆ ವೇಗ ಹಾಗೂ ಸೇನಾ ಬಲದ ಗೌರವಾರ್ಥದಲ್ಲಿ ಈ ಯೋಜನೆ ಪ್ರಮುಖವಾಗಿದ್ದು, ಈ ಯೋಜನೆ 2025ರ ಜೂನ್ಗೆ ಸಾರ್ವಜನಿಕ ಮುಕ್ತಗೊಳಿಸುವ ಗುರಿಯನ್ನು ಹೊಂದಲಾಗಿದೆ.
ಈ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ಅಖಿಲ LADAKH ಪ್ರವಾಸಿ ಕಾರ್ಯಾಚರಣೆ ಅಸೋಸಿಯೇಷನ್ನ (ಎಎಲ್ಟಿಇಎ) ಕಾರ್ಯಕಾರಿ ಸದಸ್ಯ ಲೋಬ್ಜಾಂಗ್ ವಿಸುಧಾ, ಭಾರತ್ ಗಾಲ್ವಾನ್ ಪ್ರದೇಶದ ರೆಕ್ಕಿ ಪ್ರದೇಶದಲ್ಲಿ ಎಎಲ್ಟಿಇಒ ಪ್ರತಿನಿಧಿಗಳು, ಟಾಕ್ಸಿ ಯೂನಿಯನ್, ಟೆಂಪೊ, ಬೈಕ್ ಯೂನಿಯನ್ ಮತ್ತು ಅಲ್ಘಾ ಪ್ರವಾಸೋದ್ಯಮದ 10 ಸದಸ್ಯರು ಜನವರಿ 19ರಂದು ಇಲ್ಲಿ ಸ್ಥಳ ವೀಕ್ಷಣೆ ನಡೆಸಿದೆ.
ಸ್ಥಳೀಯ ಸಮುದಾಯಗಳಿಗೆ ಆರ್ಥಿಕ ಪ್ರಯೋಜನವಾಗಲು ಹಾಗೂ ಈ ಪ್ರದೇಶಗಳಲ್ಲಿನ ಗ್ರಾಮೀಣ ಮತ್ತು ಗಡಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜನವರಿ 15ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇನಾ ದಿನದಂದು ಈ ಕುರಿತು ಅಧಿಕೃತ ಘೋಷಣೆ ಮಾಡಿದ್ದರು.
ಭಾರತೀಯ ಯೋಧರ ತ್ಯಾಗ ಸ್ಮರಣೆ ಯುದ್ಧ ಸ್ಮಾರಕ ನಿರ್ಮಾಣದಿಂದ ಇಲ್ಲಿನ ವನ್ಯಜೀವಿ ಹಾಗೂ ಸಂಸ್ಕೃತಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಯೋಜನೆಯು LADAKH ಪ್ರವಾಸೋದ್ಯಮ ಹಾಗೂ ಪ್ರಾದೇಶಿಕ ಅಭಿವೃದ್ಧಿಯನ್ನು ಹೊಂದಿದೆ ಎಂದಿದ್ದರು.
ಈ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ಅಖಿಲ LADAKH ಪ್ರವಾಸಿ ಕಾರ್ಯಾಚರಣೆ ಅಸೋಸಿಯೇಷನ್ನ (ಎಎಲ್ಟಿಇಎ) ಕಾರ್ಯಕಾರಿ ಸದಸ್ಯ ಲೋಬ್ಜಾಂಗ್ ವಿಸುಧಾ, ಭಾರತ್ ಗಾಲ್ವಾನ್ ಪ್ರದೇಶದ ರೆಕ್ಕಿ ಪ್ರದೇಶದಲ್ಲಿ ಎಎಲ್ಟಿಇಒ ಪ್ರತಿನಿಧಿಗಳು, ಟಾಕ್ಸಿ ಯೂನಿಯನ್, ಟೆಂಪೊ, ಬೈಕ್ ಯೂನಿಯನ್ ಮತ್ತು ಅಲ್ಘಾ ಪ್ರವಾಸೋದ್ಯಮದ 10 ಸದಸ್ಯರು ಜನವರಿ 19ರಂದು ಇಲ್ಲಿ ಸ್ಥಳ ವೀಕ್ಷಣೆ ನಡೆಸಿದೆ.
