spot_img
spot_img

ಮಾಲೀಕನಾಗಿ ಇದ್ದವನಿಗೆ ಭೀಕಾರಿಯ ಸ್ಥಿತಿ ಬಂದಿದೆ; ನಾಗಮಂಗಲ ಬಟ್ಟೆ ವ್ಯಾಪಾರಿ ಕಣ್ಣೀರು.!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಮಂಡ್ಯ: ನಾಗಮಂಗಲ ಗಣೇಶ ಮೆರವಣಿಗೆಯಲ್ಲಿ ನಡೆದ ಗಲಾಟೆಯಲ್ಲಿ ಭೀಮ್ ರಾಜ್ ಅನ್ನೋರ ಬಟ್ಟೆ ಶೋ ರೂಮ್ ಸುಟ್ಟು ಭಸ್ಮವಾಗಿದೆ. ಗಲಾಟೆ ನಡೆದ ಸ್ಥಳದಲ್ಲಿ ಸಾಧನಾ ಟೆಕ್ಸ್​ಸ್ಟೈಲ್ ಎಂಬ ಅಂಗಡಿ ಹಾಕಿಕೊಂಡಿದ್ದರು. ಇವರ ಅಂಗಡಿಗೆ ಕಿಡಿಗೇಡಿಗಳು ಬೆಂಕಿಯಿಟ್ಟು ವಿಕೃತಿ ಮೆರೆದಿದ್ದಾರೆ. ಪರಿಣಾಮ ಭೀಮ್ ರಾಜ್ ಅನ್ನೋರಿಗೆ 1.5 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅಂಗಡಿಯನ್ನು ಕಳೆದುಕೊಂಡ ಉದ್ಯಮಿ ಭೀಮ್ ರಾಜ್ ಬದುಕು ಬೀದಿಗೆ ಬಿದ್ದಿದ್ದು, ಕಣ್ಣೀರು ಇಡುತ್ತಿದ್ದಾರೆ.

ಭೀಮ್ ರಾಜ್ ಅವರ ಬಟ್ಟೆ ಉದ್ಯಮದಿಂದಲೇ ಅವರ ಜೀವನ ನಡೆಸುತ್ತಿದ್ದರು. ಅವರ ಬಟ್ಟೆ ಅಂಗಡಿ ಬಿಟ್ಟರೆ ಬೇರೇ ಏನೂ ಇಲ್ಲ. ಶೋ ರೂಂಗೆ ಬೆಂಕಿ ಹಾಕಿರುವ ಮಾಹಿತಿ ‌ಪಡೆದು ಸ್ಥಳಕ್ಕೆ ಬಂದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಲು ಬಂದಿದ್ರು. ಆ ವೇಳೆ 200 ಮಂದಿಯ ಗುಂಪು ಅವರ ಮೇಲೆ ಅಟ್ಯಾಕ್ ಮಾಡಿದ್ರು.

ಕೈಯಲ್ಲಿ ಬಾಟಲ್, ಮಾರಕಾಸ್ತ್ರ ಹಿಡಿದು ಅಟ್ಯಾಕ್ ಮಾಡಿದರು. ಪೊಲೀಸರ ಬಳಿ ಬರುವಂತೆ ಮನವಿ ಮಾಡಿಕೊಂಡರು. ಆದರೆ ಪೊಲೀಸರಿಗೂ ಅವರು ಅಟ್ಯಾಕ್ ಮಾಡಿದ್ದರಿಂದ ಸ್ಥಳಕ್ಕೆ ಬರಲು ಹಿಂದೇಟು ಹಾಕಿದರು. ಕೊನೆಗೆ ಅವರ ಮೇಲೆ ಕಿಡಿಗೇಡಿಗಳು ‌ ಹಲ್ಲೆ ಮಾಡಲು ಮುಂದೆ ಬಂದರು. ಆಗ ಅವರ ಪ್ರಾಣ ಉಳಿಸಿಕೊಳ್ಳಲು ಚಪ್ಪಲಿ ಬಿಟ್ಟು ಬರಿಗಾಲಲ್ಲೇ ಓಡಿ ಹೋಗಿ ಅವರ ಜೀವ ಉಳಿಸಿಕೊಂಡರು.

