WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
New Delhi News:
ಮುಂದಿನ 2 ವರ್ಷಗಳಲ್ಲಿ GOLDದ ಬೆಲೆ ಮತ್ತೆ ಏರಿಕೆಯಾಗಲಿದೆ. ಬೇಡಿಕೆ ಹೆಚ್ಚಿದ ಹಿನ್ನೆಲೆ ಮುಂಗಡ ಬುಕ್ಕಿಂಗ್ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಭವಿಷ್ಯದಲ್ಲಿ GOLDದ ಮೇಲಿನ ಹೂಡಿಕೆಯು ಭಾರೀ ಲಾಭ ತಂದು ಕೊಡಲಿದೆ ಎಂದು ತಿಳಿಸಿದ್ದಾರೆ.GOLDದ ದರವು ಇತ್ತೀಚಿನ ದಿನಗಳಲ್ಲಿ ಗಗನಮುಖಿಯಾಗಿದೆ. ಕಳೆದ 15 ದಿನಗಳಲ್ಲಿ 10 ಸಾವಿರಕ್ಕೂ ಅಧಿಕ ರೂಪಾಯಿ ಏರಿಕೆ ಕಂಡಿದೆ. ಹಳದಿ ಲೋಹದ ಬೆಲೆಯು ಇಲ್ಲಿಗೆ ನಿಲ್ಲುವ ಲಕ್ಷಣವಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ದರವು ವಿಪರೀತ ಹೆಚ್ಚಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Yellow metal will not reach 25 lakh rupees; ಜಾಗತಿಕ ವಿದ್ಯಮಾನಗಳು ವಿವಿಧ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತಿರುವ ಕಾರಣ, GOLDಕ್ಕೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ, ಅದರ ದರವೂ, ವಿಪರೀತ ಏರಿಕೆ ಗತಿಯಲ್ಲಿದೆ ಎಂದಿದ್ದಾರೆ. ಮುಂದಿನ ಒಂದೂವರೆ ಅಥವಾ ಎರಡು ವರ್ಷಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1.25 ಲಕ್ಷ ರೂಪಾಯಿ ತಲುಪಬಹುದು ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.
ಅಖಿಲ ಭಾರತ ರತ್ನ ಮತ್ತು ಆಭರಣ ದೇಶೀಯ ಮಂಡಳಿಯ (ಜಿಜೆಸಿ) ಅಧ್ಯಕ್ಷರು ಹೇಳುವಂತೆ, ಎರಡು ಮೂರು ದಿನಗಳಿಂದ ಈಚೆಗೆ ಚಿನ್ನದ ದರವು ಸ್ವಲ್ಪ ಕಡಿಮೆಯಾಗಿದೆ. ಆದರೆ, ಮುಂದಿನ 3- 4 ತಿಂಗಳುಗಳಲ್ಲಿ ಅದರ ಬೆಲೆಯು 10 ಗ್ರಾಂಗೆ 90 ಸಾವಿರ ರೂಪಾಯಿಗೆ ತಲುಪುವ ನಿರೀಕ್ಷೆಯಿದೆ. ಮೇ-ಜೂನ್‌ನಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರಬಹುದು.
ಮುಂದಿನ ಒಂದೂವರೆ ವರ್ಷದಲ್ಲಿ 10 ಗ್ರಾಂ ಚಿನ್ನವು 1.25 ಲಕ್ಷ ರೂಪಾಯಿಗೆ ತಲುಪಬಹುದು ಎಂದರು.ಹೆಚ್ಡಿಎಫ್ಸಿ ಸೆಕ್ಯುರಿಟೀಸ್‌ನ ಕರೆನ್ಸಿ ಮತ್ತು ಸರಕುಗಳ ಮುಖ್ಯಸ್ಥರು ಈಟಿವಿ ಭಾರತ್ಗೆ ತಿಳಿಸಿದಂತೆ, 10 ಗ್ರಾಂ ಚಿನ್ನವು 87 ಸಾವಿರ ದಾಟಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಹೂಡಿಕೆದಾರರು ಜಾಣ್ಮೆ ಬಳಸಿ ಹೂಡಿಕೆ ಮಾಡಬೇಕು ಎಂದು ಸಲಹೆ ನೀಡಿದರು. ದೀರ್ಘಾವಧಿಯಲ್ಲಿ ಚಿನ್ನದ ಬೆಲೆ ಏರುವ ಜೊತೆಗೆ, ಅಲ್ಪಾವಧಿಯಲ್ಲಿ ಬುಕಿಂಗ್ ಹೆಚ್ಚುವ ಸಾಧ್ಯತೆಯಿದೆ ಎಂದೂ ತಿಳಿಸಿದರು.
No increase in silver prices is expected; ಚಿನ್ನದಂತೆ ಬೆಳ್ಳಿಯ ಬೆಲೆಯಲ್ಲಿ ಇದೇ ರೀತಿಯ ಏರಿಕೆ ಕಂಡುಬರುವ ನಿರೀಕ್ಷೆಯಿಲ್ಲ ಎಂದೂ ಅಂದಾಜಿಸಿದ್ದಾರೆ.