ನವದೆಹಲಿ: 2025ರಲ್ಲಿ ಹೆಚ್ಚು ಭೌಗೋಳಿಕ ರಾಜಕೀಯ ಅನಿಶ್ಚಿತತೆಯಿಂದ ಜಾಗತಿಕ ಆರ್ಥಿಕತೆಯು ಮಂದಗತಿಯ ಬೆಳವಣಿಗೆ ಕಾಣಲಿದೆ ಎಂದು ಬಾರ್ಕ್ಲೇಸ್ ಬ್ಯಾಂಕ್ ವರದಿ ತಿಳಿಸಿದೆ.
2025ರಲ್ಲಿ ಹೆಚ್ಚು ಭೌಗೋಳಿಕ ರಾಜಕೀಯ ಅನಿಶ್ಚಿತತೆಯಿಂದ ಜಾಗತಿಕ ಆರ್ಥಿಕತೆಯು ಮಂದಗತಿಯ ಬೆಳವಣಿಗೆ ಕಾಣಲಿದೆ ಎಂದು ಬಾರ್ಕ್ಲೇಸ್ ಬ್ಯಾಂಕ್ ವರದಿ ತಿಳಿಸಿದೆ.
ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯಲ್ಲಿ ಪ್ರಪಂಚವು ಗಮನಾರ್ಹ ಸುಧಾರಣೆ ಕಾಣಲು ಸಾಧ್ಯತೆಯಿಲ್ಲ.
ಮುಂದಿನ ದಿನಗಳಲ್ಲಿ ಹೂಡಿಕೆಯ ಮೇಲಿನ ಲಾಭ ನಿರೀಕ್ಷೆಗಿಂತ ಕಡಿಮೆಯಾಗುತ್ತದೆ ಎಂದಿದೆ.
2024ರ ಶೇ.3.2ಕ್ಕೆ ಹೋಲಿಸಿದರೆ ಜಾಗತಿಕ ಜಿಡಿಪಿ ಬೆಳವಣಿಗೆಯು 2025ರಲ್ಲಿ ಶೇ. 3.0 ಇರಲಿದೆ ಎಂದು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ.
ಈ ಸಂಕೀರ್ಣ ಪರಿಸ್ಥಿತಿಯನ್ನು ನ್ಯಾವಿಗೇಟ್ ಮಾಡಲು ಕಾರ್ಯತಂತ್ರದ ಯೋಜನೆ ಮತ್ತು ಪರಿಸರ, ಸಾಮಾಜಿಕ ಮತ್ತು ಆಡಳಿತ (ESG) ಅಂಶಗಳ ಮೇಲೆ ಕೇಂದ್ರೀಕರಿಸುವ ಮಹತ್ವವನ್ನು ವರದಿ ಒತ್ತಿಹೇಳಿದೆ.
ಸುಸ್ಥಿರತೆ ಹೆಚ್ಚು ಮುಖ್ಯವಾಹಿನಿಗೆ ಬರುತ್ತದೆ. ಹೂಡಿಕೆದಾರರು ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಂಪನಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರಲ್ಲಿ ಇಎಸ್ಜಿ ಅಂಶಗಳನ್ನು ಪರಿಗಣಿಸಬೇಕಾಗಿದೆ ಎಂದು ವರದಿ ಹೇಳಿದೆ.
ಅಮೆರಿಕದಲ್ಲಿ ಆರ್ಥಿಕ ದೃಢವಾಗಿ ಬೆಳವಣಿಗೆಯಾಗುವ ನಿರೀಕ್ಷೆಯಿದೆ ಎಂದು ವರದಿಯು ಉಲ್ಲೇಖಿಸಿದೆ. 2025ರಲ್ಲಿ ಶೇ.2 ಕ್ಕಿಂತ ಹೆಚ್ಚಿನ ಬೆಳವಣಿಗೆಯ ಅಂದಾಜು ಮಾಡಲಾಗಿದೆ. ಈ ಬೆಳವಣಿಗೆ ವಿತ್ತೀಯ ನೀತಿ ಹೊಂದಾಣಿಕೆಯನ್ನು ಬೆಂಬಲಿಸಲಿದೆ ಎಂದು ವರದಿ ತಿಳಿಸಿದೆ.
ಶೇ. 0.7ರಷ್ಟು ಜಿಡಿಪಿ ಬೆಳವಣಿಗೆಯೊಂದಿಗೆ ಯುರೋಜೋನ್ ಸ್ಪಲ್ಪ ಪ್ರಮಾಣ ಚೇತರಿಕೆ ಕಾಣುವ ನಿರೀಕ್ಷೆಯಿದೆ. ಜಿಡಿಪಿ ಬೆಳವಣಿಗೆಯನ್ನು ಶೇಕಡಾ 0.7 ರಷ್ಟು ನಿರೀಕ್ಷಿಸಲಾಗಿದೆ.
ಚೀನಾದ ಜಿಡಿಪಿ ಬೆಳವಣಿಗೆ 2025ಕ್ಕೆ ಶೇ. 4.0 ಪ್ರತಿಶತಕ್ಕೆ ಇಳಿಕೆಯಾಗುವ ಸಾಧ್ಯತೆ ಎಂದು ವರದಿ ವಿವರಿಸಿದೆ.
ಚೀನಾದ ಆರ್ಥಿಕತೆ ಬೆಳವಣಿಗೆ 2024ರಲ್ಲಿ ನಿಧಾನಗೊಂಡಿದೆ ಮತ್ತು ಸದ್ಯ ಶೇ. 4.8 ರಷ್ಟು ಬೆಳೆವಣಿಗೆಯ ನಿರೀಕ್ಷೆಯಿದೆ.
2025ರಲ್ಲಿ ಜಿಡಿಪಿ ಬೆಳವಣಿಗೆ ಶೇ.4 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.