2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಕೊನೆಗೂ ಅಂತ್ಯಗೊಂಡಿದೆ. ಸೌದಿ ಅರೆಬಿಯಾದಲ್ಲಿ ಸತತ ಎರಡು ದಿನಗಳ ಕಾಲ ನಡೆದ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಟಾರ್ ಆಟಗಾರರೊಂದಿಗೆ ಯಂಗ್ ಪ್ಲೇಯರ್ಸ್ಗೂ ಮಣೆ ಹಾಕಿದೆ.
ಇಂಗ್ಲೆಂಡ್ ತಂಡದ ಯುವ ಆಟಗಾರ ಆರ್‌ಸಿಬಿ ಟೀಮ್ ಸೇರಿದ್ದಾರೆ. ಈ ಆಟಗಾರ ಆರ್‌ಸಿಬಿ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಂತೆ ಲಕ್ ಬದಲಾಗಿದೆ.
ಆರ್‌ಸಿಬಿ ಒಟ್ಟು 8 ವಿದೇಶಿ ಆಟಗಾರರನ್ನು ಖರೀದಿ ಮಾಡಿದೆ. ಈ ಪೈಕಿ ಮೂವರು ಇಂಗ್ಲೆಂಡ್ ಆಟಗಾರರು ಇದ್ದಾರೆ. ಇಂಗ್ಲೆಂಡ್ ತಂಡದ ಈ ಆಟಗಾರ ಟಿ20 ಮತ್ತು ಏಕದಿನ ಕ್ರಿಕೆಟ್ ಮಾತ್ರ ಆಡುತ್ತಿದ್ರೂ ಟೆಸ್ಟ್ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಈಗ ವೈಟ್ ಜೆರ್ಸಿಯಲ್ಲೂ ಮಿಂಚಲು ರೆಡಿ ಆಗಿದ್ದಾರೆ ಇಂಗ್ಲೆಂಡ್ ತಂಡದ 21 ವರ್ಷದ ಜಾಕೋಬ್ ಬೆಥೆಲ್.
ಇಂಗ್ಲೆಂಡ್ ತಂಡದ ಪರ ಟೆಸ್ಟ್ ಡೆಬ್ಯೂ ಮಾಡಲು ಮುಂದಾಗಿರೋ ಯುವ ಆಟಗಾರರನ್ನು ಆರ್‌ಸಿಬಿ 2ನೇ ದಿನದ ಮೆಗಾ ಹರಾಜಿನಲ್ಲಿ ಖರೀದಿ ಮಾಡಿದೆ. ಇವರು ಬರೋಬ್ಬರಿ 2.6 ಕೋಟಿಗೆ ಆರ್‌ಸಿಬಿ ತಂಡದ ಪಾಲಾದ್ರು.
ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಮಧ್ಯೆ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಮುಂದಿನ ತಿಂಗಳು ಎಂದರೆ ಡೆಸೆಂಬರ್ 28ನೇ ತಾರೀಕು ಮೊದಲ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡ ಘೋಷಣೆ ಆಗಿದ್ದು, ಜಾಕೋಬ್ ಬೆಥೆಲ್ ಅವರಿಗೆ ಆಡುವ ಅವಕಾಶ ಸಿಕ್ಕಿದೆ.
ಜಾಕ್ ಕ್ರಾಲಿ, ಬೆನ್ ಡಕೆಟ್, ಜಾಕೋಬ್ ಬೆಥೆಲ್, ಜೋ ರೂಟ್, ಹ್ಯಾರಿ ಬ್ರೂಕ್, ಒಲ್ಲಿ ಪೋಪ್ (ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್ (ನಾಯಕ), ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ ಸನ್, ಬ್ರೈಡನ್ ಕಾರ್ಸೆ, ಶೋಯೆಬ್ ಬಶೀರ್.