ಕಣ್ಣೂರು: ರಂಗಭೂಮಿ ಕಲಾವಿದರನ್ನು ಹೊತ್ತು ಸಾಗುತ್ತಿದ್ದ ಮಿನಿಬಸ್ವೊಂದು ಕಣ್ಣೂರಿನ ಸಮೀಪದ ಕೆಲಕಮ್ ಬಳಿ ಅಪಘಾತಕ್ಕೆ ಒಳಗಾಗಿದ್ದಾರೆ. ಮಿನಿ ಬಸ್ ಚಾಲಕ ಗೂಗಲ್ ಮ್ಯಾಪ್ ಸಹಾಯದಿಂದ ಬಸ್ ಚಲಾಯಿಸುತ್ತಿದ್ದರು. ರಸ್ತೆ ಮಾರ್ಗ ಕಡಿದಾಗಿದ್ದರಿಂದ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಕಾಯಂಕುಲಂನ ಅಂಜಲಿ ಮತ್ತು ಕರುನಾಗಪಲ್ಲಿಯ ಜೆಸ್ಸಿ ಮೋಹನ್ ಸಾವನ್ನಪ್ಪಿದ್ದಾರೆ. ಈ ಇಬ್ಬರು ರಂಗಭೂಮಿಯ ಪ್ರಮುಖ ನಟಿಯರಾಗಿ ಗುರುತಿಸಿಕೊಂಡಿದ್ದಾರೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದು, ಮತ್ತೋರ್ವರ ಸ್ಥಿತಿ ಗಂಭೀರವಾಗಿದೆ. ಅಪಘಾತದ ಶಬ್ಧ ಕೇಳಿದ ಕೂಡಲೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.
ಮಿನಿ ಬಸ್ ಚಾಲಕ ಗೂಗಲ್ ಮ್ಯಾಪ್ ಸಹಾಯದಿಂದ ಬಸ್ ಚಲಾಯಿಸುತ್ತಿದ್ದರು. ರಸ್ತೆ ಮಾರ್ಗ ಕಡಿದಾಗಿದ್ದರಿಂದ ಅನಾಹುತ ನಡೆದಿದೆ. ಶುಕ್ರವಾರ ಬೆಳಗ್ಗೆ 4 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಕಯಂಕುಮಂ ದೇವ ಕಮ್ಯೂನಿಕೇಷನ್ ರಂಗಭೂಮಿ ಗುಂಪು ಕಡನ್ನಪಲ್ಲಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಬಸ್ ವಯನಾಡ್ನ ಸುಲ್ತಾನ್ ಬಥೇರಿ ಕಡೆ ಸಾಗುತ್ತಿತ್ತು. ಪೆರಿಯಾ ಚೂರ್ಮದ ನೆಡುಂಪೊಲ್ಲಿ- ವಾಡಿ ರಸ್ತೆ ಬಂದ್ ಆಗಿದ್ದ ಕಾರಣ ಕೊಟ್ಟಿಯೂರು ಬಾಯ್ಸ್ ಟೌನ್ ರಸ್ತೆ ಮಾರ್ಗವಾಗಿ ಕೆಲಕಮ್ ಪರ್ಯಾಯ ಮಾರ್ಗವನ್ನು ಮ್ಯಾಪ್ ತೋರಿಸಿದೆ. ಮಲಯಂಪಡಿಯಲ್ಲಿ ಕಡಿದಾದ ಎಸ್ ತಿರುಗಳಿಂದಾಗಿ ಮಿನಿ ಬಸ್ ಅಪಘಾತಕ್ಕೀಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡವರನ್ನು ಕಾಯಂಕುಲಂನ ಉನ್ನಿ, ಉಮೇಶ್, ಸುರೇಶ್ ಮತ್ತು ಶಿಬು, ಎರ್ನಾಕುಲಂನ ಬಿಂಧು, ಕಲ್ಲುವತುಕ್ಕಲ್ನ ಚೆಲ್ಲಪ್ಪನ್ ಮತ್ತು ಕೊಲ್ಲಂನ ಶ್ಯಾಮ್ ಹಾಗೂ ಅಥಿರುಂಗಲ್ನ ಸುಭಾಶ್ ಎಂದು ಗುರುತಿಸಲಾಗಿದ್ದು, ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now