Gulwan Valley to attract tourists:2020ರಲ್ಲಿ ಈ ಗಾಲ್ವಾನ್ ಸಂಘರ್ಷದಲ್ಲಿ ಕರ್ನಲ್ ಸಂತೋಷ್ ಬಾಬು ಹುತಾತ್ಮರಾದರು. ಸಾಂಕ್ರಾಮಿಕತೆ ಸಮಯದಲ್ಲೂ ಈ ಪ್ರದೇಶ ಹೆಚ್ಚು ಗಮನ ಸೆಳೆದಿತ್ತು.
LADAKHಗೆ ದೇಶ ಪ್ರೇಮದ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುವ ಗುರಿಯನ್ನು ಈ ಉಪಕ್ರಮ ಹೊಂದಿದೆ.ದಿ ರೆಕ್ಕಿಯನ್ನು ಆರಂಭದಲ್ಲಿ ಜಿಒಸಿ ಖರು ವಿಭಾಗದಿಂದ ಸಂಘಟಿಸಲಾಗುವುದು.
ಇಲ್ಲಿ ಸ್ಥಳೀಯ ಪ್ರವಾಸೋದ್ಯಮ ಪ್ರದೇಶವನ್ನು ತೆರೆಯುವ ಯೋಜನೆ ಹೊಂದಿದ್ದು, ಪ್ಯಾನ್ಗೊಂಗ್ ಕೇರೆ ಇಲ್ಲಿನ ಪ್ರವಾಸಿಗರ ಆಕರ್ಷಣೆಯಾಗಿದ್ದು, ಜೊತೆಗೆ ಗಾಲ್ವಾನ್ ಮತ್ತಷ್ಟು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ.
Open for tourists after June 15:ಲೇಹ್ನ ಎಲ್ಎಎಚ್ಡಿಸಿ ಕಾರ್ಯಕಾರಿ ಕೌನ್ಸಿಲರ್ ತಹಿ ನಮ್ಗ್ಯಾಲ್ ಯಕ್ಜೀ ಮಾತನಾಡಿ, ಇದೊಂದು ಸಂತಸದ ಸಂದರ್ಭವಾಗಿದ್ದು, ನಮ್ಮ ದೀರ್ಘಕಾಲದ ಬವಣೆ ಕೊನೆಯಾಗುತ್ತಿದೆ.
2020ರ ಗಾಲ್ವಾನ್ ಘಟನೆ ಬಳಿಕ ಈ ಕಣಿಗೆ ಸಾಕಷ್ಟು ಗಮನವನ್ನು ಸೆಳೆಯುವ ಮೂಲಕ ಹಲವು ಜನರು ಇಲ್ಲಿಗೆ ಭೇಟಿ ನೀಡುವ ಉತ್ಸಾಹ ತೋರಿದರು. ರಕ್ಷಣಾ ಅಧಿಕಾರಿಗಳು ಕೂಡ ಕಳೆದ ಎರಡ್ಮೂರು ವರ್ಷದಿಂದ ಈ ಕುರಿತು ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ಸ್ಮಾರಕ ನಿರ್ಮಾಣಕ್ಕೆ ನೋಡುತ್ತಿದ್ದಾರೆ.
ದುರ್ಬುಕ್ನಿಂದ 120 ಕಿ.ಮೀ ದೂರದಲ್ಲಿ 30 ಜನರಿಗೆ ಉಳಿದುಕೊಳ್ಳಲು ಕಟ್ಟಡ ನಿರ್ಮಾಣ ಮಾಡುವುದು. ಈ ಮಾರ್ಗದಲ್ಲಿನ ಕೊನೆಯ ಗ್ರಾಮ ಶಾಯೊಕ್ ಆಗಿದೆ ಎಂದು ಯೋಜನೆ ವಿವರವನ್ನು ವಿಸ್ಸುದಾ ನೀಡಿದರು.
