ಹಮಾಸ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮ ಹಾಗೂ ಒತ್ತೆಯಾಳುಗಳ ಬಿಡುಗಡೆಗೆ ಕತಾರ್ ಮತ್ತು ಅಮೆರಿಕ ಘೋಷಣೆ ಮಾಡಿದೆ.
ಆದರೆ, ಈ ಕುರಿತು ಅಂತಿಮ ಮಾತುಕತೆ ಬಾಕಿ ಇದ್ದು, ಈ ಸಂಬಂಧ ಕಾರ್ಯ ನಿರ್ವಹಿಸಲಾಗುವುದು ಎಂದು ಕೂಡ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ತಿಳಿಸಿದ್ದಾರೆ.ಕಳೆದೊಂದು ವರ್ಷದಿಂದ ಸಾಗುತ್ತಿರುವ GAZA ಮತ್ತು ಇಸ್ರೇಲ್ ಯುದ್ಧ ನಿಲ್ಲುವ ಭರವಸೆ ಮೂಡಿದೆ.
ಹಮಾಸ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮ ಹಾಗೂ ಒತ್ತೆಯಾಳುಗಳ ಬಿಡುಗಡೆ ಕುರಿತು ಕತಾರ್ ಮತ್ತು ಅಮೆರಿಕ ಘೋಷಣೆ ಮಾಡಿವೆ. ಈ ಕುರಿತು ನಡೆದ ಒಪ್ಪಂದದಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ.ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಚುನಾಯಿತ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜೊತೆಗೆ ಬುಧವಾರ ನೇತನ್ಯಾಹು ಮಾತನಾಡಿದ್ದು, ಭದ್ರತಾ ಒಪ್ಪಂದಕ್ಕೆ ಸಹಾಯ ಮಾಡಿದ್ದಕ್ಕೆ ಧನ್ಯವಾದವನ್ನು ಸಲ್ಲಿಸಿದ್ದಾರೆ. ಈ ಒಪ್ಪಂದದಲ್ಲಿ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಕೂಡ ಪ್ರಮುಖ ಪಾತ್ರ ಹೊಂದಿದ್ದು, 2023ರ ಅಕ್ಟೋಬರ್ 7ರಿಂದ ಆರಂಭವಾದ ಹಮಾಸ್ ದಾಳಿಯಲ್ಲಿ ಒತ್ತೆಯಾಳಾಗಿರುವವರನ್ನು ಮರಳಿ ತರಲು ಇದು ಸರಿಯಾದ ಸಮಯ ಎಂದಿದ್ದಾರೆ.
ಈ ದಾಳಿಗೆ ಪ್ರತಿಯಾಗಿ ದಾಳಿ ನಿರ್ಧಾರ ಮಾಡಿದ ಇಸ್ರೇಕ್, GAZA ವನ್ನು ಬಹುಪಾಲು ನಾಶ ಮಾಡಿ, 46,707 ಮಂದಿ ಹತ್ಯೆ ನಡೆಸಿತು ಎಂದು ಹಮಾಸ್ ಅಧಿಕಾರ ಹೊಂದಿರುವ ಪ್ರದೇಶದ ಆರೋಗ್ಯ ಸಚಿವರು ತಿಳಿಸಿದ್ದರು.2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ್ದ ದಾಳಿಯು ಇಸ್ರೇಲ್ ಇತಿಹಾಸದಲ್ಲೇ ಭೀಕರ ದಾಳಿಯಾಗಿದ್ದು, ಇದರಲ್ಲಿ 1,210 ಮಂದಿ ಸಾವನ್ನಪ್ಪಿದ್ದರು ಎಂದು ಎಎಫ್ಪಿ ತಿಳಿಸಿದೆ. ಈ ಒಪ್ಪಂದ ಘೋಷಣೆಯಾದ ಬಳಿಕ ಇಸ್ರೇಲ್ನಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ ಎಂದು GAZA ನಾಗರಿಕ ರಕ್ಷಣಾ ಪಡೆ ತಿಳಿಸಿದೆ.
Ceasefire to take effect from Sunday: ಕದನ ವಿರಾಮವೂ ಭಾನುವಾರದಿಂದ ಜಾರಿಯಾಗಲಿದೆ. ಇದು ಯುದ್ಧದ ಕೊನೆಯ ಪುಟ ಎಂಬ ಭರವಸೆಯನ್ನು ನಾವು ಹೊಂದಿದ್ದೇವೆ. ಈ ಒಪ್ಪಂದದ ಎಲ್ಲಾ ಷರ್ತುಗಳ ಜಾರಿಗೆ ಎಲ್ಲರೂ ಬದ್ಧವಾಗಿದ್ದಾರೆ ಎಂಬ ಭರವಸೆಯನ್ನು ನಾವು ಹೊಂದಿದ್ದೇವೆ ಎಂದಿದ್ದಾರೆ.
