Big Boss Season 11 News
‘ಬಿಗ್ ಬಾಸ್’, ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಬಹು ಭಾಷೆಗಳಲ್ಲಿ ಪ್ರಸಾರ ಕಾಣುವ ಈ ರಿಯಾಲಿಟಿ ಶೋಗೆ ಸಪರೇಟ್ ಫ್ಯಾನ್ ಬೇಸ್ ಇದೆ. ಅಭಿನಯ ಚಕ್ರವರ್ತಿ ಸುದೀಪ್ ನಿರೂಪಣೆಯಲ್ಲಿ ಮೂಡಿಬರುವ ಬಿಗ್ ಬಾಸ್ ಕನ್ನಡ ತನ್ನದೇ ಆದ ಮನ್ನಣೆ ಸಂಪಾದಿಸಿದೆ.
ಸೀಸನ್ 11 ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಹಳ್ಳಿ ಹೈದ HANUMANTHU ವಿಜೇತರಾಗಿ ಹೊರಹೊಮ್ಮಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಅಭಿನಂದೆಗಳ ಮಹಾಪೂರ ಹರಿಸಿದ್ದಾರೆ. ಜೊತೆಗೆ ತಮ್ಮ ಮೆಚ್ಚಿನ ಸ್ಪರ್ಧಿ ಮೇಲೆ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ. ಹಳ್ಳಿ ಹೈದ HANUMANTHU 5.29 ಕೋಟಿಗೂ ಅಧಿಕ ಮತ ಪಡೆದು ಬಿಗ್ ಬಾಸ್ ವಿನ್ನರ್ ಆಗಿದ್ದಾರೆ.
Hanumantu win:
ತಮ್ಮ ಮುಗ್ಧತೆಯಿಂದಲೇ ಸದ್ದು ಮಾಡಿದ ಸೀಸನ್ 11ರ ಸ್ಪರ್ಧಿಯೆಂದ್ರೆ HANUMANTHU. ಮಾತು ಕಡಿಮೆ ಆದ್ರೂ ತೂಕದ ಮಾತು, ಬುದ್ಧಿವಂತಿಕೆ ಮತ್ತು ಪ್ರಬುದ್ಧತೆಯ ಮಾತು ಇವರದ್ದು ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಫಿನಾಲೆಗೆ ತಲುಪಿದ ಮೊದಲ ಸ್ಪರ್ಧಿಯಾಗಿದ್ದರು. ಕಂಪ್ಲೀಟ್ ಟಾಸ್ಕ್ಗಳಿಂದಲೇ ತುಂಬಿದ್ದ ವಾರದಲ್ಲಿ ಅತ್ಯುತ್ತಮ ಪ್ರದರ್ಶನ ಕೊಟ್ಟು, ತಮ್ಮ ಸಾಮರ್ಥ್ಯ ಸಾಬೀತುಪಡಿಸಿ, ಫಿನಾಲೆಗೆ ಎಂಟ್ರಿ ಕೊಟ್ಟಿದ್ದ HANUMANTHU ಅವರೀಗ ಟ್ರೋಫಿ ಗೆದ್ದಿದ್ದಾರೆ.
Last winner to receive the trophy from Sudeep:
ಬಿಗ್ ಬಾಸ್ ಸೀಸನ್ 11 ಆರಂಭವಾದ ಕೆಲವೇ ದಿನಗಳಲ್ಲಿ ಇದು ನನ್ನ ನಿರೂಪಣೆಯಲ್ಲಿ ಮೂಡಿ ಬರಲಿರುವ ಕೊನೆ ಶೋ ಎಂದು ಕನ್ನಡ ಚಿತ್ರರಂಗದ ಅತ್ಯಂತ ಬೇಡಿಕೆಯ ನಟ ಸುದೀಪ್ ಘೋಷಿಸಿದ್ದರು. ತಮ್ಮ ಕೊನೆಯ ಕಿಚ್ಚನ ಪಂಚಾಯ್ತಿ ಪ್ರಸಾರ ಕಂಡ ಸಂದರ್ಭದಲ್ಲೂ ಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿದ್ದರು.
ಮುಂದಿನ ಸೀಸನ್ ಯಾರು ನಡೆಸಿಕೊಡಲಿದ್ದಾರೆ ಅನ್ನೋದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಸೀಸನ್ 11 ಸುದೀಪ್ ನಿರೂಪಣೆಯಲ್ಲಿ ಮೂಡಿಬಂದ ಕೊನೆ ಸೀಸನ್ ಆಗಿದ್ದು, HANUMANTHU ಸುದೀಪ್ ಕೈಯಿಂದ ಟ್ರೋಫಿ ಸ್ವೀಕರಿಸಿದ ಕೊನೆ ವಿಜೇರಾಗಿ ಹೊರಹೊಮ್ಮಿದ್ದಾರೆ.
Popular contestants who reached Bigg Boss finale are:
ರಜತ್ ಕಿಶನ್, ಮೋಕ್ಷಿತಾ, ಹನುಮಂತು, ತ್ರಿವಿಕ್ರಮ್, ಮಂಜು, ಭವ್ಯಾ.
Trivikram Runner Up:
ಈ ರಿಯಾಲಿಟಿ ಶೋನ ಆರಂಭದಿಂದಲೂ ಟಫೆಸ್ಟ್ ಕಂಟಸ್ಟೆಂಟ್ ಎಂದು ಗುರುತಿಸಿಕೊಂಡವರು ತ್ರಿವಿಕ್ರಮ್. ಹೆಚ್ಚು ಮಾತನಾಡದೇ, ಆಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಆಟಕ್ಕೆ ನಿಂತ್ರೆ ಎದುರಾಳಿಗಳ ಎದೆಯಲ್ಲಿ ಭಯ ಹುಟ್ಟುತ್ತಿತ್ತು ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. ಮನೆಯವರ ಜೊತೆ ಬೆರೆತಿದ್ದ ಇವರ ಭವ್ಯಾ ಜೊತೆಗಿನ ಸ್ನೇಹ ಗಮನ ಸೆಳೆದಿದೆ.
Positions secured by finalists:
- ಮೊದಲ ಸ್ಥಾನ: ಹನುಮಂತು.
- ಎರಡನೇ ಸ್ಥಾನ: ತ್ರಿವಿಕ್ರಮ್.
- ಮೂರನೇ ಸ್ಥಾನ: ರಜತ್ ಕಿಶನ್.
- ನಾಲ್ಕನೇ ಸ್ಥಾನ: ಮೋಕ್ಷಿತಾ.
- ಐದನೇ ಸ್ಥಾನ: ಮಂಜು.
- ಆರನೇ ಸ್ಥಾನ: ಭವ್ಯಾ.
ಇದನ್ನು ಓದಿರಿ : BBK HANUMANTHA UNCLE PASSED AWAY : ಸಂಭ್ರಮ ಮನೆ ಮಾಡಬೇಕಿದ್ದ ಬಿಗ್ ಬಾಸ್ ಹನುಮಂತನ ಮನೆಯಲ್ಲಿ ಸೂತಕದ ಛಾಯೆ