spot_img
spot_img

ಮಾರ್ಗದರ್ಶಿ ಚಿಟ್​ಫಂಡ್ ಹೊಸ​ ಶಾಖೆಗಳು ಆರಂಭ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಹೈದರಾಬಾದ್​: ಮಾರ್ಗದರ್ಶಿ ಚಿಟ್​​ಫಂಡ್​ ಪ್ರೈವೇಟ್​ ಲಿಮಿಟೆಡ್​​ ತನ್ನ ಹೊಸ ಶಾಖೆಗಳನ್ನು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಬುಧವಾರದಿಂದ ಆರಂಭಿಸಲಿದೆ. ರಾಮೋಜಿ ಸಮೂಹ ಸಂಸ್ಥೆಗಳ ಕಂಪನಿಗಳಲ್ಲಿ ಒಂದಾದ ಮಾರ್ಗದರ್ಶಿ ಚಿಟ್​​ಫಂಡ್​ ಪ್ರೈವೇಟ್​ ಲಿಮಿಟೆಡ್​​ ತನ್ನ ಮತ್ತೆರಡು ಶಾಖೆಗಳನ್ನು ಕರ್ನಾಟಕ, ತಮಿಳುನಾಡಿನಲ್ಲಿ ಕಾರ್ಯಾರಂಭಿಸಲಿದೆ.

119ನೇ ಶಾಖೆ ಕರ್ನಾಟಕದ ಬೆಂಗಳೂರಿನ ಕೆಂಗೇರಿ, 120ನೇ ಶಾಖೆ ತಮಿಳುನಾಡಿನ ಹೊಸೂರಿನಲ್ಲಿ ಇಂದು (ಡಿಸೆಂಬರ್​ 11) ಉದ್ಘಾಟನೆಯಾಗಲಿವೆ.

ಅತ್ಯಂತ ವಿಶ್ವಾಸಾರ್ಹ ಮತ್ತು ಗ್ರಾಹಕರ ಸ್ನೇಹಿಯಾಗಿರುವ ಮಾರ್ಗದರ್ಶಿ ಚಿಟ್​​ಫಂಡ್ ಸಂಸ್ಥೆಯು ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ತನ್ನ ಜಾಲ ಹೊಂದಿದೆ. ತನ್ನ ಹೂಡಿಕೆದಾರರು, ಗ್ರಾಹಕರ ಸಬಲೀಕರಣಕ್ಕೆ ಸಂಸ್ಥೆಯು ಕಠಿಬದ್ಧವಾಗಿದೆ.

“ಸಂಸ್ಥೆಯು 1962ರಲ್ಲಿ ಪ್ರಾರಂಭವಾದಾಗಿನಿಂದಲೂ ನಂಬಿಕೆ ಮತ್ತು ವಿಶ್ವಾಸಾರ್ಹತೆ ಕಾಪಾಡಿಕೊಂಡು ಬಂದಿದೆ. 60 ಲಕ್ಷ ಗ್ರಾಹಕರಿಗೆ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ. 9,396 ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿದೆ. ಕಂಪನಿಯು ಮೌಲ್ಯಗಳ ಆಧಾರದ ಮೇಲೆ, ಆರ್ಥಿಕ ಶಿಸ್ತು ಮತ್ತು ಪಾರದರ್ಶಕತೆ, ಗ್ರಾಹಕರ ಹಣಕ್ಕೆ ಭದ್ರತೆ ನೀಡುತ್ತದೆ” ಎಂದು ಶೈಲಜಾ ಸ್ಪಷ್ಟಪಡಿಸಿದರು.

“ಆರು ದಶಕಗಳಿಗೂ ಹೆಚ್ಚು ಕಾಲ, ಮಾರ್ಗದರ್ಶಿಯು ಸಾವಿರಾರು ಕುಟುಂಬಗಳ ಆರ್ಥಿಕ ವ್ಯವಹಾರಕ್ಕೆ ಧನಸಹಾಯ, ಶಿಕ್ಷಣ, ವಿವಾಹ, ಮನೆ ಖರೀದಿ, ಉದ್ಯಮ ಆರಂಭಕ್ಕೆ ಬೆಂಗಾವಲಾಗಿ ನಿಂತಿದೆ. ಕೆಂಗೇರಿ ಮತ್ತು ಹೊಸೂರಿನಲ್ಲಿ ಆರಂಭವಾಗಲಿರುವ ಹೊಸ ಶಾಖೆಗಳು ಈ ಭಾಗದ ಜನರ ಜೀವನವನ್ನು ಸಶಕ್ತಗೊಳಿಸುವ ಪಯಣದಲ್ಲಿ ಮತ್ತೊಂದು ಹೆಜ್ಜೆಯಾಗಲಿದೆ” ಎಂದು ಹೇಳಿದ್ದಾರೆ.

ಮಾರ್ಗದರ್ಶಿ ಚಿಟ್‌ಫಂಡ್‌ ಸಂಸ್ಥೆಯಲ್ಲಿ 4,100 ಮಂದಿ ಉದ್ಯೋಗಿಗಳಿದ್ದು, 18 ಸಾವಿರ ಏಜೆಂಟ್​ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಸಂಸ್ಥೆ ಅನೇಕರಿಗೆ ಜೀವನೋಪಾಯದ ಮೂಲಾಧಾರವಾಗಿದೆ.