ಈ ಒಪ್ಪಂದ ಕುರಿತು ಬುಧವಾರ ಮಾತನಾಡಿರುವ ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಾಸಿಮ್ ಅಲ್-ಥಾನಿ, ಈ ಒಪ್ಪಂದಕ್ಕಾಗಿ ಎರಡು ನಿಯೋಗಗಳು ಗಾಜಾ ಪಟ್ಟಿ ಸೇರಿವೆ.ಈ ನಡುವೆ ಮಾತನಾಡಿರುವ ಬಿಡೆನ್, ಈ ದಿನ ಬಂದಿರುವುದಕ್ಕೆ ಅಗಾಧ ತೃಪ್ತಿ ಇದೆ.
ಈ ಮಾತುಕತೆಯು ತನ್ನ ವೃತ್ತಿಯಲ್ಲಿನ ಕೆಲವು ಕಠಿಣಗಳಲ್ಲಿ ಒಂದಾಗಿದೆ. ಎರಡನೇ ಹಂತದ ಒಪ್ಪಂದವೂ ಯುದ್ಧವನ್ನು ಶಾಶ್ವತ ಅಂತ್ಯಕ್ಕೆ ತರುತ್ತದೆ ಎಂಬ ಕುರಿತು ಇನ್ನೂ ನಿರ್ಧಾರವಾಗಬೇಕಿದೆ. ಈ ಒಪ್ಪಂದ ಸಾಗುತ್ತದೆ ಎಂಬ ವಿಶ್ವಾಸವೂ ಇದೆ ಎಂದಿದ್ದಾರೆ.
ಕದನವಿರಾಮವೂ ಪ್ಯಾಲೇಸ್ತೇನಿಯರ ದೃಢತೆ ಮತ್ತು ಗಾಜಾ ಪಟ್ಟಿಯಲ್ಲಿ ನಮ್ಮ ಧೈರ್ಯದ ಪ್ರತಿರೋಧದ ಫಲಿತಾಂಶವಾಗಿದೆ ಎಂದು ಹಮಾಸ್ ತಿಳಿಸಿದೆ.
First 42 days of contract: ಕದನ ವಿರಾಮದ ಮೊದಲ 42 ದಿನದಲ್ಲಿ 33 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುವುದು. ಹಾಗೇ ಮೊದಲ ಹಂತದಲ್ಲಿ GAZA ದಲ್ಲಿರುವ ಇಸ್ರೇಲ್ ಪಡೆಗಳನ್ನು ಹಿಂಪಡೆಯಲಿದೆ. ಎರಡನೇ ಹಂತದಲ್ಲಿ ಒತ್ತೆಯಾಳುಗಳ ವಿನಿಮಯವಾಗಿ ಪ್ಯಾಲೆಸ್ತೇನಿಯ ಜೈಲಿಯಲ್ಲಿರುವವರನ್ನು ಬಿಡುಗಡೆ ಮಾಡಲಾಗುವುದು.
ಮೂರನೇ ಹಂತವು 42 ದಿನಗಳ ಬಳಿಕ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.ಕತಾರ್, ಈಜಿಪ್ಟ್ ಮತ್ತು ಅಮೆರಿಕ ಮದ್ಯವರ್ತಿಗಳು ಈ ಒಪ್ಪಂದ ಪ್ರಯತ್ನಗಳನ್ನು ತೀವ್ರಗೊಳಿಸಿದ್ದರಿಂದ, ಈ ಯುದ್ಧವೂ ಅಂತ್ಯದ ಅಂಚಿನಲ್ಲಿದೆ. ಕತಾರ್ ಶೇಖ್ ಮೊಹಮ್ಮದ್ ಮಾತನಾಡಿ, ಮೂರು ದೇಶಗಳು ಕೈರೋ ಮೂಲದ ಸಂಸ್ಥೆಯ ಮೂಲಕ ಕದನ ವಿರಾಮ ಜಾರಿಗೆ ತರಲು ಮೇಲ್ವಿಚಾರಣೆ ನಡೆಸಲಿವೆ. ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಆಗ್ರಹಿಸುತ್ತಿದ್ದ ಪ್ರತಿಭಟನಾಕಾರರು ಈ ಒಪ್ಪಂದ ಸುದ್ದಿ ತಿಳಿಯುತ್ತಿದ್ದಂತೆ GAZA ದಲ್ಲಿ ಸಾವಿರಾರು ಮಂದಿ ಸಂಭ್ರಮಾಚಾರಣೆ ಮಾಡಿದರು.
ಈ ಕುರಿತು ಸಂತಸ ವ್ಯಕ್ತಪಡಿಸಿ ಮಾತನಾಡಿರುವ GAZA ದ 45 ವರ್ಷದ ವ್ಯಕ್ತಿ, ಕಳೆದೊಂದು ವರ್ಷದ ಕೆಟ್ಟ ಕನಸೊಂದು ಕಡೆಗೂ ಅಂತ್ಯಗೊಳ್ಳುತ್ತಿದೆ. ನಾವು ಸಾಕಷ್ಟು ಜನರನ್ನು ಮತ್ತು ಎಲ್ಲವನ್ನೂ ಕಳೆದುಕೊಂಡಿದ್ದೇವೆ ಎಂದು ಭಾವುಕರಾದರು.
ಇದನ್ನು ಓದಿರಿ : ISRO SUCESSFULLY DOCKS SATELLITES : ಇಸ್ರೋದಿಂದ ಮತ್ತೊಂದು ಮೈಲಿಗಲ್ಲು