ಶಿವಮೊಗ್ಗದಲ್ಲಿ ಕರಶುಲ ಹಾಗೂ ಪುಷ್ಪಸಿರಿ ಮೇಳ ನಡೆಯುತ್ತಿದ್ದು,HANDICRAFT AND FLOWER SHOW ಹೂವುಗಳಿಂದ ರಾಷ್ಟ್ರಕವಿ ಕುವೆಂಪುರವರ ಕುಪ್ಪಳ್ಳಿಯ ಮನೆಯ ಪ್ರತಿಕೃತಿ, ಸೊರಬ ಭಾಗದ ಚಂದ್ರ ಗುತ್ತಿಯ ರೇಣುಕಾಂಬ ದೇವಿಯ ದೇವಾಲಯವನ್ನು ಮಾಡಲಾಗಿದೆ.
ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮೂರು ದಿನಗಳ ಕಾಲ ಮಲೆನಾಡಿಗರ ಅಭಿರುಚಿಗೆ ತಕ್ಕಂತೆ ವಿವಿಧ ಹೂವುಗಳಿಂದ ನಿರ್ಮಾಣ ಮಾಡಿರುವ ರಾಷ್ಟ್ರಕವಿ ಕುವೆಂಪುರವರ ಕುಪ್ಪಳ್ಳಿಯ ಮನೆಯ ಪ್ರತಿಕೃತಿ, ಸೊರಬ ಭಾಗದ ಚಂದ್ರ ಗುತ್ತಿಯ ರೇಣುಕಾಂಬ ದೇವಿಯ ದೇವಾಲಯ, ಗರಿಬಿಚ್ಚಿ ಕುಣಿಯುತ್ತಿರುವ ನವಿಲು, ಪ್ರವೇಶ ದ್ವಾರದಲ್ಲಿಯೇ ಇರುವ ಐ-ಲವ್ -ಯು ಶಿವಮೊಗ್ಗದ ಸೆಲ್ಫಿ ಬೂತ್ ಸೇರಿದಂತೆ ವಿವಿಧ ಕರಕುಶಲ ಕರ್ಮಿಗಳಿಂದ ವಿವಿಧ ಸ್ಟಾಲ್ಗಳನ್ನು ತೆರೆಯಲಾಗಿದೆ.
ನಗರದ ಅಲ್ಲಮಪ್ರಭು ಮೈದಾನದಲ್ಲಿ ಮೂರು ದಿನಗಳಕಾಲ ಮಲೆನಾಡ ಕರಕುಶುಲ ಹಾಗೂ HANDICRAFT AND FLOWER SHOW ಮಲೆನಾಡಿಗರ ಗಮನ ಸೆಳೆದಿದೆ.
Shining Renukamba Gudi:
ಜಿಲ್ಲೆಯ ಎಲ್ಲ ತಾಲೂಕುಗಳಿಂದ ರೈತರು ಬೆಳೆದ ವಿವಿಧ ಹಣ್ಣುಗಳ ಹಾಗೂ ತರಕಾರಿಗಳ HANDICRAFT AND FLOWER SHOW ನಡೆಸಲಾಗುತ್ತಿದೆ. ಇದರ ಜೊತೆಗೆ ಮಲೆನಾಡಿನ ಕರಕುಶಲವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದೆ. ಇದರ ಸದುಪಯೋಗವನ್ನು ಜಿಲ್ಲೆಯ ಜನತೆ ಪಡೆದುಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೆಶಕರಾದ ಸವಿತ ಅವರು ಮನವಿ ಮಾಡಿದ್ದಾರೆ.
HANDICRAFT AND FLOWER SHOW ಕುಪ್ಪಳ್ಳಿಯ ಮನೆ, ನವಿಲು, ರೇಣುಕಾಂಬ ದೇವಿಯ ಗುಡಿ ಹಾಗು ಐ ಲವ್ಯು ಶಿವಮೊಗ್ಗ ಎಲ್ಲವು ಸೇರಿ ಒಟ್ಟು 4.87 ಲಕ್ಷದ ಹೂವುಗಳಿಂದ ನಿರ್ಮಾಣ ಮಾಡಲಾಗಿದೆ. ಇವುಗಳು ಆಕರ್ಷಣೆಯ ಕೇಂದ್ರವಾಗಿವೆ. ಪುಷ್ಪ ಸಿರಿಯ ವಿವಿಧ ಪ್ರತಿಕೃತಿಯ ಸುತ್ತ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳಿವೆ. ಇದನ್ನೂ ಈ ಜರ್ಮನ್ ಟೆಂಟ್ ಹೊರ ಭಾಗದಲ್ಲಿ ವಿವಿಧ ಕರ್ಮಷಿಯಲ್ಗೆ ಅವಕಾಶ ಮಾಡಿಕೊಡಲಾಗಿದೆ.
