spot_img
spot_img

AI Chess : ‘ಎಐ ಚೆಸ್​​ ಗೇಮಿಂಗ್’ ಪ್ರಾರಂಭಿಸಿದ ಗೂಗಲ್​

spot_img
spot_img

Share post:

ಗೂಗಲ್​ ಹೊಸ ಎಐ ಫೀಚರ್​ ಪರಿಚಯಿಸಿದ್ದು, ಇದು ಚೆಸ್ ಆಟಗಾರರ ಅನುಭವವನ್ನು ಅದ್ಭುತಗೊಳಿಸಲಿದೆ. ಜಾಗತಿಕ ಟೆಕ್ ದೈತ್ಯ ಗೂಗಲ್​ ಆನ್‌ಲೈನ್ ಚೆಸ್ ಪ್ಲಾಟ್‌ಫಾರ್ಮ್ ಪ್ರಾರಂಭಿಸಿದೆ.

ಇದಕ್ಕೆ ‘ಜೆನ್‌ಚೆಸ್’​ ಎಂದು ಹೆಸರಿಟ್ಟಿದೆ. ಇಲ್ಲಿ ಆಟಗಾರರು ತಮ್ಮ ಚೆಸ್​ ಕಾಯಿನ್ಸ್​ ಅನ್ನು ಎಐ(ಕೃತಕ ಬುದ್ಧಿಮತ್ತೆ) ಸಹಾಯದಿಂದ ಕಸ್ಟಮೈಸ್ ಮಾಡಬಹುದು. ಕಸ್ಟಮ್ ಮಾಡಿದ ಚೆಸ್​ ಕಾಯಿನ್ಸ್​ ಅನ್ನು ಕ್ರಿಯೆಟ್ ಮಾಡಲು ಗೂಗಲ್​ನ ಜೆಮಿನಿ ಇಮೇಜನ್ 3 ಮಾಡೆಲ್​ ಬಳಸಿಕೊಳ್ಳುತ್ತದೆ.

ಉದಾಹರಣೆಗೆ, ನಿಮ್ಮ ವೈಟ್​ ಚೆಸ್​ ಕಾಯಿನ್ಸ್​ಗೆ ನೀವು ಸೈನ್ಟಿಫಿಕ್​ ಥೀಮ್ ಆಯ್ಕೆ ಮಾಡಿದರೆ, ಎಐ ಬ್ಲ್ಯಾಕ್​ ಚೆಸ್​ ಕಾಯಿನ್ಸ್​ಗೆ ಸಂಬಂಧಿಸಿದ ವಿಭಿನ್ನ ಥೀಮ್ ಕ್ರಿಯೆಟ್​ ಮಾಡುತ್ತದೆ.

GenChessನೊಂದಿಗೆ ಸಂಭಾವ್ಯ ಸಂಯೋಜನೆಗಳು ವಾಸ್ತವಿಕವಾಗಿ ಅಪರಿಮಿತ. ಇದು ಹೆಚ್ಚು ತೊಡಗಿಸಿಕೊಳ್ಳುವ ಮತ್ತು ದೃಷ್ಟಿಗೆ ಉತ್ತೇಜಕ ಚೆಸ್ ಅನುಭವ ನೀಡುತ್ತದೆ ಎಂದು ಗೂಗಲ್​ ಹೇಳಿದೆ.

GenChess ಕ್ಲಾಸಿಕ್ ಮತ್ತು ಕ್ರಿಯೆಟಿವ್ ಎಂಬ ಎರಡು ಶೈಲಿಗಳನ್ನು ಹೊಂದಿದೆ. ಕ್ಲಾಸಿಕ್ ಶೈಲಿಯು ಸಾಂಪ್ರದಾಯಿಕ ಚೆಸ್ ಸೆಟ್ ಹೋಲುತ್ತದೆ. ಆದರೆ ಕ್ರಿಯೆಟಿವ್​ ಶೈಲಿ ಹೆಚ್ಚು ಅದ್ಭುತವಾಗಿದೆ. ಇಲ್ಲಿ ಎಐ ಸಂಪೂರ್ಣ ಸೆಟ್ ಕ್ರಿಯೆಟ್​ ಮಾಡುತ್ತದೆ. ಆಟಗಾರರು ಇದರಿಂದ ತೃಪ್ತರಾಗದಿದ್ದರೆ ಪ್ರತ್ಯೇಕವಾಗಿ ಚೆಸ್​ ಕಾಯಿನ್ಸ್ ಎಡಿಟ್​ ಮಾಡಬಹುದು.

