ಡಿ.ಗುಕೇಶ್, ಸದ್ಯ ವಿಶ್ವವೇ ಭಾರತದತ್ತ ತಿರುಗಿ ನೋಡುವಂತ ಸಾಧನೆ ಮಾಡಿ ಬೀಗಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲಿ ವಿಶ್ವ ಚೆಸ್ ಚಾಂಪಿಯನ್ಶಿಪ್ ಗೆದ್ದ ಕೀರ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಅವರ ಪರಿಶ್ರಮಕ್ಕೆ, ಶ್ರದ್ಧೆಗೆ ಹಾಗೂ ಚೆಸ್ ಆಡಿದ ವೈಖರಿಗೆ ಇಡೀ ವಿಶ್ವವೇ ಮಾರು ಹೋಗಿದೆ. ಅವರ ಸಾಧನೆ ಇಷ್ಟೆಲ್ಲಾ ಮಾತನಾಡುತ್ತಿರುವಾಗ ಸದ್ಯ ಭಾರತದಲ್ಲಿ ಗುಕೇಶ್ ಯಾವ ರಾಜ್ಯದವನು ಎಂಬುದರ ಗೊಂದಲವೊಂದು ಹುಟ್ಟಿಕೊಂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗುಕೇಶ್ ಸಾಧನೆಯು ಚೆನ್ನೈ ನಗರವನ್ನು ಚೆಸ್ನ ಜಾಗತಿಕ ರಾಜಧಾನಿ ಎಂದು ಮತ್ತೆ ಸಾಬೀತುಪಡಿಸಿದೆ ಎಂದು ಸ್ಟಾಲಿಟ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ವಿಶ್ವಕ್ಕೆ ಮತ್ತೊಬ್ಬ ಚಾಂಪಿಯನ್ನನ್ನು ಕೊಡುವ ಮೂಲಕ ಚೆನ್ನೈ ಜಾಗತಿಕ ಚೆಸ್ ರಾಜಧಾನಿಯಾಗಿದೆ. ತಮಿಳುನಾಡು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಗುಕೇಶ್ ವಿಚಾರವಾಗಿ ಈಗ ಎರಡು ರಾಜ್ಯಗಳ ಸಿಎಂಗಳು ಎಕ್ಸ್ ಖಾತೆಯಲ್ಲಿ ಪೋಸ್ಟ್ ಫೈಟ್ ನಡೆಸಿದ್ದಾರೆ. ಗುಕೇಶ್ ನಮ್ಮ ರಾಜ್ಯದವನು ಎಂದು ಹೆಮ್ಮೆಯಿಂದ ತಮಿಳುನಾಡಿನ ಸಿಎಂ ಎಂ ಕೆ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ. ಮತ್ತೊಂದು ಕಡೆ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಕೂಡ ಗುಕೇಶ್ ತೆಲುಗು ಹುಡುಗ ಎಂದು ಪೋಸ್ಟ್ ಹಾಕಿದ್ದಾರೆ. ಗುಕೇಶ್ ಸಾಧನೆಯ ಕ್ರೆಡಿಟ್ ಪಡೆಯಲು ಎರಡೂ ರಾಜ್ಯಗಳು ಫೈಟ್ ನಡೆಸಿವೆ.
ಒಂದು ಕಡೆ ಸ್ಟಾಲಿನ್ ಎಕ್ಸ್ ಖಾತೆಯಲ್ಲಿ ಹೀಗೆ ಪೋಸ್ಟ್ ಮಾಡಿದರೆ ಮತ್ತೊಂದು ಕಡೆ ಚಂದ್ರಬಾಬು ನಾಯ್ಡು ಕೂಡ ಸ್ಟಾಲಿನ್ ಪೋಸ್ಟ್ ಹಾಕಿದ ಎರಡೇ ನಿಮಿಷದಲ್ಲಿ ತಾವು ಕೂಡ ಟ್ವೀಟ್ ಮಾಡಿದ್ದಾರೆ. ನಮ್ಮದೇ ತೆಲುಗು ಹುಡುಗನಿಗೆ ಹಾರ್ದಿಕ ಅಭಿನಂದನೆಗಳು ಎಂದು ಚಂದ್ರಬಾಬು ನಾಯ್ಡು ಟ್ವೀಟ್ ಮಾಡಿದ್ದಾರೆ.
ಹಾಗಾದರೆ ಗುಕೇಶ್ ನಿಜಕ್ಕೂ ಯಾವ ರಾಜ್ಯಕ್ಕೆ ಸೇರಿದವನು ಎಂಬ ಪ್ರಶ್ನೆಯೊಂದು ಸರಳವಾಗಿ ಮೊಳಕೆಯೊಡೆಯುತ್ತದೆ. ಗುಕೇಶ್ ಮೂಲತಃ ಆಂಧ್ರಪ್ರದೇಶದವರು. ಅವರು ತಮಿಳುನಾಡಿನಲ್ಲಿ ಹುಟ್ಟಿ ಬೆಳೆದಿದ್ದಾರೆ.