spot_img
spot_img

ಗೂಗಲ್​ ಸೆಫ್ಟಿ ಇಂಜಿನಿಯರಿಂಗ್​ ಕೇಂದ್ರ: ಹೈದರಾಬಾದ್

spot_img
spot_img

Share post:

ಹೈದರಾಬಾದ್​: ಭಾರತದಲ್ಲಿಯೇ ಮೊದಲ ಬಾರಿಗೆ ಗೂಗಲ್​ ಸೆಫ್ಟಿ ಇಂಜಿನಿಯರಿಂಗ್​ ಸೆಂಟರ್​ (ಜಿಎಸ್​ಇಸಿ) ಸ್ಥಾಪನೆಗೆ ಮುಂದಾಗಿದೆ. ಇದಕ್ಕಾಗಿ ಹೈದರಾಬಾದ್​ ನಗರವನ್ನು ಆಯ್ಕೆ ಮಾಡಿದೆ. ಏಷ್ಯಾ ಫೆಸಿಫಿಕ್​ ಪ್ರದೇಶದಲ್ಲಿ ಟೋಕಿಯೋ ಬಳಿಕ ಸ್ಥಾಪನೆ ಆಗುತ್ತಿರುವ ಮತ್ತು ಜಾಗತಿಕವಾಗಿ ಐದನೇ ಕೇಂದ್ರ ಇದಾಗಿದೆ. ಇದು ವೇಗವಾಗಿ

ಬೆಳೆಯುತ್ತಿರುವ ಟೆಕ್​ ಉದ್ಯಮದಲ್ಲಿ ಪ್ರಮುಖವಾದ ಬೆಳವಣಿಗೆಯಾಗಿದೆ.
ಗೂಗಲ್​ನ ಮುಖ್ಯ ಮಾಹಿತಿ ಅಧಿಕಾರಿ ರಾಯಲ್​ ಹನ್ಸೆನ್​ ನೇತೃತ್ವದ ನಿಯೋಗ ಈ ಘೋಷಣೆ ಮಾಡಿದೆ.

ಬುಧವಾರ ಜೂಬ್ಲಿಹಿಲ್ಸ್​​ನ ಸಿಎಂ ನಿವಾಸದಲ್ಲಿ ಮುಖ್ಯಮಂತ್ರಿ ರೇವಂತ್​ ರೆಡ್ಡಿ ಮತ್ತು ಐಟಿ ಮತ್ತು ಕೈಗಾರಿಕಾ ಸಚಿವ ಶ್ರೀಧರ್​ ಬಾಬು ಭೇಟಿಯಾದ ನಿಯೋಗ, ಈ ಉಪಕ್ರಮ ಸ್ಥಾಪನೆ ಸಂಬಂಧದ ಪ್ರಮುಖ ಒಪ್ಪಂದಕ್ಕೆ ತೆಲಂಗಾಣ ರಾಜ್ಯ ಸರ್ಕಾರದೊಂದಿಗೆ ಸಹಿ ಹಾಕಿದೆ.

ಜಾಗತಿಕ ಐಟಿ ಮತ್ತು ಇಂಜಿನಿಯರಿಂಗ್​ ಹಬ್​ ಮತ್ತು ಡಿಜಿಟಲ್ ಕೌಶಲ್ಯ ಅಭಿವೃದ್ಧಿಯಲ್ಲಿ ತೆಲಂಗಾಣದ ನಾಯಕತ್ವ ಕುರಿತು ರಾಯಲ್​ ಹನ್ಸೆನ್​ ಪ್ರಶಂಸೆ ವ್ಯಕ್ತಪಡಿಸಿದರು. ಅಂತಾರಾಷ್ಟ್ರೀಯ ಸೈಬರ್​ ಭದ್ರತಾ ಸವಾಲಿನ್ನು ಜಿಎಸ್​ಇಸಿ ಸಮರ್ಥವಾಗಿ ನಿರ್ವಹಿಸುತ್ತದೆ. ಇದು ನೇರ ಮತ್ತು ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿಸುತ್ತದೆ.