GenChess ಆಡಲು https://labs.google/genchessಗೆ ಭೇಟಿ ನೀಡಿ. ಅಲ್ಲಿ ನಿಮ್ಮ ಜಿಮೇಲ್​ ಖಾತೆಯೊಂದಿಗೆ ಸೈನ್ ಇನ್ ಆಗಿ. ಜನರೇಟ್ ಎಂಬ ಬಟನ್ ಮೇಲೆ ಕ್ಲಿಕ್​ ಮಾಡಿ. ಈಗ ಚೆಸ್ ಸೆಟ್‌ಗಾಗಿ ನಿಮ್ಮ ಆದ್ಯತೆಯ ಥೀಮ್ ಅನ್ನು ನಮೂದಿಸಿ.

ಇಲ್ಲಿ ಕೆಲವೊಂದು ನಿಯಮಗಳಿವೆ. ಅದರ ಪ್ರಕಾರ ನೀವು ಮುಂದುವರಿಯಬೇಕು. ಅಲ್ಲದೆ, ಇದು ಪ್ರಸ್ತುತ ಸೀಮಿತ ಪ್ರದೇಶಗಳಲ್ಲಿ ಮಾತ್ರ ಲಭ್ಯ.

GenChess ಜೊತೆಯಲ್ಲಿ ಜೆಮಿನಿಯೊಳಗೆ ಚೆಸ್ ಬೋಟ್‌ನ ಸನ್ನಿಹಿತ ಪರಿಚಯವನ್ನು ಗೂಗಲ್ ಘೋಷಿಸಿದೆ. ಈ ವೈಶಿಷ್ಟ್ಯವು ಆಟಗಾರರು ತಮ್ಮ ಮೂವ್​ಗಳನ್ನು ಟೈಪ್ ಮಾಡುವ ಮೂಲಕ ಆಡಲು ಅವಕಾಶ ನೀಡುತ್ತದೆ. ಆಟವು ಮುಂದುವರೆದಂತೆ ಜೆಮಿನಿ ಅಪ್​ಡೇಟ್ಡ್​ ಚೆಸ್ ಬೋರ್ಡ್ ಅನ್ನು ತೋರಿಸುತ್ತದೆ. ಆದರೂ ಈ ಹೊಸ ವೈಶಿಷ್ಟ್ಯವು ಡಿಸೆಂಬರ್‌ನಿಂದ ಪ್ರಾರಂಭವಾಗುವ ಜೆಮಿನಿ ಸುಧಾರಿತ ಚಂದಾದಾರರಿಗೆ ಮಾತ್ರ ಲಭ್ಯವಿರುತ್ತದೆ ಎಂಬುದನ್ನು ಗಮನಿಸಿ.

GenChess 2024ರ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ ಅನ್ನು ಹೋಲುತ್ತದೆ. ಈ ಚಾಂಪಿಯನ್​ಶಿಪ್‌​ನಲ್ಲಿ ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಮತ್ತು ಭಾರತದ ಗುಕೇಶ್ ದೊಮ್ಮರಾಜು ಸೆಣಸಾಟ ನಡೆಸುತ್ತಿದ್ದಾರೆ.

ಈವೆಂಟ್‌ನ ಮುಖ್ಯ ಪ್ರಾಯೋಜಕರಾಗಿರುವ ಗೂಗಲ್​ ಹಲವಾರು ಹೊಸ ಚೆಸ್ ಉತ್ಪನ್ನಗಳು ಮತ್ತು ಉಪಕ್ರಮಗಳನ್ನು ಘೋಷಿಸಲು ಈ ಅವಕಾಶವನ್ನು ಪಡೆದುಕೊಂಡಿದೆ.

ಡೇಟಾ ಸೈನ್ಸ್​ ಮತ್ತು ಮಷಿನ್​ ಲರ್ನಿಂಗ್​ ಇಂಜಿನಿಯರ್‌ಗಳಿಗಾಗಿ ಗೂಗಲ್​-ಮಾಲೀಕತ್ವದ ವೇದಿಕೆಯಾದ Kaggleನಲ್ಲಿ ಕೋಡಿಂಗ್ ಸವಾಲಿಗೆ ಇಂಟರ್ನ್ಯಾಷನಲ್ ಚೆಸ್ ಫೆಡರೇಶನ್ (FIDE) ನೊಂದಿಗೆ ಸಹಭಾಗಿತ್ವವನ್ನು ಒಳಗೊಂಡಿದೆ.

ಉದಾಹರಣೆಗೆ, ರಾಜ, ರಾಣಿ ಅಥವಾ ಸೈನಿಕನಂತಹ ನಿರ್ದಿಷ್ಟ ಕಾಯಿನ್‌​ಗಳ ನೋಟವನ್ನು ಪರಿಷ್ಕರಿಸಲು GenChess ಹೆಚ್ಚುವರಿ ಟೆಕ್ಸ್ಟ್​ ಪ್ರಾಂಪ್ಟ್‌ಗಳನ್ನು ಒದಗಿಸುತ್ತದೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...