Health Benefits That Apple News:
ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾದರೆ, ರಕ್ತಹೀನತೆಯ (ಅನಿಮಿಯಾ) ಅಪಾಯ ಹೆಚ್ಚಾಗುತ್ತದೆ. ಈ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ, ಅನಿಮಿಯಾ ಸಮಸ್ಯೆ ಪರಿಹಾರ ಲಭಿಸುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
APPLE ಹಣ್ಣು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. APPLE ತೂಕ ಇಳಿಸಿಕೊಳ್ಳಲು ಹಾಗೂ ಹೃದಯ ಕಾಯಿಲೆಯ ಅಪಾಯ ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. APPLE ದೇಹದಲ್ಲಿನ ಕಬ್ಬಿಣಾಂಶದ ಕೊರತೆ ತಡೆಯಲು ಸಹಾಯ ಮಾಡುತ್ತದೆ.
APPLE ಹಣ್ಣಿನಲ್ಲಿ ಫೈಬರ್, ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ ಹಾಗೂ ಉತ್ಕರ್ಷಣ ನಿರೋಧಕಗಳು ಹೇರಳವಾಗಿದೆ. ಇವುಗಳು ದೇಹವನ್ನು ಅನೇಕ ರೋಗಗಳಿಂದ ದೂರವಿಡಲು ಪೂಕರವಾಗಿವೆ.’ನೀವು ನಿತ್ಯ ಒಂದು APPLE ಸೇವಿಸಿದರೆ ನೀವು ವೈದ್ಯರಿಂದ ದೂರ ಉಳಿಯುತ್ತೀರಿ’ ಎನ್ನುವ ಹಿರಿಯರ ಮಾತನ್ನು ಕೇಳಿರಬೇಕು. ಈ ಮಾತು ಸಂಪೂರ್ಣವಾಗಿ ನಿಜವಾಗಿದೆ. APPLEಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. APPLE ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಅನೇಕ ರೋಗಗಳು ಬರುವುದನ್ನು ತಡೆಯಬಹುದು.
What does the study say?:ಹೀಗಾಗಿ ವಿವಿಧ ಕಾಯಿಲೆಗಳನ್ನು ತಡೆಯಲು ತುಂಬಾ ಉಪಯುಕ್ತವಾಗಿವೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿ ಬಲಪಡಿಸುತ್ತದೆ. ಪೊಟ್ಯಾಸಿಯಮ್ ಅಧಿಕ ರಕ್ತದೊತ್ತಡ ನಿಯಂತ್ರಣ ಮಾಡುತ್ತದೆ. ಫೈಬರ್ ಮಲಬದ್ಧತೆ ಹಾಗೂ ಬೊಜ್ಜುತನ ತೊಡೆದುಹಾಕುತ್ತದೆ.
ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಟ್ಟುಕೊಳ್ಳುವುದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯವೂ ಕಡಿಮೆಯಾಗುತ್ತದೆ.NHI ನಡೆಸಿದ ಅಧ್ಯಯನದ ಪ್ರಕಾರ, APPLE ಹಣ್ಣಿನಲ್ಲಿ ಫೈಟೊಕೆಮಿಕಲ್‌ಗಳು ಸಮೃದ್ಧವಾಗಿವೆ. ಇದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೂರಕವಾಗಿದೆ.
APPLE ಹಣ್ಣಿನಲ್ಲಿ ವಿಟಮಿನ್ ಸಿ, ಪ್ರೋಟೀನ್, ಫ್ಲೇವನಾಯ್ಡ್ ಕ್ವೆರ್ಸೆಟಿನ್, ಉರಿಯೂತ ನಿವಾರಕ, ಫೈಬರ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಸೇರಿದಂತೆ ಹಲವು ಮಹತ್ವದ ಪೋಷಕಾಂಶಗಳು ಅಡಕವಾಗಿವೆ.
Benefit to overcome anemia:ಈ ಪರಿಸ್ಥಿತಿಯಲ್ಲಿ ಹಸಿವು ಕಡಿಮೆಯಾಗುತ್ತದೆ. ದೇಹದಲ್ಲಿ ತುಂಬಾ ಸುಸ್ತು ಕಂಡು ಬರುತ್ತದೆ. ಹೃದಯ ಬಡಿತ ಕಡಿಮೆಯಾಗುವುದು ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭವಾಗುತ್ತದೆ.
ಇವೆಲ್ಲಾ ಕಾಯಿಲೆಯಿಂದ ಮುಕ್ತಿ ಪಡೆಯಲು ನೀವು ನಿಯಮಿತವಾಗಿ ಒಂದು ಸೇಬು ಹಣ್ಣನ್ನು ಸೇವಿಸಬೇಕಾಗುತ್ತದೆ. APPLE ಹಣ್ಣು ತಿನ್ನುವುದರಿಂದ ದೇಹದಲ್ಲಿನ ಕಬ್ಬಿಣಾಂಶದ ಕೊರತೆ ದೂರವಾಗುತ್ತದೆ. ಬೆಳಗ್ಗೆ APPLE ಹಣ್ಣು ತಿನ್ನುವುದು ತುಂಬಾ ಪ್ರಯೋಜನಗಳು ಲಭಿಸುತ್ತವೆ. ಸಂಜೆ ಮತ್ತು ಸೂರ್ಯಾಸ್ತದ ನಂತರ APPLE ತಿನ್ನುವುದು ಸರಿಯಲ್ಲ ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.
Special Note to Readers:ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ.
ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.
ಇದ್ದನು ಓದಿರಿ :38TH NATIONAL GAMES:ಎಲ್ಲಾ ರಾಜ್ಯಗಳ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕರ್ನಾಟಕ!