ಅಧಿಕೃತವಾಗಿ ಜೂನ್ 15ರ ಬಳಿಕ ಈ ಪ್ರದೇಶವು ಪ್ರವಾಸಿಗರಿಗೆ ಮುಕ್ತವಾಗಲಿದ್ದು, ಇದೀಗ ಇಲ್ಲಿ ಪ್ರಮುಖವಾಗಿ ಎರಡು ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಅದರಲ್ಲಿ ಒಂದು ಮಿಡ್ವೇ ಪಾಯಿಂಟ್.ದುರ್ಬುಕ್ನಿಂದ 56 ಕಿ.ಮೀ ದೂರದಲ್ಲಿದ್ದು, ಇಲ್ಲಿ ಕೆಫೆಟೇರಿಯಾ, ಸ್ಮರಣಿಕೆ ಶಾಪ್ ತೆರೆಯುವುದು.
Many development projects including Martyrs Memorial:ಸದ್ಯ ಲೇಹ್ ಪ್ರವಾಸ ನಡೆಸುವ ಪ್ರವಾಸಿಗರು ಪ್ಯಾಗೊಂಗ್ ಲೇಕ್ವರೆಗೆ ಸಾಗಿ ಅದೇ ದಿನ ಮರಳಬೇಕಿದೆ. ಒಂದು ವೇಳೆ ಗಾಲ್ವಾನ್ ಪ್ರವಾಸ ಮುಕ್ತವಾದರೆ, ಪ್ರವಾಸಿಗರು ಮತ್ತು 120 ಕಿ.ಮೀ ಕಾರಿನಲ್ಲಿ ಸಾಗಿ ದುರ್ಬುಕ್ ಗ್ರಾಮದಲ್ಲಿ ರಾತ್ರಿ ತಂಗಬಹುದಾಗಿದೆ.
ಇದು ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡಲಿದ್ದು ಟಾಕ್ಸಿ, ಹೋಟೆಲ್, ಗೆಸ್ಟ್ ಹೌಸ್ ಮತ್ತು ರೆಸ್ಟೋರೆಂಟ್ಗೆ ಸಹಾಯಕವಾಗಲಿದೆ ಎಂದು ಯಕ್ಜೀ ತಿಳಿಸಿದರು.ಇತ್ತೀಚೆಗೆ ದುರ್ಬಕ್ ನಲ್ಲಿ ಈ ಕುರಿತು ಸಭೆ ನಡೆಸಿದ್ದು, 20220ರ ಸ್ಮರಣಾರ್ಥವಾಗಿ ಗಾಲ್ವಾನ್ ಮ್ಯೂಸಿಯಂ ಅಭಿವೃದ್ಧಿ ಮಾಡಲಾಗುತ್ತಿದೆ.
ಪ್ರವಾಸಿಗರು ಇಲ್ಲಿನ ಅದ್ಭುತ ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾಗಿದೆ. ಇಲ್ಲಿ ತರ್ಸಿಂಗ್ ಕರ್ಮೊದಲ್ಲಿ ವರ್ಷಕ್ಕೆ ಎರಡು ಬಾರಿ ನಡೆಯುವ ಬೌದ್ಧರ ಹಬ್ಬಕ್ಕೂ ಸಾಕ್ಷಿಯಾಗಬಹುದು ಎಂದಿದ್ದಾರೆ.
ಲೇಹ್ನ ಹೆಡ್ಕ್ವಾರ್ಟ್ರಸ್ ಆಗಿರುವ ಇದು ಇಲ್ಲಿಂದ 240 ಕಿ.ಮೀ ದೂರದಲ್ಲಿದ್ದು, ದುರ್ಬುಕ್ ತೆಹ್ಸಿಲ್ ಜಿಲ್ಲೆಯಿಂದ 120 ಕಿ.ಮೀ ದೂರದಲ್ಲಿದೆ.ಈ ಯೋಜನೆ ಮೂಲಕ ಇಲ್ಲಿ ಒಟ್ಟಾರೆ ಅಭಿವೃದ್ಧಿಯಾಗಲಿದ್ದು ಪೂರ್ವ LADAKH ಜನರಿಗೆ ಪ್ರಯೋಜನವಾಗಲಿದೆ. ಇದು ಐತಿಹಾಸಿಕವಾಗಿಯೂ ಪ್ರಮುಖ ಪ್ರದೇಶವಾಗಿದೆ.
