spot_img
spot_img

GST ON USED EV CAR SALE BY BUSINESS : ಬಳಸಿದ ಎಲೆಕ್ಟ್ರಾನಿಕ್ ವಾಹನಗಳ(EV) ಮಾರಾಟದ ಮೇಲೆ ಶೇ.18ರಷ್ಟು ಜಿಎಸ್ಟಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Jaisalmer (Rajasthan) News:

ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಶನಿವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ, ಬಳಸಿದ ಎಲೆಕ್ಟ್ರಾನಿಕ್‌ ವಾಹನಗಳ ಮಾರಾಟದ ಮೇಲೆ ಶೇ.18ರಷ್ಟು ಜಿಎಸ್‌ಟಿ ವಿಧಿಸಲು ನಿರ್ಧಾರ ಕೈಗೊಳ್ಳಲಾಗಿದೆ.ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ 55ನೇ ಜಿಎಸ್‌ಟಿ ಕೌನ್ಸಿಲ್‌ ಸಭೆ ನಡೆಯಿತು. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಬಳಸಿದ ವಿದ್ಯುತ್‌ಚಾಲಿತ ವಾಹನಗಳ (Used Electric Vehicles) ಮಾರಾಟದ ಮೇಲೆ ಶೇ.18ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲು ಶನಿವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇದೇ ವೇಳೆ, ವಿಮಾನ ಇಂಧನ (ATF) ಅನ್ನು ‘ಒಂದು ದೇಶ ಒಂದು ತೆರಿಗೆ’ ವ್ಯವಸ್ಥೆಯಿಂದ ಹೊರಗಿಡಲು ನಿರ್ಧರಿಸಲಾಯಿತು.

Popcorn price hike:

ಇನ್ಸೂರೆಲ್ಸ್‌ ಪ್ರೀಮಿಯಮ್ ಮೇಲಿನ ತೆರಿಗೆ ಕಡಿತಗೊಳಿಸುವ ನಿರ್ಧಾರವನ್ನು ಮುಂದೂಡಲಾಗಿದೆ. ಈ ಕುರಿತು ಈ ವಲಯದ ನಿಯಂತ್ರಕರಿಂದ ಪ್ರತಿಕ್ರಿಯೆ ಪಡೆದು ಮುಂದುವರೆಯಲು ನಿರ್ಧರಿಸಲಾಗಿದೆ. ಈ ವಿಚಾರವನ್ನು ಪರಿಶೀಲಿಸಿದ್ದ ಸಚಿವರ ತಂಡ, ಟರ್ಮ್ ಲೈಫ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಪಾವತಿಸುವ ವಿಮಾ ಕಂತುಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲು ಮತ್ತು ಹಿರಿಯ ನಾಗರಿಕರು ಆರೋಗ್ಯ ವಿಮಾ ರಕ್ಷಣೆಗೆ ಪಾವತಿಸುವ ಪ್ರೀಮಿಯಂಗೆ ವಿನಾಯಿತಿ ನೀಡಲು ಶಿಫಾರಸು ಮಾಡಿತ್ತು.

5 ಲಕ್ಷ ರೂ.ವರೆಗಿನ ಆರೋಗ್ಯ ವಿಮೆಗೆ ಹಿರಿಯ ನಾಗರಿಕರನ್ನು ಹೊರತುಪಡಿಸಿ ಇತರ ವ್ಯಕ್ತಿಗಳು ಪಾವತಿಸುವ ಪ್ರೀಮಿಯಂಗೆ ಜಿಎಸ್‌ಟಿ ವಿನಾಯಿತಿ ಮಾಡುವಂತೆ ಸಲಹೆ ನೀಡಿತ್ತು.ಕೆರಮಲೈಸ್ಡ್‌ (ಸಿಹಿಯಾದ) ಪಾಪ್‌ಕಾರ್ನ್‌ಗೆ ಶೇ.18ರಷ್ಟು ಜಿಎಸ್‌ಟಿ ಮುಂದುವರೆಯಲಿದೆ ಎಂದು ಜಿಎಸ್‌ಟಿ ಸಭೆ ಸ್ಪಷ್ಟಪಡಿಸಿತು. ಆದರೆ, ಪ್ಯಾಕಿಂಗ್ ಮಾಡದ ಮತ್ತು ಸ್ವೈಸ್ಡ್‌(ಉಪ್ಪು ಮತ್ತು ಮಸಾಲೆ ಪದಾರ್ಥಗಳನ್ನು ಸೇರಿಸಿರುವ) ಪಾಪ್‌ಕಾರ್ನ್‌ಗೆ ಶೇ.12ರಷ್ಟು ಜಿಎಸ್‌ಟಿ ಇರಲಿದೆ.