ಜಿಎಸ್​ಇಸಿಯನ್ನು ಹೈದರಾಬಾದ್​ನಲ್ಲಿ ಸ್ಥಾಪಿಸುವುದು ಸೈಬರ್​ ಸೆಕ್ಯೂರಿಟಿ ಜಾಗತಿಕ ನಾಯಕತ್ವದ ಭಾರತದ ನಡೆಯಲು ಗಮನಾರ್ಹ ಮೈಲಿಗಲ್ಲಾಗಲಿದೆ.

ಜಿಎಸ್​ಇಸಿ ಹೈದರಾಬಾದ್​ ವಿಶಿಷ್ಟ ರೀತಿಯಲ್ಲಿ ಅಂತಾರಾಷ್ಟ್ರೀಯ ಸೈಬರ್​ ಸೆಕ್ಯೂರಿಟಿ ಹಬ್​ ಆಗಿ ಕಾರ್ಯ ನಿರ್ವಹಿಸಲಿದೆ. ಇದು ಭದ್ರತಾ ಅಭಿವೃದ್ಧಿ ಮತ್ತು ಆನ್​ಲೈನ್​ ಸುರಕ್ಷತಾ ಉತ್ಪನ್ನಗಳ ಕುರಿತು ನೈಪುಣ್ಯತೆ ಹೊಂದಲಿದೆ. ಅಕ್ಟೋಬರ್​ 3 ರಂದು ನಡೆದ ‘ಗೂಗಲ್​ ಫಾರ್​ ಇಂಡಿಯಾ 2024’ ಸಮಾವೇಶದಲ್ಲಿ ಕಂಪನಿ ಮೊದಲ ಬಾರಿಗೆ ತನ್ನ ಈ ಯೋಜನೆ ಘೋಷಿಸಿತು. ಅಂದಿನಿಂದ ಅನೇಕ ರಾಜ್ಯಗಳು ಕಂಪನಿಗೆ ಆಹ್ವಾನ ನೀಡಲು ಮುಂದಾಗಿದ್ದವು.

ಅಂತಿಮವಾಗಿ ತೆಲಂಗಾಣ ಸರ್ಕಾರದ ನಿರಂತರ ಪ್ರಯತ್ನದ ಫಲಿತಾಂಶ ರಾಜ್ಯ ಯಶಸ್ವಿಯಾಗಿ, ಈ ಯೋಜನೆ ಸ್ಥಾಪನೆ ಅವಕಾಶ ಪಡೆದಿದೆ. ಈ ಯೋಜನೆಯನ್ನು ಹೈದರಾಬಾದ್​ಗೆ ಪಡೆಯುವಲ್ಲಿ ಸಿಎಂ ಕೂಡ ಪ್ರಮುಖ ಪಾತ್ರಹೊಂದಿದ್ದು, ತಮ್ಮ ಅಮೆರಿಕ ಪ್ರವಾಸದಲ್ಲಿ ಅವರು ಗೂಗಲ್​ ಪ್ರಮುಖ ಕಚೇರಿಗೆ ಭೇಟಿ ಮಾಡಿ, ಮಾತುಕತೆ ನಡೆಸಿದ್ದರು.

ಈ ಕುರಿತು ಮಾತನಾಡಿರುವ ಸಿಎಂ ರೇವಂತ್​ ರೆಡ್ಡಿ, ಇದು ತೆಲಂಗಾಣಕ್ಕೆ ಹೆಮ್ಮೆಯ ಸಮಯವಾಗಿದೆ. ಜಿಎಸ್​ಇಸಿ ಹೈದರಾಬಾದ್ ಅನ್ನು ಜಾಗತಿಕ ಐಟಿ ಕೇಂದ್ರವಾಗಿ ಇರಿಸುತ್ತದೆ. ತೆಲಂಗಾಣವನ್ನು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ನಮ್ಮ ಗುರಿಗೆ ಇದು ಗಣನೀಯ ಕೊಡುಗೆ ನೀಡುತ್ತದೆ ಎಂದರು.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...