ಕರ್ನಾಟಕ ಆದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. ಈಗಾಗಲೇ ಇದರ ಅಧಿಸೂಚನೆಯನ್ನು ಪ್ರಕಟ ಮಾಡಲಾಗಿತ್ತು. ಹಲವು ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಕೂಡ ಸಲ್ಲಿಕೆ ಮಾಡಿದ್ದರು. ಆದರೆ ಸರ್ಕಾರದ ಆದೇಶದಂತೆ ವಯೋಮಿತಿ ಸಡಿಲಿಕೆ ಮಾಡಿದ್ದರಿಂದ ಅಪ್ಲೇ ಮಾಡಿರದ ಅಭ್ಯರ್ಥಿಗಳು ಈಗ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಇದನ್ನೂ ಓದಿ : ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ದಿಶಾ ಮೋಹನ್.! ಏಷ್ಯನ್ ಪವರ್‌ಲಿಫ್ಟಿಂಗ್‌ನಲ್ಲಿ.!!
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ಮಾಹಿತಿ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಪ್ರಮುಖ ದಿನಾಂಕ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣ ವಿವರ ಇಲ್ಲಿ ಕೊಡಲಾಗಿದೆ. ಇದೆಲ್ಲವನ್ನು ಅಭ್ಯರ್ಥಿಗಳು ತಿಳಿದುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಈ ಹುದ್ದೆಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 20/02/2024ರಂದು ಅಧಿಸೂಚನೆ ಪ್ರಕಟಿಸಿತ್ತು. 05/04/2024ರಿಂದ ಅರ್ಜಿಗಳು ಆರಂಭ ಮಾಡಿ ಪೂರ್ಣಗೊಳಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ ವಯೋಮಿತಿ ಸಡಿಲಿಕೆ ಮಾಡಿದ್ದರಿಂದ ಅರ್ಜಿ ಸಲ್ಲಿಕೆ ಮಾಡಲು ಇನ್ನಷ್ಟು ಕಾಲಾವಕಾಶ ನೀಡಲಾಗಿದೆ.
ಇದನ್ನೂ ಓದಿ :ದಸರಾ ಹಬ್ಬದ ಪ್ರಯುಕ್ತ ಸ್ಮಾರ್ಟ್ಫೋನ್ಗಳ ಖರೀದಿಯ ಮೇಲೆ ಹಾವಳಿ.! Amazon Great Indian Festival Sale;
ಶೈಕ್ಷಣಿಕ ಅರ್ಹತೆ; ಅಭ್ಯರ್ಥಿಗಳು 12ನೇ ತರಗತಿ ಪೂರ್ಣಗೊಳಿಸಿರಬೇಕು
ಡಿಪ್ಲೋಮಾ, 2 ವರ್ಷದ ಐಟಿಐ, ಜೆಎಲ್ಡಿಸಿ ಮುಗಿಸಿದವರು ಅರ್ಜಿ ಹಾಕಬಹುದು
ಅರ್ಜಿ ಸಲ್ಲಿಕೆ ಮಾಡುವ ವಿಧಾನ; ಆನ್ಲೈನ್ ಮಾತ್ರ
ಹುದ್ದೆಯ ಹೆಸರು– ಗ್ರಾಮ ಆಡಳಿತ ಅಧಿಕಾರಿ
ಒಟ್ಟು ಹುದ್ದೆಗಳು ಎಷ್ಟು; 1,000
ವಯೋಮಿತಿ; 18 ವರ್ಷದಿಂದ 40 ವರ್ಷದ ಒಳಗಿನ ಅಭ್ಯರ್ಥಿಗಳು ಅಪ್ಲೇ ಮಾಡಬಹುದು.
ಎಸ್ಸಿ, ಎಸ್ಟಿ, ಪ್ರವರ್ಗ- 1 ಅಭ್ಯರ್ಥಿಗಳು- 40 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು- 38 ವರ್ಷ
ಸಾಮಾನ್ಯ ಅಭ್ಯರ್ಥಿಗಳು- 35 ವರ್ಷ ಮಾತ್ರ
ಅರ್ಜಿ ಶುಲ್ಕ;
ಎಸ್ಸಿ, ಎಸ್ಟಿ, ಪ್ರವರ್ಗ- 1 ಅಭ್ಯರ್ಥಿಗಳು- ₹500
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು- ₹750
ಮಾಜಿ ಸೈನಿಕ, ವಿಕಲ ಚೇತನರಿಗೆ- ₹500
ಇದನ್ನೂ ಓದಿ : ಆರ್ ಅಶ್ವಿನ್ ಅವರು ತಂದೆಯನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ್ದು ಏಕೆ .?
ಆಯ್ಕೇ ಪ್ರಕ್ರಿಯೆ ಹೇಗೆ ಇರುತ್ತದೆ..?
ರಾಜ್ಯಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ
ಪ್ರಮುಖವಾದ ದಿನಾಂಕಗಳು ಇಲ್ಲಿವೆ
ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ- 28/09/2024
ಶುಲ್ಕ ಪಾವತಿಸಲು ಕೊನೆ ದಿನಾಂಕ- 29/09/2024
ಹಳೆ ನೋಟಿಫಿಕೇಶನ್ ಲಿಂಕ್- https://drive.google.com/file/d/1oYQjumkMlJAK6fUbL67FC3mtDngapMhf/view
ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ಈ ಲಿಂಕ್ ಕ್ಲಿಕ್ ಮಾಡಿ- https://cetonline.karnataka.gov.in/kea/vacrec24