ನಾವು ಸಂಪೂರ್ಣ ಬೀದಿಗೆ ಬಂದಿದ್ದೇವೆ. 20 ವರ್ಷ ಹಿಂದಕ್ಕೆ ನಮ್ಮ ‌ಸ್ಥಿತಿ ಹೋಗಿದೆ. ನಮ್ಮ ಶೋ ರೂಂ ನಲ್ಲಿ ‌7 ಜನ ಕೆಲಸ ಮಾಡುತ್ತಿದ್ದರು. ಈಗ ನಾನೇ ಮತ್ತೊಬ್ಬರ ಬಳಿ ಕೆಲಸ ಮಾಡುವ ಸ್ಥಿತಿ ಬಂದಿದೆ ಎಂದು ಕನ್ನಡ ನ್ಯೂಸ್‌ಗಳ  ಮುಂದೆ ಕಣ್ಣೀರು ಇಟ್ಟಿದ್ದಾರೆ

WhatsApp Group Join Now
Telegram Group Join Now
Instagram Account Follow Now
spot_img

Related articles

ಎರಡನೇ ಟೆಸ್ಟ್‌ಗೆ ತಂಡ ಹೇಗೆ ಇರಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ ? ಸ್ಟಾರ್​ ಆಟಗಾರನಿಗೆ ಕೊಕ್​​̤!

ಬಾಂಗ್ಲಾದೇಶ ತಂಡ ಟೆಸ್ಟ್ ಮತ್ತು ಟಿ20 ಸರಣಿಗಾಗಿ ಭಾರತದ ಪ್ರವಾಸ ಕೈಗೊಂಡಿದೆ. ಈಗಾಗಲೇ ಟೀಮ್​ ಇಂಡಿಯಾ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ...

ತಿರುಪತಿ ವಿಚಾರ : ಡಿಸಿಎಂ ಪವನ್ ಕಲ್ಯಾಣ್‌ಗೆ ಕ್ಷಮೆ ಕೇಳಿದ ನಟ ಯಾರು ?

ತಿರುಪತಿ-ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಲಡ್ಡು ವಿಚಾರವಾಗಿ ಸಾಕಷ್ಟು ರೀಲ್ಸ್ ಗಳು ಮತ್ತು ಮೀಮ್ಸ್ ಗಳು ಹರಿದಾಡುತ್ತಿವೆ....

ನಿಮ್ಮ ಮನೆಯಲ್ಲಿರುವ ತುಪ್ಪ ಶುದ್ಧವಾಗಿದೆಯಾ ಕಲಬೆರಕೆವಾಗಿದೆಯಾ ? ಇಲ್ಲಿವೆ ಸರಳವಾದ ಉಪಾಯಗಳು.!

ತಿರುಪತಿ ಬಾಲಾಜಿಯ ಪ್ರಸಾದದಲ್ಲಿ ಕಲಬೆರಕೆ ಆಗಿದೆ ಎಂಬ ವಿಷಯ ತಿಳಿದಾಗಿನಿಂದ ತುಪ್ಪದ ವಿಚಾರದಲ್ಲಿ ಅನೇಕ ಸಂಶಯಗಳು ಮೂಡುತ್ತಿವೆ. ನಂದಿನಿ ತುಪ್ಪದ ಬಿಟ್ರೆ ಬೇರೆ ಯಾವ...

ಅಪ್ರಾಪ್ತ ಬಾಲಕಿಯರಿಗೆ ಮಾದರಿಯಾಗಿದ್ದಾಳೆ.! ತನ್ನ ಮದುವೆಯನ್ನೇ ನಿಲ್ಲಿಸಿದ ಬಾಲಕಿ!

ಬೀದರ್, ಕಲಬುರಗಿ: ಬಸವಕಲ್ಯಾಣ ತಾಲೂಕಿನ ಹಳ್ಳಿಯೊಂದರಲ್ಲಿ 9ನೇ ತರಗತಿ ಓದುತ್ತಿರುವ 14 ವರ್ಷದ ಈ ಬಾಲಕಿ ತನ್ನ ಮದುವೆಯನ್ನೇ ನಿಲ್ಲಿಸಿದ ಬಾಲಕಿ ದಿಟ್ಟ ಹೋರಾಟಗಾರ್ತಿ, ಇತರೆ...