Echal, who raised the voice of the village:
HANDICRAFT AND FLOWER SHOW ಈಚಲ ಸ್ಟಾಲ್ನ ಸಂಧ್ಯಾ ಅವರು ಮಾತನಾಡಿ, “ಈಚಲ ಹಸೆಯನ್ನು ನಾನು ತಂದಿದ್ದೇನೆ. ಈಗಿನ ಕಾಲದಲ್ಲಿ ಈಚಲು ಚಾಪೆ, ಈಚಲ ಹಸೆ ಅಂದ್ರೆ ಯಾರಿಗೂ ಗೂತ್ತಿಲ್ಲ. ಇದು ಪರಿಸರ ಸ್ನೇಹಿಯಾಗಿದೆ. ಇದನ್ನು ಸ್ಥಳೀಯ ಅಜ್ಜಿರವರು ಮಾಡುತ್ತಿದ್ದಾರೆ. ಈಚಲು ಸಾಗರದ ತುಮರಿ ಭಾಗದಲ್ಲಿ ಹೆಚ್ಚಾಗಿ ಲಭ್ಯವಿದೆ. ಇದರಿಂದ ಈಚಲಿನ ವಸ್ತುಗಳು ನಶಿಸಿ ಹೋಗಬಾರದು ಎಂದು ಇದನ್ನು ತಂದು ಇಲ್ಲಿ ಮಾರಾಟ ಮಾಡುತ್ತಿದ್ದೇವೆ. ಇದಕ್ಕೆ ಬೇಡಿಕೆ ಇದೆ. ಆದರೆ ಈಚಲು ಮರ, ಗಿಡಗಳು ನಶಿಸಿ ಹೋಗುತ್ತಿವೆ. ಇದನ್ನು ಬಳಸಿ ಬಿಸಾಡಿದರು ಸಹ ಇದು ಗೊಬ್ಬರವಾಗುತ್ತದೆ. ಇದರ ಬಳಕೆ ಕಡಿಮೆ ಆಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
HANDICRAFT AND FLOWER SHOW ಭದ್ರಾವತಿಯ ನಾಗವೇಣಿ ಅವರು ಮಾತನಾಡಿ, “ನಾನು ಷುಪ್ಪ ಸಿರಿ ಮೇಳಕ್ಕೆ ಇದೇ ಮೊದಲ ಭಾರಿ ಆಗಮಿಸಿದ್ದು, ಇಲ್ಲಿ ಎಲ್ಲಾವು ಸಹ ನೋಡಲು ಸುಂದರವಾಗಿದೆ. ಮಣ್ಣಿನಿಂದ ಮಾಡಿದ ಕರಕುಶಲ ವಸ್ತುಗಳು, ಅನೇಕ ಸ್ಟಾಲ್ಗಳಿವೆ. ಅಲ್ಲದೆ ಚಾಟ್ಸ್ ಸ್ಟಾಲ್ ಸಹ ಇದೆ. ಕುವೆಂಪು ಅವರ ಮನೆ ಫ್ಲವರ್ ನಲ್ಲಿ ನಿರ್ಮಾಣ ಮಾಡಿದ್ದು ನೋಡಿ ಖುಷಿ ಆಯಿತು” ಎಂದರು.
“ಶಿವಮೊಗ್ಗದಲ್ಲಿ ನಡೆಯುತ್ತಿರುವ ಪುಷ್ಪ ಸಿರಿ ಮೇಳ ಚೆನ್ನಾಗಿ ನಡೆಯುತ್ತಿದೆ. ಇಲ್ಲಿ ಆರಂಭದಿಂದಲೂ ಕೊನೆ ತನಕ ಎಲ್ಲವು ಚೆನ್ನಾಗಿದೆ. ಇಲ್ಲಿ ನಮ್ಮನ್ನು ಸೆಳೆದಿದ್ದು ಕುವೆಂಪು ಅವರ ಕುಪ್ಪಳಿಯ ಮನೆ, ಚಂದ್ರಗುತ್ತಿ ದೇವಾಲಯ ಐ ಲವ್ಯು ಶಿವಮೊಗ್ಗ ತುಂಬಾ ಇಷ್ಟವಾಯಿತು. ಅಲ್ಲದೇ ವಿವಿಧ ಹಣ್ಣುಗಳು – ತರಕಾರಿಗಳನ್ನು ಒಂದೇ ಕಡೆ ನೋಡುವುದು ಸಂತಸ ತಂದಿದೆ. ನಾನು ಇದನ್ನೆಲ್ಲಾ ನೋಡಿ ಎಂಜಾಯ್ ಮಾಡಿದ್ದೇನೆ. ಬಂಜಾರ್ ಅವರ ವಸ್ತ್ರ, ಪೇಟಿಂಗ್ಸ್, ಕಲರ್ ಕಲರ್ ಹೂವಿನಲ್ಲಿ ಕುಪ್ಪಳ್ಳಿಯ ಮನೆ ನಿಜಕ್ಕೂ ಚೆನ್ನಾಗಿದೆ ಎಂದು ನೋಡುಗರಾದ” ಸವಿತಾ ಶರ್ವಿ ತಿಳಿಸಿದ್ದಾರೆ.
ಇದನ್ನು ಓದಿರಿ : JOWAR HEALTH BENEFITS FOR DIABETES:ತಜ್ಞರ ಸಲಹೆ.