Opportunity to visit the last village:ಈ ಪ್ರದೇಶದಲ್ಲಿ ಯಾಕ್, ಕಡವೆ ನೆಟೆಲೋಪ್, ಪಲ್ಲಾಸ್ ಬೆಕ್ಕು, ಹಿಮ ಚಿರತೆಗಳು, ಲಿಂಕ್ಸ್ ಸೇರಿದಂತೆ ಇತರೆ ವನ್ಯಜೀವಿಗಳ ವಾಸಸ್ಥಾನವಾಗಿದೆ.
ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ವನ್ಯಜೀವಿ ಪ್ರಿಯರನ್ನು ಮಾತ್ರವಲ್ಲದೇ ಆಕರ್ಷಿಸದೆ ಈ ಪ್ರದೇಶದನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಪ್ರೋತ್ಸಾಹಿಸುತ್ತದೆ ಎಂದು ತಿಳಿಸಿದರು.ಶಯೋಕ್ ಸೇತುವೆ ಉದ್ಘಾಟನಾ ಸಂದರ್ಭದಲ್ಲಿ ಭೇಟಿ ನೀಡಿದ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ನಾವು ಮನವಿಯನ್ನು ಸಲ್ಲಿಸಿದ್ದೆವು. ಇದೀಗ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.
ಮೇ ಅಥವಾ ಜೂನ್ 2025ಕ್ಕೆ ಗಾಲ್ವಾನ ಪ್ರವಾಸಿಗರಿಗೆ ಮುಕ್ತವಾಗಲಿದೆ ಎಂದು ಖಚಿತಪಡಿಸಿದ ಅವರು, 2020ರ ಬಳಿಕ ಈ ಪ್ರದೇಶಕ್ಕೆ ಪ್ರವಾಸಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿತ್ತು.
ಸದ್ಯ ದುರ್ಬುಕ್ ಮತ್ತು ಶಯೊಕ್ ಸ್ಥಳೀಯರು ಮತ್ತು ಕುರಿಗಾಹಿಗಳು ಮತ್ತು ಕೂಲಿಗಳು ಮಾತ್ರ ವಿಶೇಷ ಅನುಮತಿ ಮೇರೆಗೆ ತಮ್ಮ ಕುದುರೆ, ಯಾಕ್ ಮೇರೆಗೆ ಈ ಪ್ರದೇಶಕ್ಕೆ ಹೋಗಬಹುದು ಎಂದರು.
ಛುಶುಲ್ ಕೌನ್ಸಿಲರ್, ಕೊಚೊಕ್ ಸ್ಟನ್ಜಿನ್ ಕೂಡ, ಗಾಲ್ವಾನ್ ಪ್ರವಾಸಿಗರಿಗೆ ಪ್ರಮುಖ ಆಕರ್ಷಣ ತಾಣವಾಗಲಿದೆ ಎಂದಿದ್ದು, ಇದಲ್ಲಿ 20 ಯೋಧರ ಸ್ಮಾರಕ ನಿರ್ಮಾಣ ಮಾಡಲು ಸೇನೆ ಯೋಜಿಸಿದೆ. ಗೃಹ ಸಚಿವಾಲಯ ಈಗಾಗಲೇ ಕಣಿವೆವರೆಗೆ ಟ್ರಕ್ಕಿಂಗ್ಗೆ ಅವಕಾಶವನ್ನು ನೀಡಿದೆ. ಈ ಪ್ರದೇಶವು ವನ್ಯಜೀವಿಗಳ ಪ್ರವಾಸೋದ್ಯಮಕ್ಕೆ ಪ್ರಮುಖವಾಗಿದೆ ಎಂದರು.
ಇದ್ದನು ಓದಿರಿ :SHAH JAHAN URUS: ಪ್ರವಾಸಿಗರಿಗೆ ಉಚಿತ ಪ್ರವೇಶ, ಬಿಗಿ ಭದ್ರತೆ.