ಕಳೆದ ಮೂರು ವಾರಗಳಿಂದ ಬಿಗ್ಬಾಸ್ ಮನೆ ಮಂಜು, ಗೌತಮಿ ವರ್ಷಸ್ ಮೋಕ್ಷಿತಾ ಎನ್ನುವಂತಾಗಿತ್ತು. ಮಹಾರಾಜ ಮತ್ತು ಯುವರಾಣಿ ಟಾಸ್ಕ್ನಿಂದ ಆರಂಭವಾಗಿದ್ದ ಜಿದ್ದಾಜಿದ್ದಿನ ಫೈಟ್ಗೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.
ಗೆಳತನದ ವಿಚಾರದಲ್ಲಿ ಮಂಜು ಅವರ ಹೆಗಲಿಗೆ ಹೆಗಲಾಗಿದ್ದ ಗೌತಮಿ ಉಲ್ಟಾ ಹೊಡೆದಿದ್ದಾರೆ. ಕಲರ್ಸ್ ಕನ್ನಡ ರಿಲೀಸ್ ಮಾಡಿರುವ ಪ್ರೊಮೋದಲ್ಲಿ ಮಂಜುಗೆ ಗೌತಮಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಗಾರ್ಡನ್ ಏರಿಯಾದಲ್ಲಿ ಕೂತು ಮಾತನಾಡುವ ವೇಳೆ ಗೌತಮಿ ಮಂಜುಗೆ ಬುದ್ಧಿ ಹೇಳಿದ್ದಾರೆ. ಆಗ ಮೋಕ್ಷಿತಾ ಅವರ ಏನು ಹೇಳಿದರು? ಅವರು ಇಬ್ಬರೇ ಮಾತನಾಡುತ್ತಾರೆ ಎಂದು ಆರೋಪಿಸಿದರು.
ನಾವು ಇಬ್ಬರೇ ಇರಬೇಕಾದರೂ ಕೂಡ ನೀವೇ ಮಾತನಾಡುತ್ತೀರಿ ಎಂದು ನನಗೆ ಅನಿಸಿತು. ಅವರು ಹೇಳಿದ ಲೈನ್ಗಳು ನನಗೆ ಸರಿಯಾಗಿ ಇದೆ ಎಂದು ಅನಿಸಿತು. ನೀವು ಹೇಳಿದ ಹಾಗೆ ನೀವೇ ಇಲ್ಲ. ಇಲ್ಲಿ ಗೆಳೆಯ, ಗೆಳತಿ ಗೆಳತನ ಇರಲ್ಲ ಎಂದಿರುವ ಗೌತಮಿ, ಮಂಜು ಅವರನ್ನು ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗಿಟ್ಟಿದ್ದಾರೆ. ಇದು ಮಂಜು ಅವರ ಕೋಪಕ್ಕೆ ಕಾರಣವಾಗಿದೆ. ಅಲ್ಲದೇ ಮುನಿಸು ಬಿಟ್ಟು ಗೌತಮಿ ಮತ್ತು ಮೋಕ್ಷಿತಾ ಮತ್ತೆ ಒಂದು ಆಗ್ತಾರಾ ಎಂದು ವೀಕ್ಷಕರು ಮಾತನಾಡಿಕೊಳ್ತಿದ್ದಾರೆ.