ಅದೇ ರೀತಿ, ಪ್ಯಾಕಿಂಗ್ ಮಾಡದ ಮತ್ತು ಲೇಬಲ್‌ ಮಾಡದ ಪಾಪ್‌ಕಾರ್ನ್‌ಗಳ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸಲು ತೀರ್ಮಾನಿಸಲಾಗಿದೆ.ಅದರಂತೆ, ಆ್ಯಪ್ ಆಧರಿತ ಫುಡ್‌ ಡೆಲಿವರಿ ವೇದಿಕೆಗಳ ಮೇಲೂ ತೆರಿಗೆ ವಿಧಿಸುವ ಪ್ರಸ್ತಾವವನ್ನು ಸಭೆ ಮುಂದೂಡಿತು. ಸಾರ್ವಜನಿಕರಿಗೆ ಹಂಚುವ ಸಾರವರ್ಧಿತ ಅಕ್ಕಿ ಮೇಲಿನ ತೆರಿಗೆಯನ್ನು ಶೇ.18ರಿಂದ ಶೇ 5ಕ್ಕೆ ಕಡಿತಗೊಳಿಸಲಾಗಿದೆ. ಸಾಲದ ನಿಯಮಗಳನ್ನು ಪಾಲಿಸದ ಗ್ರಾಹಕರಿಂದ ಬ್ಯಾಂಕುಗಳು ಮತ್ತು ಬ್ಯಾಂಕೇತರ ಸಂಸ್ಥೆಗಳು ವಿಧಿಸಿ, ಸಂಗ್ರಹಿಸುವ ದಂಡದ ಮೊತ್ತಕ್ಕೆ ಜಿಎಸ್‌ಟಿ ವಿಧಿಸದೇ ಇರಲು ನಿರ್ಧರಿಸಲಾಗಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

JAYADEVA HOSPITAL – ನೂತನ ಜಯದೇವ ಆಸ್ಪತ್ರೆ ಸಿಎಂ ಸಿದ್ದರಾಮಯ್ಯ ಉದ್ಘಾಟನೆ

Kalaburagi News: ಹೃದ್ರೋಗ ಆಸ್ಪತ್ರೆಯನ್ನು ಉದ್ಘಾಟಿಸುವ ಮುನ್ನ ಸಿದ್ದರಾಮಯ್ಯ, ಆಸ್ಪತ್ರೆಯ ನೀಲಿ ನಕಾಶೆಯನ್ನು ವೀಕ್ಷಿಸಿದರು. ಆಸ್ಪತ್ರೆಯನ್ನು ವಿಕ್ಷೀಸಿದ ಸಿದ್ದರಾಮಯ್ಯ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆಯವರೊಂದಿಗೆ...

Puri Jagannath Temple : ಹೊಸ ವರ್ಷದಿಂದ ಪುರಿ ಜಗನ್ನಾಥ ದೇಗುಲದಲ್ಲಿ ‘ನೂತನ ದರ್ಶನ ವ್ಯವಸ್ಥೆ’

Bhubaneswar News: ಪುರಿ ಜಗನ್ನಾಥನ ದರ್ಶನಕ್ಕಾಗಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ಇನ್ನು ಮುಂದೆ ಉತ್ತಮ ಸೌಲಭ್ಯದಿಂದ ಕೂಡಿದ ಹೊಸ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಒಡಿಶಾ...

NAMMA METRO – ನಮ್ಮ ಮೆಟ್ರೋ ಹಳದಿ ಮಾರ್ಗಕ್ಕಾಗಿ ಜ. 15ರ ವೇಳೆಗೆ ಎರಡನೇ ರೈಲಿನ ಆಗಮನ

Bangalore Metro News: ಟಿಆರ್​ಎಸ್​ಎಸ್​ಎಲ್​ ಕಂಪನಿ ತನ್ನ ಮೊದಲ ರೈಲನ್ನ ಹಳದಿ ಮಾರ್ಗಕ್ಕೆ ಕಳುಹಿಸಿದೆ. ಇದು ಹೆಬ್ಬಗೋಡಿ ಮೆಟ್ರೋ ಡಿಪೋವನ್ನ ಜನವರಿ 15 ರ ವೇಳೆಗೆ...

COLD WEATHER – ಚಾಮುಂಡಿಬೆಟ್ಟದ ಮಂಜಿನಲೋಕದಲ್ಲಿ ಮಿಂದೇಳಲು ಇದು ಸಕಾಲ

Mysore News: ವಾಸಿಗರು ಇಲ್ಲಿಗೆ ಬರುವುದು ಸೂರ್ಯ ಉದಯಿಸಿದ ಬಳಿಕ. ಹೀಗಾಗಿ ಅವರಿಗೆ ಚಾಮುಂಡಿ ಬೆಟ್ಟದ ಈ ಸೊಬಗಿನ ಪರಿಚಯವಿಲ್ಲ. ಸ್ವತಃ ಮೈಸೂರಿನ ಅನೇಕರಿಗೇ ಇದರ...