ಬೆಳಗಾವಿ: ಕರ್ನಾಟಕ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ನೀಡುತ್ತಿರುವ ಮಾಸಿಕ 2 ಸಾವಿರ ಸಹಾಯ ಧನದಿಂದ ಬೆಳಗಾವಿಯ ಮಹಿಳೆಯೊಬ್ಬರು ಚಿಕ್ಕ ಗ್ರಂಥಾಲಯವನ್ನು ನಿರ್ಮಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ಅಭ್ಯರ್ಥಿಗಳಿಗೆ ಕಣ್ಮನಿಯಾಗಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಕೂಡಿಟ್ಟು ಮಹಿಳೆಯರು ತಮಗೆ ಬೇಕಾದ ವಸ್ತು ಖರೀದಿ, ಮನೆ ಖರ್ಚು, ಮೊಬೈಲ್, ಬಂಗಾರ ಖರೀದಿ, ಮಕ್ಕಳಿಗೆ ವಾಹನ ಖರೀದಿ ಮಾಡಿ ಕೊಟ್ಟಿದ್ದರು. ದಸರಾ ಹಬ್ಬದ ದಿನ ಈ ಗ್ರಂಥಾಲಯವನ್ನು ಉದ್ಘಾಟಿಸಿ ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿಕೊಂಡು ರಾಯಬಾಗ ತಾಲೂಕಿನ ಮಂಟೂರು ಗ್ರಾಮದ ಮಲ್ಲವ್ವ ಮೇಟಿ ಎಂಬ ಮಹಿಳೆ ಮಾಸಿಕ ಸಹಾಯಧನ ಕೂಡಿಟ್ಟುಕೊಂಡು ಗ್ರಾಮದಲ್ಲಿ ಚಿಕ್ಕದೊಂದು ಗ್ರಂಥಾಲಯವನ್ನು ತೆರೆದಿದ್ದಾರೆ.
” ನನಗೆ ಬಂದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಗ್ರಾಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ನಿರ್ಮಿಸಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಲು ಸ್ಪರ್ಧಾರ್ಥಿಗಳಿಗೆ ಮನವಿ ” ಎಂದು ಟ್ವಿಟ್ ಮಾಡಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಿಂದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಸಹಾಯಧನ ನೀಡಲಾಗುತ್ತಿದೆ. ಈವರೆಗೂ 12 ತಿಂಗಳ ಹಣ ಅಂದರೆ ಫಲಾನುಭವಿ ಮಹಿಳೆಯರಿಗೆ ತಲಾ 24 ಸಹಾಯ ಧನ ಸಿಕ್ಕಂತಾಗಿದೆ. ರಾಜ್ಯದಲ್ಲಿ 1.1 ಕೋಟಿಗೂ ಅಧಿಕ ಮಹಿಳೆಯರು ಮಾಸಿಕ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಕೌಜಲಗಿ ಗ್ರಾಮದ ಬಾಗವ್ವಾ ನೀಲಪ್ಪ ಸಣ್ಣಕ್ಕಿ ಎಂಬ ಮಹಿಳೆ ತನ್ನ ಮಗನಿಗೆ ಬೈಕ್ ಕೊಡಿಸಿದ್ದಳು. ಕಳೆದ ಶುಕ್ರವಾರ ಆಯುಧ ಪೂಜೆ ದಿನದಂದು ಶೋ ರೂಮಿನಿಂದ ಬೈಕ್ ಖರೀದಿಸಿ, ಪೂಜೆ ಮಾಡಿ ಸಂಭ್ರಮಿಸಿದ್ದರು. ಗೃಹಲಕ್ಷ್ಮಿ ಹಣದಲ್ಲಿ ದೇವಿಗೆ ಬೆಳ್ಳಿ ಕಿರೀಟ ಅರ್ಪಿಸಿದ ಆಲಮೇಲ ವಿಜಯಪುರ ತಾಲೂಕಿನ ಹೂವಿನಹಳ್ಳಿ ಗ್ರಾಮದ ಭಾಗಮ್ಮ ಗುರುಶಾಂತಗೌಡ ಬಿರಾದಾರ ದಂಪತಿಯನ್ನು ಇತ್ತೀಚೆಗೆ ಶಾಸಕ ಅಶೋಕ ಮನಗೂಳಿ ಗೌರವಿಸಿದ್ದರು. ಖಾತೆಗೆ ಜಮೆಯಾದ ಕಳೆದ 12 ತಿಂಗಳ ಹಣವನ್ನು ಕೂಡಿಟ್ಟು ನವರಾತ್ರಿ ನಿಮಿತ್ತ ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ದೇವಿ ಮೂರ್ತಿಗೆ 250 ಗ್ರಾಂ (25 ತೊಲ) ಬೆಳ್ಳಿ ಕಿರೀಟ ಮಾಡಿಸಿ ಮಾದರಿದ್ದರು. ಈ ವಿಷಯ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಅಶೊಕ ಮನಗೂಳಿ ಭಾಗಮ್ಮ ದಂಪತಿಯನ್ನು ಗೌರವಿಸಿದ್ದರು.