Amaravati (Andhra Pradesh) News:
ಭಾನುವಾರ ಗುಂಟೂರಿನ ಸರ್ಜಾರಿ ಜನರಲ್ ಆಸ್ಪತ್ರೆಯಲ್ಲಿ ಕಮಲಮ್ಮ ಎಂಬವರು ಸಾವನ್ನಪ್ಪಿದ್ದರು. ಇದಕ್ಕೂ ಹತ್ತು ದಿನಗಳ ಹಿಂದೆ 10 ವರ್ಷದ ಬಾಲಕ ಶ್ರೀಕಾಕುಳಂನ ಖಾಸಗಿ ವೈದ್ಯಕೀಯ ಕಾಲೇಜ್ನಲ್ಲಿ ಸಾವನ್ನಪ್ಪಿದ್ದ ಎಂದು ಅವರು ಮಾಹಿತಿ ನೀಡಿದರು.ಗಿಲೆನ್ ಬರೆ ಸಿಂಡ್ರೋಮ್ ಕಾಯಿಲೆ (ಜಿಬಿಎಸ್)ಗೆ ANDHRA ಪ್ರದೇಶದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಕಳೆದ 10 ದಿನಗಳಲ್ಲಿ 45 ವರ್ಷದ ಮಹಿಳೆ ಮತ್ತು ಓರ್ವ ಬಾಲಕ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಸಚಿವ ಸತ್ಯ ಕುಮಾರ್ ಯಾದವ್ ತಿಳಿಸಿದ್ದಾರೆ.2024ರಲ್ಲಿ 267 ಪ್ರಕರಣಗಳು ದಾಖಲಾಗಿದ್ದು, ವರ್ಷದ ಮೊದಲ ಅವಧಿಯಲ್ಲಿ 141 ಹಾಗೂ ಎರಡನೇ ಅವಧಿಯಲ್ಲಿ 126 ಪ್ರಕರಣಗಳು ವರದಿಯಾಗಿದ್ದವು. ತಿಂಗಳಲ್ಲಿ ಸರಾಸರಿ 25 ಪ್ರಕರಣಗಳು ದಾಖಲಾಗಿದ್ದು, ನಿಯಮಿತ ಚಿಕಿತ್ಸೆಗಳ ಮೂಲಕ ನಿರ್ವಹಿಸಲಾಗಿದೆ.
ಗಂಭೀರ ಪ್ರಕರಣದಲ್ಲಿ ಹಿಮೋಗ್ಲೋಬಿನ್ ಇಂಜೆಕ್ಷನ್ ಮತ್ತು ಐಸಿಯು ದಾಖಲಾತಿ ನಡೆಸಲಾಗಿದೆ ಎಂದು ಸಚಿವರು ಹೇಳಿದರು.ಸದ್ಯ ರಾಜ್ಯದಲ್ಲಿ 17 ಜಿಬಿಎಸ್ ಪ್ರಕರಣಗಳಿವೆ. ಇದು ಸಾಂಕ್ರಾಮಿಕವಲ್ಲದ ರೋಗವಾಗಿದ್ದು, ಲಕ್ಷ ಜನಸಂಖ್ಯೆಯಲ್ಲಿ ಶೇ 2ರ ಪ್ರಮಾಣದಲ್ಲಿರುತ್ತದೆ.
ಇದರಿಂದ ಹಠಾತ್ ಸಾವು ಸಂಭವಿಸುವುದಿಲ್ಲ. ಸಾಮಾನ್ಯ ರೋಗವಾಗಿದೆ ಎಂದಿದ್ದಾರೆ.ಜಿಬಿಎಸ್ಗೆ ಕಳೆದೆರಡು ದಿನದ ಹಿಂದೆ ನಾಗ್ಪುರ ಮತ್ತು ಕೊಲ್ಹಾಪುರದಲ್ಲಿ ತಲಾ ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಮಹಾರಾಷ್ಟ್ರ, ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯದಲ್ಲಿ ಈ ಸೋಂಕು ವರದಿಯಾಗಿದೆ.
What is GBS?: ಪ್ರತಿರೋಧಕ ವ್ಯವಸ್ಥೆಯ ನರಗಳ ಮೇಲೆ ದಾಳಿ ಮಾಡಬಲ್ಲದು. ಇದರಿಂದಾಗಿ ರೋಗಿ ಓಡಾಡುವುದು ಮತ್ತು ಉಸಿರಾಡುವುದು ಕಷ್ಟವಾಗುತ್ತದೆ. ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ಅಪಾಯಕಾರಿ.
ಈ ಲಕ್ಷಣಗಳು ಕಂಡು ಬಂದಾಕ್ಷಣ ವೈದ್ಯರ ಬಳಿ ಕರೆತರುವುದು ಅಗತ್ಯ.ಗಿಲೆನ್ ಬರೆ ಸಿಂಡ್ರೋಮ್ ಕಾಯಿಲೆ ಈ ವರ್ಷದ ಆರಂಭದಿಂದ ದೇಶದಲ್ಲಿ ಕಂಡು ಬರುತ್ತಿದೆ. ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಇದೊಂದು ರೀತಿಯ ವಿಭಿನ್ನ ಬಗೆಯ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಚಲನಶೀಲ ನರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.