spot_img
spot_img

ಹೊಸ ವೈಶಿಷ್ಟ್ಯ ಪರಿಚಯಿಸಿದ ಗೂಗಲ್

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಗೂಗಲ್ ಹೊಸ ಫೀಚರ್​ ಅನ್ನು ಪ್ರಸ್ತುತಪಡಿಸಿದೆ. ತನ್ನ ಮ್ಯಾಪ್​ ಅಪ್ಲಿಕೇಶನ್‌ನಲ್ಲಿ ರಿಯಲ್​ ಟೈಂ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವನ್ನು (AQI) ಪರಿಶೀಲಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

ವಾಯು ಗುಣಮಟ್ಟದ ಒಳನೋಟಗಳನ್ನು ನೀಡುವುದರ ಜೊತೆಗೆ ಪ್ರಸ್ತುತ 2 ಬಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮ್ಯಾಪ್​ ಅಪ್ಲಿಕೇಶನ್, ವಾಯು ಗುಣಮಟ್ಟದ ತೀವ್ರತೆಯ ಆಧಾರದ ಮೇಲೆ ಸಲಹೆಗಳು ಮತ್ತು ಒಳನೋಟಗಳನ್ನು ಸಹ ನೀಡುತ್ತದೆ. ನಗರದ ಏರ್​ ಕ್ವಾಲಿಟಿ ಜೊತೆ ಸಲಹೆಯೂ ಲಭ್ಯ
ಗೂಗಲ್ ಮ್ಯಾಪ್​ ಪ್ರಕಾರ, ಪ್ರತಿ ಗಂಟೆಗೆ ವಾಯು ಗುಣಮಟ್ಟ ಸೂಚ್ಯಾಂಕ ಅಪ್​ಡೇಟ್​ ಆಗುತ್ತಲೇ ಇರುತ್ತದೆ. ಬಳಕೆದಾರರು ಭಾರತದ ಯಾವುದೇ ಸ್ಥಳದ ವಾಯು ಗುಣಮಟ್ಟದ ಬಗ್ಗೆ ತಿಳಿದುಕೊಳ್ಳಬಹುದು.

ಈ ಫೀಚರ್​ ಈ ವಾರದಿಂದ 100ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿರಲಿದೆ. ಗೂಗಲ್​ ಮ್ಯಾಪ್​ AQI-ಸಂಬಂಧಿತ ಮಾಹಿತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ಸ್ವರೂಪದಲ್ಲಿ ನೀಡುತ್ತದೆ. ಇದನ್ನು 0 ರಿಂದ 500ರ ವರೆಗಿನ ನಿರ್ದಿಷ್ಟ ಪ್ರದೇಶದಲ್ಲಿ ಮಾಲಿನ್ಯಕಾರಕಗಳನ್ನು ಬಳಸಿಕೊಂಡು ಮೌಲ್ಯಮಾಪನದ ಬಗ್ಗೆ ಮಾಹಿತಿ ನೀಡುತ್ತಿದೆ.

0 ರಿಂದ 50ರ ವರೆಗೆ ಉತ್ತಮ, 51 ರಿಂದ 100ರ ವರೆಗೆ ತೃಪ್ತಿಕರ, 101 ರಿಂದ 200 ಮಧ್ಯಮ, 201 ರಿಂದ 300ರ ವರೆಗೆ ಕಳಪೆ, 301 ರಿಂದ 400 ಅತ್ಯಂತ ಕಳಪೆ, 401 ರಿಂದ 500ರ ವರೆಗೆ ತೀವ್ರ ಕಳಪೆ.

ಮ್ಯಾಪ್​ನಲ್ಲಿ ವಾಯು ಗುಣಮಟ್ಟವನ್ನು ವಿವಿಧ ಬಣ್ಣಗಳನ್ನು ಬಳಸಿ ಗೂಗಲ್​ ಬಗ್ಗೆ ಮಾಹಿತಿ ನೀಡುತ್ತದೆ. ಹಸಿರು ಬಣ್ಣ ಉತ್ತಮಕ್ಕೆ ಬಳಸಿಕೊಂಡ್ರೆ, ಕೆಂಪು ಬಣ್ಣ ತೀವ್ರ ಕಳಪೆಗೆ ಬಳಸುತ್ತಿದೆ ಗೂಗಲ್​.

AQI ಅನ್ನು ಅವಲಂಬಿಸಿ, ಗೂಗಲ್​ ಮ್ಯಾಪ್​ ಸಾಮಾನ್ಯ ಮತ್ತು ದುರ್ಬಲ ಜನಸಂಖ್ಯೆಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಕುರಿತು ಎಚ್ಚರಿಕೆಯ ಸಂದೇಶವನ್ನು ಸಹ ನೀಡುತ್ತದೆ. ತೀವ್ರವಾದ AQI ಸಂದರ್ಭದಲ್ಲಿ, ಸಾಮಾನ್ಯ ಜನರು ಹೊರ ಚಟುವಟಿಕೆಯನ್ನು ತಪ್ಪಿಸಲು ಗೂಗಲ್​ ಮ್ಯಾಪ್​ ಶಿಫಾರಸು ಮಾಡುತ್ತದೆ. ಅಷ್ಟೇ ಅಲ್ಲ, ಅಸಕ್ತರು, ವಯಸ್ಸಾದವರು ಮನೆಯಲ್ಲೇ ಇರಬೇಕೆಂದು ಸೂಚಿಸುತ್ತದೆ.

ನೀವು ಕಳಪೆ ಅಥವಾ ತೀವ್ರ AQI ಹೊಂದಿರುವ ಸ್ಥಳದಲ್ಲಿ ವಾಸಿಸುತ್ತಿದ್ದರೆ, ಏರ್ ಪ್ಯೂರಿಫೈಯರ್ ಅನ್ನು ಪಡೆಯಲು ಶಿಫಾರಸು ಮಾಡಲಾಗುತ್ತದೆ ಮತ್ತು ಸರಿಯಾದುದನ್ನು ಆಯ್ಕೆ ಮಾಡಲು ವಿವರವಾದ ಮಾರ್ಗದರ್ಶನ ನೀಡುತ್ತದೆ.

ಸ್ಥಳದ ವಾಯು ಗುಣಮಟ್ಟದ ಬಗ್ಗೆ ತಿಳಿಯಲು ಮೊದಲು ಗೂಗಲ್​ ಮ್ಯಾಪ್ಸ್​ ಅನ್ನು ಓಪನ್​ ಮಾಡಿ. ಲೇಯರ್‌ಗಳ ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ವಾಯು ಗುಣಮಟ್ಟವನ್ನು ಆಯ್ಕೆಮಾಡಿ. ಇದು ನಿಮ್ಮ ಸ್ಥಳದ ರಿಯಲ್​ ಟೈಂ AQI ಅನ್ನು ತೋರಿಸುತ್ತದೆ. ಅದೇ ರೀತಿ, ನೀವು ಎಲ್ಲಿಯಾದರೂ ಪ್ರಯಾಣಿಸಲು ಯೋಜಿಸುತ್ತಿದ್ದರೆ, ಅದೇ ವಿಧಾನವನ್ನು ಬಳಸಿಕೊಂಡು ಆ ಸ್ಥಳದ ವಾಯು ಗುಣಮಟ್ಟವನ್ನು ಸಹ ನೀವು ಪರಿಶೀಲಿಸಬಹುದಾಗಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...