ಬದುಕಿನ ಪ್ರಮುಖ ಘಟನಾವಳಿಗಳ ಸಂದರ್ಭಗಳಲ್ಲಿ ಕುಟುಂಬಗಳಿಗೆ ಸಹಾಯ ಮಾಡುವುದರಿಂದ ಹಿಡಿದು, ಕಾರ್ಯನಿರತ ಬಂಡವಾಳದೊಂದಿಗೆ ಉದ್ಯಮಿಗಳಿಗೆ ಬೆಂಬಲ ನೀಡುವವರೆಗೆ ಮಾರ್ಗದರ್ಶಿ ಸಂಸ್ಥೆಯು ತನ್ನ ಚಂದಾದಾರರ ಅಗತ್ಯಗಳಿಗೆ ಅನುಗುಣವಾಗಿ ಆರ್ಥಿಕ ಪರಿಹಾರಗಳನ್ನು ನಿರಂತರವಾಗಿ ತಲುಪಿಸಿದೆ. ಹೊಸೂರು ಮತ್ತು ಕೆಂಗೇರಿ ಶಾಖೆಗಳು ಈ ಶ್ರೇಷ್ಠ ಸಂಪ್ರದಾಯವನ್ನು ಮುಂದುವರಿಸಲಿವೆ. ಚಂದಾದಾರರಿಗೆ ಅವರ ಆರ್ಥಿಕ ಗುರಿ, ಆಕಾಂಕ್ಷೆಗಳನ್ನು ಸಾಧಿಸಲು ಸಂಸ್ಥೆ ನೆರವಾಗುತ್ತದೆ.

ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹೊಸ ಶಾಖೆಗಳನ್ನು ಪ್ರಾರಂಭಿಸುವ ಕುರಿತು ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾರ್ಗದರ್ಶಿ ಚಿಟ್ ಫಂಡ್‌ನ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್, “ಸಂಸ್ಥೆಯು ಮತ್ತೆರಡು ಶಾಖೆಗಳನ್ನು ವಿಸ್ತರಿಸುತ್ತಿರುವುದು ಮಹತ್ವದ ಹೆಜ್ಜೆಯಾಗಿದೆ.

ನಮ್ಮ ಗ್ರಾಹಕರ ಗುರಿಗಳನ್ನು ಸಾಕಾರ ಮಾಡಲು ಮಾರ್ಗದರ್ಶಿಯು ಬದ್ಧವಾಗಿದೆ. ಗ್ರಾಹಕರು ನಿರೀಕ್ಷಿಸಿದ ಮಟ್ಟದಲ್ಲಿ ಸೇವೆಯನ್ನು ಮುಂದುವರಿಸಲು ನಾವು ಉತ್ಸುಕರಾಗಿದ್ದೇವೆ” ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RAVI BASRUR : ‘ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ನಿಮ್ಮ ಹೆಸರೇಳಿ ಬದುಕೊಳ್ತಾರೆ’

Bagalkote News: ಸಿದ್ದನಕೊಳ್ಳ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಸಿದ್ದಶ್ರೀ ರಾಷ್ಟ್ರೀಯ ಉತ್ಸವ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭ ಜರುಗಿತು. ಜ್ಯೋತಿ ಬೆಳಗಿಸುವ ಮೂಲಕ ಶಾಸಕ...

BUS FIRE INCIDENT : ಹೊತ್ತಿ ಉರಿದ ಬಸ್, ತೆಲಂಗಾಣದ ಓರ್ವ ಸಾವು

Mathura (Uttar Pradesh) News: ಉತ್ತರಪ್ರದೇಶದ ಮಥುರಾದಲ್ಲಿ ತೆಲಂಗಾಣದ 50ಕ್ಕೂ ಹೆಚ್ಚು ಜನರಿದ್ದ BUS​ವೊಂದು ಬೆಂಕಿಗಾಹುತಿಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.ತೆಲಂಗಾಣದ ಜನರಿಂದ ತುಂಬಿದ್ದ ಬಸ್​ವೊಂದು ಮಥುರಾದಲ್ಲಿ...

NEW PRESIDENT FOR KPCC : ಕೆಪಿಸಿಸಿಗೆ ಪೂರ್ಣ ಪ್ರಮಾಣದ ಹೊಸ ಅಧ್ಯಕ್ಷರನ್ನು ಆದಷ್ಟು ಬೇಗ ನೇಮಕ ಮಾಡಲಿ

Bangalore News: ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ನನ್ನನ್ನು ನಾನು NEW PRESIDENT FOR KPCC ಎಂದು ಮಾಡಿ ಎಂದು ಹೇಳಿಲ್ಲ. ನಾವುಗಳೆಲ್ಲ ಸಚಿವರಾದ...

HOMEOWNERS NOTE TO THIEVES : ಸಂಕ್ರಾಂತಿಗೆ ಊರಿಗೆ ಹೋಗುವಾಗ ಜಾಣತನ ಮೆರೆದ ಮನೆ ಮಾಲೀಕ

Hyderabad News: ಈ ರೀತಿಯ ವಿಚಿತ್ರ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಜೊತೆಗೆ ಮನೆ ಮಾಲೀಕನ ಹಾಸ್ಯ ಮತ್ತು ಬುದ್ದಿವಂತಿಕೆಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.ಇಂತಹುದೇ...