Pune (Maharashtra) News:
ರಾಜ್ಯದಲ್ಲಿ ಒಟ್ಟು 192 GUILLAIN BARRE SYNDROME (GBS) ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಲ್ಲಿ 167 ಪ್ರಕರಣಗಳು ದೃಢಪಟ್ಟಿವೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಸೋಮವಾರ ವರದಿ ಮಾಡಿದೆ.
ಪ್ರಸ್ತುತ, 48 ರೋಗಿಗಳು ತೀವ್ರ ನಿಗಾ ಘಟಕದಲ್ಲಿ (ICU), 21 ಜನರು ವೆಂಟಿಲೇಟರ್‌ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರೆ, 91 ರೋಗಿಗಳನ್ನು ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ
7 people died of Guilan Baa Syndrome:
ಇದಲ್ಲದೇ ಅಧಿಕಾರಿಗಳ ಪ್ರಕಾರ, ಏಳು ಸಾವುಗಳು ವರದಿಯಾಗಿದ್ದು, ಅದರಲ್ಲಿ ಒಂದು ಜಿಬಿಎಸ್ ಎಂದು ದೃಢಪಟ್ಟಿದೆ. ಉಳಿದ ಆರು ಸಾವುಗಳು ಇನ್ನೂ ಶಂಕಿತವಾಗಿಯೇ ಇವೆ. GUILLAIN BARRE SYNDROME(GBS) ರಾಜ್ಯದ ಹಲವೆಡೆ ಹರಡಿದೆ.
ಇದರಲ್ಲಿ ಪುಣೆ ಮಹಾನಗರ ಪಾಲಿಕೆ (PMC)ಯಿಂದ 39, PMC ಪ್ರದೇಶದಲ್ಲಿ ಹೊಸದಾಗಿ ಸೇರ್ಪಡೆಯಾದ ಹಳ್ಳಿಗಳಿಂದ 91, ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ (PCMC) ನಿಂದ 29, ಪುಣೆ ಗ್ರಾಮೀಣದಿಂದ 25 ಮತ್ತು ಇತರ ಜಿಲ್ಲೆಗಳಿಂದ 8 ಪ್ರಕರಣಗಳು ವರದಿಯಾಗಿವೆ ಎಂದು ಇಲಾಖೆ ತಿಳಿಸಿದೆ.
Corporation from which water samples were collected:
ಕುಡಿಯಲು ಯೋಗ್ಯವಲ್ಲದ ನೀರಿನ ಮಾದರಿಗಳನ್ನು ಸಂಗ್ರಹಿಸಿದ ಪುಣೆ ಮಹಾನಗರ ಪಾಲಿಕೆ, ಅಪಾಯ ಅರಿತು ನೀರಿನ ಘಟಕಗಳ ವಿರುದ್ಧ ಕ್ರಮ ಕೈಗೊಂಡಿದೆ.
GUILLAIN BARRE SYNDROME ಕೆಲವು ನೀರಿನ ಘಟಕಗಳು ಕಾರ್ಯನಿರ್ವಹಿಸಲು ಸರಿಯಾದ ಅನುಮತಿಯನ್ನೂ ಹೊಂದಿಲ್ಲದಿದ್ದರೆ, ಉಳಿದವುಗಳು ಎಸ್ಚೆರಿಯಾ ಕೋಲಿ ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡಿದ್ದವು.
ಇನ್ನುಳಿದ ಕೆಲವು ಘಟಕಗಳು ಮಾಲಿನ್ಯ ನಿಯಂತ್ರಣಕ್ಕೆ ಸೋಂಕುನಿವಾರಕ ಹಾಗೂ ಕ್ಲೋರಿನ್ ಅನ್ನು ಬಳಸುತ್ತಿರಲಿಲ್ಲ.
Another 48 patients treated in ICU:
GUILLAIN BARRE SYNDROME ರಾಜ್ಯ ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪೀಡಿತ ಪ್ರದೇಶಗಳಲ್ಲಿ ಕಣ್ಗಾವಲು ತೀವ್ರಗೊಳಿಸಿದ್ದಾರೆ. ಇದಕ್ಕೂ ಮೊದಲು ಫೆಬ್ರವರಿ 6ರಂದು ಪುಣೆ ಮಹಾನಗರ ಪಾಲಿಕೆಯು, ನಾಂದೇಡ್ ಗ್ರಾಮ, ಧಯಾರಿ ಮತ್ತು ಪುಣೆ ನಗರದ ಸಿಂಹಗಡ್ ರಸ್ತೆಯಲ್ಲಿರುವ ಪಕ್ಕದ ಪ್ರದೇಶಗಳಲ್ಲಿ 30 ಖಾಸಗಿ ನೀರು ಸರಬರಾಜು ಘಟಕಗಳನ್ನು ಮುಚ್ಚಿತ್ತು.
ಪ್ರಸ್ತುತ, 48 ರೋಗಿಗಳು ತೀವ್ರ ನಿಗಾ ಘಟಕದಲ್ಲಿ (ICU), 21 ಜನರು ವೆಂಟಿಲೇಟರ್‌ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರೆ, 91 ರೋಗಿಗಳನ್ನು ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ಈ ಪ್ರದೇಶಗಳನ್ನು ಸಾಂಕ್ರಾಮಿಕದ ಕೇಂದ್ರಬಿಂದು ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಲ್ಲಿ ಈ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಫೆ. 6ರಂದು ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದರು.
ಇದನ್ನು ಓದಿರಿ : Ranveer Allahbadia faces repercussions as he loses followers on social accounts